ಪ.ಮಾನು ಸಗರ ಅವರ ಕವನ ಸಂಕಲನವಿದು. ಜೀವನ ಪ್ರೀತಿ-ಸಂಘರ್ಷಗಳ ದ್ಯೋತಕವಾಗಿ ಕವನಗಳು ಧ್ವನಿಸಿವೆ. ಇಲ್ಲಿ 70 ಕವನಗಳಿವೆ. ಸಾಹಿತಿ ಸಾ.ಶಿ.ಮರುಳಯ್ಯ ಮುನ್ನುಡಿಯಲ್ಲಿ ಬರೆದು ’ಇಲ್ಲಿಯ ಕವಿತೆಗಳು ಜೀವನವನ್ನು ಗಂಭೀರವಾಗಿ ಪರಿಗಣಿಸಿ, ಪರಾಮರ್ಶಿಸುತ್ತವೆ. ಎಲ್ಲಕ್ಕಿಂತ ಅಧಿಕವಾಗಿ ಜೀವನ ಪ್ರೀತಿಯೇ ಕವಿತೆಗಳ ಜೀವಾಳವಾಗಿರುವುದು ಗಮನಾರ್ಹ’ ಎಂದಿದ್ದಾರೆ.
ಮುಂದುವರೆದು, ’ಜೀವನಕ್ಕಿಂತ ಮುಂಚೆ ಜೀವ ಇದೆಯಲ್ಲ.ಏನೂ ಇಲ್ಲ ಎಂದ ಮೇಲೆ ಏನಾದರೂ ಇರಬೇಕಲ್ಲ ಎಂದೂ ತರ್ಕಿಸುತ್ತಾರೆ. ಶೂನ್ಯ ಎಂದರೆ ಏನೂ ಇಲ್ಲವೆಂದಲ್ಲ; ಎಲ್ಲವೂ ಅದರಲ್ಲಿ ಒಳಗೊಂಡಿದೆ ಎನ್ನುವ ಮೂಲಕ ಬಸವಾದಿ ಶರಣರು, ದಾರ್ಶನಿಕರ ವಿಚಾರಗಳನ್ನು ಸಮರ್ಥಿಸುತ್ತಾರೆ. ಕೊನೆಗೆ ಶೂನ್ಯದಲ್ಲಿ ಲೀನವಾಗುವುದೇ ಜೀವನ? ಎಂದು ಪ್ರಶ್ನಿಸುವ ಮೂಲಕ ಶೂನ್ಯದ ಅಗಾಧತೆಯ ದಟ್ಟ ಅನುಭವ ನೀಡುತ್ತಾರೆ. ಇಲ್ಲಿಯ ಬಹುತೇಕ ಕವನಗಳು ಭಾವಗೀತಕ್ಕಿಂತ ಹೆಚ್ಚಾಗಿ ಚಿಂತನ ಸಾಮಗ್ರಿ ಉಳ್ಳದ್ದು’ ಎಂದು ಪ್ರಶಂಸಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಪ. ಮಾನು ಸಗರ, ಎಂ.ಎ. ಪದವೀಧರರು. ಅರಣ್ಯ ಇಲಾಖೆಯ ಆಡಳಿತ ವ್ಯವಸ್ಥಾಪಕರಾಗಿ ನಿವೃತ್ತಿಯಾಗಿದ್ದು, ಸಗರ ನಾಡ ಸಂಪದ (ಕವನ ಸಂಕಲನ) ಕಂಪನ (ಕವನ ಸಂಕಲನ), ಚಿತ್ತ-ಚಿತ್ತಾರ (ಹನಿಗವನಗಳು), ಪ್ರೊ. ಸೂಗಯ್ಯ ಹಿರೇಮಠ ಸಂಸ್ಮರಣಾ ಗ್ರಂಥ ’ಸಗರನಾಡಿನ ಮಾಣಿಕ್ಯ’ , ಧಾರ್ಮಿಕ, ಅಧ್ಯಾತ್ಮಿಕ, ಶರಣ ಚಳವಳಿ, ಜನಪದ ಸಾಹಿತ್ಯ ಹೀಗೆ ಹಲವು ಆಯಾಮಗಳನ್ನು ಬಿಂಬಿಸುವ ’ಸಗರನಾಡು ಪರಂಪರೆ’ ಕೃತಿ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಹಲವು ಪ್ರಶಸ್ತಿ-ಗೌರವಗಳು ಸಂದಿವೆ. ...
READ MORE