ಹಿರಿಯ ಲೇಖಕ ಡಾ.ವಸಂತ ಕುಷ್ಟಗಿ ಅವರು ಸಂಪಾದಿಸಿರುವ ಕವನಗಳ ಸಂಕಲನ "ಕೊರೊನ’. ಒಟ್ಟು 226 ಕವಿತೆಗಳಿವೆ. ರಾಜ್ಯದ ವಿವಿಧೆಡೆಯ ಕವಿಗಳಿಂದ ಬಂದ ಕವಿತೆಗಳನ್ನು ಸಂಕಲಿಸಲಾಗಿದೆ. ಕೊರೊನ ಸನ್ನಿವೇಶದಲ್ಲಿಇಲ್ಲಿಯ ಕವನಗಳು. ಕಾರಣ-ಪರಿಣಾಮಗಳನ್ನು ಮೌಲಿಕವಾಗಿ ಧ್ವನಿಸುತ್ತವೆ. ಅನೇಕ ಕವಿತೆಗಳಲ್ಲಿ ಕೊರೊನವನ್ನು ‘ಮಾರಿ ಮಹಾಮಾರಿ’ ಎಂತಲೂ ಆಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕ ಹಾಗೂ ವ್ಯಕ್ತಿಗತ ಕಷ್ಟ-ನಷ್ಟಗಳ ಅಭಿವ್ಯಕ್ತಿ ಇವೆ. ಪ್ರಕೃತಿ ವಿಕೋಪಗಳಿಗೆ ಮನುಷ್ಯನ ವರ್ತನೆಗಳೇ ಕಾರಣ ಎಂಬ ನಿರ್ಣಯಗಳೂ ಇವೆ. ಒಟ್ಟಿನಲ್ಲಿ,, ಕೊರೊನ ಸನ್ನಿವೇಶವನ್ನು ಸಮರ್ಥವಾಗಿ ಬಿಂಬಿಸುತ್ತವೆ.
ಸದ್ಯ ಕಲಬುರ್ಗಿ ನಿವಾಸಿಯಾಗಿರುವ ಕವಿ ವಸಂತ ಕುಷ್ಟಗಿ ಅವರು ಮೂಲತಃ ಹಿಂದಿನ ರಾಯಚೂರು ಜಿಲ್ಲೆ ಕುಷ್ಟಗಿಯವರು. ವಸಂತ ಕುಷ್ಟಗಿ ಅವರು ಜನಿಸಿದ್ದು 1936 ಅಕ್ಟೋಬರ್ 10ರಂದು. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದ ಅವರು ಪ್ರವೃತ್ತಿಯಿಂದ ಕವಿ-ಲೇಖಕ. ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ನಂತರ ಅವರು ಬೀದರಿನ ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು. ನಂತರ ಕಲಬುರ್ಗಿಯ ಎಂ.ಎಸ್.ಐ ಹಾಗೂ ಎನ್.ವಿ. ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಹಾಗೂ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ನಿವೃತ್ತಿ ನಂತರ ಸ್ವಾಮಿ ರಮಾನಂದ ತೀರ್ಥ ಸಂಶೋಧನಾ ಸಂಸ್ಥೆಯ ಗೌರವ ನಿರ್ದೇಶಕರಾಗಿದ್ದಾರೆ. ಅವರಿಗೆ ಕಡೆಂಗೋಡ್ಲು ...
READ MORE