ನಾನು ಮತ್ತು ಅವನು

Author : ಎಚ್.ಎಸ್. ಮುಕ್ತಾಯಕ್ಕ

Pages 68

₹ 7.00




Year of Publication: 1983
Published by: ಪ್ರಶಾಂತ ಪ್ರಕಾಶನ
Address: ರಾಯಚೂರು

Synopsys

ಲೇಖಕಿ ಎಚ್.ಎಸ್.ಮುಕ್ತಾಯಕ್ಕ ಅವರ ಕವನ ಸಂಕಲನ ‘ನಾನು ಮತ್ತು ಅವನು’. ಸಾವು, ಪ್ರೀತಿ, ಬದುಕು, ಏಕಾಕಿತನಗಳ ತೀವ್ರ ಭಾವನೆಗಳ ತಿರುಗಣಿಯಲ್ಲಿ ಸಿಕ್ಕ ಜೀವವೊಂದು ಶಬ್ದಗಳ ಮೂಲಕ ತನ್ನ ಅಸ್ತಿತ್ವಕ್ಕೊಂದು ರೂಪು ಪಡೆಯುತ್ತಿರುವ ಪ್ರಯತ್ನವೇ ನಾನು ಮತ್ತು ಅವನು. ಮುಕ್ತಾಯಕ್ಕ ಅವರ ಕಾವ್ಯದ ಸಹಜಗುಣ ಈ ಮುಕ್ತ ಅಭಿವ್ಯಕ್ತಿ. ಈ 'ಮುಕ್ತಿ' ಯಲ್ಲಿಯೇ ಕಾವ್ಯ 'ಬಂಧನ'ದ ಬಿಗಿಯೂ ಇದೆ. ನಮ್ಮ ಮುತ್ತಿನ ಹನಿಗಳು" ವಿಭಾಗದ ಅನೇಕ ಮುಕ್ತಕಗಳು, 'ನುಡಿದರೆ ಮುತ್ತಿನ ಹಾರದಂತಿರಬೇಕು' – ಎಂಬ ಉಕ್ತಿಯನ್ನು ನೆನಪಿಸುವಂತಿವೆ.

About the Author

ಎಚ್.ಎಸ್. ಮುಕ್ತಾಯಕ್ಕ
(28 January 1954)

ಎಚ್.ಎಸ್. ಮುಕ್ತಾಯಕ್ಕ ಅವರು 1954 ಜನವರಿ 28ರಂದು ಜನಿಸಿದರು. ಇವರು ಬರೆದ ಪ್ರಮುಖ ಕೃತಿಗಳೆಂದರೆ ನಾನು ಮತ್ತು ಅವನು, ನೀವು ಕಾಣಿರೇ ನೀವು ಕಾಣಿರೇ, ಡಕ್ಕೆಯ ಬೊಮ್ಮಣ್ಣ, ಶಿವಶರಣೆ ಮುಕ್ತಾಯಕ್ಕ, ಕಭೀ ಕಭೀ ಮುಂತಾದವು. ಇವ ನೀವು ಕಾಣಿರೇ ನೀವು ಕಾಣಿರೇ ಕವನ ಸಂಕಲನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ಮಮ್ಮ ಹೆಗ್ಗಡೆ ದತ್ತಿ ನಿಧಿ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ. ...

READ MORE

Related Books