‘ಬದುಕು ಬಣ್ಣದ ಬುಗುರಿ’ ಲೇಖಕ ಕೆ. ಪುಂಡಲೀಕ ನಾಯಕ ಅವರ ಕವನ ಸಂಕಲನ. ಈ ಕೃತಿಗೆ ಖ್ಯಾತ ಸಾಹಿತಿ ಡಾ.ಎಂ.ಜಿ. ದೇಶಪಾಂಡೆ ಮುನ್ನುಡಿ ಬರೆದಿದ್ದಾರೆ. ತಾವು ಕಂಡುಂಡ ಅನುಭವಗಳನ್ನು ಸ್ವಾರಸ್ಯಕರವಾಗಿ ಕವಿತೆಗಳಲ್ಲಿ ಬಡಿಸುವ ಸುಂದರ ಕಲೆಯನ್ನು ಪುಂಡಲೀಕ ನಾಯಕರು ಅರಿತುಕೊಂಡಿದ್ದಾರೆ ಎನ್ನುತ್ತಾರೆ ದೇಶಪಾಂಡೆ. ಜೊತೆಗೆ ಅಂದು ಸಂಖ್ಯೆ ಎಣಿಸಿ ಬದುಕು ಕಟ್ಟಿಕೊಂಡ ಅವರು ಇಂದು ಪದಗಳೆಣಿಸಿ ಬದುಕನ್ನು ಸಾರಸ್ವತ ಲೋಕದಲ್ಲಿ ಅರಳಿಸಿಕೊಂಡಿರುವುದು ಇವರ ಹೆಗ್ಗುರುತು ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಎಲ್ಲರ ಬದುಕು ಸಹ ಬಣ್ಣದ ಬುಗುರಿಗಳೇ, ಆ ಬದುಕುಗಳಲ್ಲಿ ಪ್ರೀತಿ-ವಿರಹವಿದೆ, ನಲಿವು-ನೋವಿದೆ, ಹುಟ್ಟು-ಸಾವಿದೆ, ಭಕ್ತಿ-ಶ್ರದ್ಧೆ ಇದೆ. ಇದನ್ನು ಅನುಭವಿಸಿ ಒಂದೆತ್ತರಕ್ಕೆ ನಿಂತು ತಮ್ಮ ಬದುಕನ್ನು ನಾವು ನೋಡಿಕೊಂಡಾಗ ಅದೊಂದು ಬದುಕು ಬಣ್ಣದ ಬುಗುರಿ ಎಂದರೆ ತಪ್ಪಾಗಲ್ಲ. ಇದು ಎಲ್ಲರೂ ಒಮ್ಮೆ ಓದಲೇಬೇಕಾದ ಕವನ ಸಂಕಲನ.
ಕೆ. ಪುಂಡಲೀಕ ನಾಯಕ್ ತಮ್ಮ ವೃತ್ತಿ ಬದುಕಿನಿಂದ ನಿವೃತ್ತಿ ಹೊಂದಿ , ಸಾಮಾಜಿಕ, ಧಾರ್ಮಿಕ ಚಟುವಟಿಕೆಯಲ್ಲಿ ನಿರಂತರವಾಗಿ ತಮ್ನನ್ನು ತಾವು ತೊಡಗಿಸಿಕೊಂಡವರು. ಸಾಮಾಜಿಕ ಜಾಲತಾಣಗಳಲ್ಲಿ ಕವಿತೆ ಬರೆಯುವ ಉತ್ಸಾಹವನ್ನು ತಳೆದ ಇವರು ತಮ್ಮ ಮೊದಲನೆ ಕವನ ಸಂಕಲನ ’ಕಿರು ಹೆಜ್ಜೆ’ಯನ್ನು ಹೊರತಂದರು ...
READ MORE