ಲೇಖಕಿ ಶಾಂತಾ ಪಸ್ತಾಪುರ ಅವರ ಮೊದಲನೇ ಕವನ ಸಂಕಲನ-ಮನದಾಳದ ಮಾತು. ವಸ್ತು ವೈವಿಧ್ಯತೆ, ನಿರೂಪಣೆಯಿಂದ ಇಲ್ಲಿಯ ಕವಿತೆಗಳು ಓದುಗರ ಗಮನ ಸೆಳೆಯುತ್ತವೆ. ಡಾ. ಗಿರಿಜಾ ಸಂಜಯ್ ಅವರು ಕೃತಿಗೆ ಮುನ್ನುಡಿ ಬರೆದು ‘ ಅವರ ಕವನಗಳಲ್ಲಿ ಎಲ್ಲರಿಗೂ ಅರ್ಥವಾಗುವ ಮನಮುಟ್ಟುವ ಸರಳತೆ ಇದೆ’ ಎಂದು ಪ್ರಶಂಸಿಸಿದ್ದಾರೆ.
ಕವಿಯತ್ರಿ ಶಾಂತಾ ಪಸ್ತಾಪುರ ಮೂಲತಃ ಬೀದರದವರು. ತಂದೆ ರಾಚಪ್ಪ ಭಂಡಾರ, ತಾಯಿ ಮಹಾದೇವಿ ಭಂಡಾರ. ಎಸ್.ಎಸ್.ಎಲ್.ಸಿ.ವರೆಗೆ ಶಿಕ್ಷಣ. ಕಲಬುರಗಿಯಲ್ಲಿ ವಾಸವಿದ್ದಾರೆ. ಕೃತಿಗಳು: ಮನದಾಳದ ಮಾತು (ಕವನ ಸಂಕಲನ) ಪಯಣ (ಪ್ರವಾಸ ಕಥನ), ನೆನಪಿನಂಗಳ (ಕವನ ಸಂಕಲನ), ಕುಸುಮ ಬಾಲೆ (ಕವನ ಸಂಕಲನ), ಗೆಳೆತಿಯರ ದಂಡು ಯೂರೋಪ್ ಗೆ ಹೋಗಿದ್ದು (ಪ್ರವಾಸ ಕಥನ), ಬದುಕೇ ಒಂದು ಕಥೆ (ಕಥಾ ಸಂಕಲನ), ಅನುಭವ -ಅಭಿವ್ಯಕ್ತಿ ಮತ್ತು ಚಿಂತನ (ಲಲಿತ ಪ್ರಬಂಧಗಳು) , ಕಾವ್ಯಧಾರೆ (ಅವರು ರಚಿಸಿ, ಹಾಡಿದ ಧ್ವನಿ ಸುರುಳಿ) ಪ್ರಶಸ್ತಿ-ಪುರಸ್ಕಾರಗಳು: ಬದುಕೆ ಒಂದು ಕಥೆ ಕಥಾ ಸಂಕಲನಕ್ಕೆ ಶ್ರೇಷ್ಠ ಸಾಹಿತ್ಯ ಕೃತಿ ಪ್ರಶಸ್ತಿ, ಅಖಿಲ ...
READ MORE