ಕವಯತ್ರಿ ವಾಣಿ ವಿಜಯ ಜೋಶಿ ಅವರ ಕವನ ಸಂಕಲನ- ‘ಪ್ರೀತಿ ಕಳೆದು ಹೋಗಿದೆ ಹುಡುಕಿ ಕೊಡ್ತೀರಾ? ಪ್ಲೀಸ್...’ ಸಾಹಿತಿ ಡಾ. ಡಾ. ಸ್ವಾಮಿರಾವ ಕುಲಕರ್ಣಿ ಅವರು ಕೃತಿಗೆ ಮುನ್ನುಡಿ ಬರೆದು ‘ಲೇಖಕಿಯ ಹೊಸ ಚಿಂತನೆ ಶಬ್ದಗಳ ಪ್ರಯೋಗ ದಿಂದ ಇಲ್ಲಿಯ ಕವಿತೆಗ:ಳು ಗಮನ ಸೆಳೆಯುತ್ತವೆ. ಸಂಸಾರ ಪಾರಮಾರ್ಥ,ಬದುಕು, ಪುರಾಣಗಳ,ಸಮನ್ವಯದ ಸಾಧನೆಯ ಹೆಜ್ಜೆಗಳನ್ನು ಕಾವ್ಯ ರಚನೆಯ ಹಾದಿಯಲ್ಲಿ ಕಾಣಬಹುದು. ಶಬರಿ, ರಾಮ, ದೇವರು, ಪ್ರಕೃತಿ,-ಪುರುಷ, ಮಳೆ,ಮರ,ಸೂರ್ಯ ಮುಂತಾದ ಪದಪುಂಜಗಳು ಉತ್ತಮ ಸಂಕೇತಗಳಾಗಿ ಬಳಕೆಯಾಗಿವೆ. ಹನಿಗವನ,ಗಜಲ್, ಸಾನೆಟ್, ವಚನ, ಉಗಾಭೋಗದ ಆಕಾರ ತಾಳಿವೆ. ಸಾಂಪ್ರದಾಯಿಕ ಮಾದರಿಯಲ್ಲಿಯೇ ಪರಂಪರೆಯ ಇತಿಮಿತಿಯನ್ನು ಮೀರಿದ ವೈಚಾರಿಕತೆಯ ಅನುಸಂಧಾನ ಹೆಜ್ಜೆಗಳಿವೆ. Sim ಹಳೆಯದು, handset ಹೊಸದು.ಅದೇ sim ಗೆ ಹೊಸ handset ಅದೇ ಆತ್ಮಕ್ಕೆ ಹೊಸ ದೇಹ ಇಲ್ಲಿ ಬಳಕೆಯಾಗುವ ಪದಗಳು ಅದರ ಹಿಂದಿನ ವಿಶೇಷಾರ್ಥ ಪ್ರಯೋಗಶೀಲ ಕವಿಗೆ ಮಾತ್ರ ಸಾಧ್ಯ. ಎಂದು ಪ್ರಶಂಸಿಸಿದ್ದಾರೆ.
ಲೇಖಕಿ ವಾಣಿ ಜೋಶಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಯಾದವಾಡದವರು. ಇಂಜಿನಿಯರಿಂಗ್ (ಎಲೆಕ್ಟ್ರಾನಿಕ್ಸ್ ಕಮ್ಯೂನಿಕೇಶನ್ಸ್) ಪದವೀಧರೆ. ಸದ್ಯ ಪುಣೆಯಲ್ಲಿ ವಾಸವಾಗಿದ್ದಾರೆ. ಕೃತಿಗಳು: ಪ್ರೀತಿ ಕಳೆದ್ಹೋಗಿದೆ, ಹುಡುಕಿ ಕೊಡ್ತೀರಾ ಪ್ಲೀಸ್...! ...
READ MORE