‘ಉಲಿಯುವ ಹಕ್ಕಿ ಮತ್ತು ನಕ್ಷತ್ರ’ ಅಭಿಷೇಕ ಪೈ ಅವರ ಮೊದಲ ಕವನ ಸಂಕಲನ. ಚಿಟ್ಟೆಯೊಂದು ಹಾರಿ ಹೋದ ಹಾದಿಯನ್ನು ಹುಡುಕುವುದು ಎಷ್ಟು ಕಷ್ಟವೋ, ಹಾಗೇ ಕವಿತೆಯ ಜಾಡು ಆರಸುವುದೂ ಕಷ್ಟ ಎನ್ನುತ್ತಾರೆ ಕವಿ ಅಭಿಷೇಕ ಪೈ. ನಾವು ಕಂಡ, ಕೇಳಿದ, ಅನುಭವಕ್ಕೆ ದಕ್ಕಿದ ಎಷ್ಟೋ ವಿಷಯಗಳು ನಮ್ಮೊಳಗೆ ಬೆಳೆದು ವಿಶೇಷ ಹೊಳಹುಗಳೊಂದಿಗೆ ಒಂದು ದಿನ ಹೊರಹೊಮ್ಮುತ್ತವೆ. ಕಾವ್ಯ ಒಂದು ಚೆಂದದ ಅನುಭವ ಎಂಬಂತೆ ನನ್ನ ಒಂದಿಷ್ಟು ಅನುಭವಗಳು ಇಲ್ಲಿ ಅಕ್ಷರ ರೂಪ ಧರಿಸಿವೆ ಎಂಬುದು ಕವಿ ಅಭಿಷೇಕ ಪೈ ಅವರ ಅನಿಸಿಕೆ. ವಿಭಿನ್ನ ಶೈಲಿಯ ಹಲವು ಕವಿತೆಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.
ಅಭಿಷೇಕ ಪೈ ಅವರು ಉಡುಪಿಯ ಸಾಬ್ರಕಟ್ಟೆಯಲ್ಲಿ ಸೆಪ್ಟಂಬರ್ 8, 1995ರಲ್ಲಿ ಜನಿಸಿದರು. ತಂದೆ ನಿತ್ಯಾನಂದ ಪೈ, ತಾಯಿ ಚಂದ್ರಕಲಾ ಪೈ. ತಮ್ಮ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಅಲ್ಲೇ ಮುಗಿಸಿ, ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಪಡೆದು ಪ್ರಸ್ತುತ ಕರ್ನಾಟಕ ಬ್ಯಾಂಕ್ ನ ಪ್ರಧಾನ ಕಛೇರಿ ಮಂಗಳೂರಿನಲ್ಲಿ ಕೃಷಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಹಲವು ಕವಿತೆಗಳು, ಬರಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಸಾಹಿತ್ಯ ಕೃಷಿಯ ಜೊತೆಗೆ ಕಾರ್ಯಕ್ರಮ ನಿರೂಪಣೆ ಮತ್ತು ಚಾರಣ ಇವರ ಹವ್ಯಾಸ, ‘ಉಲಿವ ಹಕ್ಕಿ ಮತ್ತು ನಕ್ಷತ್ರ’ ಇವರ ಮೊದಲ ...
READ MORE