ನಡೆಯಲು ಬಂದಾಗಿನಿಂದಲೂ
ಗಡಿ ಸೀಮೆಗಳ ಅಳಿಸಿ
ಸುತ್ತಿ ಸುಳಿಯಬೇಕೆಂದಿದ್ದೇನೆ
ಎಷ್ಟೊಂದು ಬೇಲಿಗಳು
ತಲೆ ಎತ್ತಿವೆ ಇಲ್ಲಿ
ಎಂಬ ಸರಳ ಆತಂಕದ ಜೊತೆಗೆ
ನಾನು ಸತ್ಯವನ್ನು
ಸುಳ್ಳು ಮಾಡಲು ನೋಡಿದೆ
ಅದೆಷ್ಟು ಸತ್ಯಗಳು ಸುಳ್ಳಾಗಿ ಕುಳಿತಿದ್ದವು
ನಾನು ಬಿಳಿಯ ಮನಸ್ಸುಗಳ ಕಪ್ಪಾಗಿಸಲು ನೋಡಿದೆ
ಅದೆಷ್ಟು ಮನಸ್ಸುಗಳು ಕಪ್ಪಾಗಿಯೇ ಇದ್ದವು
ಹೀಗೆ ಶೀರ್ಷಿಕೆಯಿಲ್ಲದ ಹಲವಾರು ಕವಿತೆಗಳ ಗಂಭೀರ ಚಿಂತನೆಗೆ ಒಡ್ಡುತ್ತವೆ. ಒಳಿತು ಕೆಡುಕುಗಳ ಸಮಾಜದ ವಾಸ್ತವತೆಯನ್ನು ಕವಿತೆಗಳ ಮೂಲಕ ವಿವರಿಸುವ ಪ್ರಯತ್ನವನ್ನು ಕವಿ ಪ್ರಕಾಶ ಅವರು ಮಾಡಿದ್ದಾರೆ. ಇವರ ಕವಿತೆಗಳಲ್ಲಿ ಎಲ್ಲಾ ಅಕ್ಷರಗಳಿಗೆ ಜನಪದ ಕಸುವು ನೀಡಿದ್ದಾರೆ. ಸ್ಪಷ್ಟ ವಿಚಾರ, ಸಮರ್ಥ ನಿರೂಪಣೆ, ಅನಾವಶ್ಯಕ ಶಬ್ದಗಳ ತಡೆ ಹಾಗೂ ಓದುಗನ ಜೊತೆಗೆ ಒಂದು ಸಂವಾದ ಇವು ಡಾ. ಖಾಡೆಯವರ ಕಾವ್ಯದ ವೈಶಿಷ್ಟ್ಯ.
'ಇಂದಿನ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಯಾರೂ ಯಾರನ್ನೂ ನಂಬುವ ಸ್ಥಿತಿಯಲ್ಲಿಲ್ಲ. ಈ ಅಶಾಂತಿಯ ಪರ್ವದಲ್ಲಿ ಕಾವ್ಯ ಮಾತ್ರ ಶಾಂತಿಯನ್ನು ಅರಳಿಸಬಲ್ಲದು. ಕವಿ ಅಕ್ಷರಗಳನ್ನು ಬಿತ್ತಿ ಕಾವ್ಯದ ಬೆಳೆಯನ್ನು ಬೆಳೆಯುತ್ತಾನೆ. ಈ ಬೆಳೆ ಮಾತ್ರ ಜಗತ್ತನ್ನು ಉಳಿಸಬಲ್ಲದು. ಡಾ. ಖಾಡೆಯವರ ಭಾಂಡಾರದಲ್ಲಿ ಶಾಂತಿ ಬೀಜಗಳ ದೊಡ್ಡ ಉಗ್ರಾಣವೇ ಇದೆ. ಅವುಗಳನ್ನು ಜತನವಾಗಿ ಕಾಯ್ದಿರಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸವನ್ನು ಅವರು ಕಾವ್ಯ ಮಾಧ್ಯಮದ ಮೂಲಕ ಮಾಡುತ್ತಿದ್ದಾರೆ’ ಎಂದಿರುವ ಸರಜೂ ಕಾಟ್ಕರ್ ಅವರ ಮಾತುಗಳು ಕಾವ್ಯದ ಅತಂರಾಳವನ್ನು ವಿವರಿಸುತ್ತವೆ.
ಡಾ.ಪ್ರಕಾಶ ಗಣಪತಿ ಖಾಡೆಯವರು ಕನ್ನಡದ ಜಾನಪದ ಮತ್ತು ನವ್ಯಕಾವ್ಯದ ಕವಿ- ಲೇಖಕ. ಪ್ರಕಾಶ ಗಣಪತಿ ಖಾಡೆ ಅವರು ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ತೊದಲಬಾಗಿ ಗ್ರಾಮದಲ್ಲಿ 10-06-1965 ರಂದು ಜನಿಸಿದರು. ಓದಿದ್ದು ತೊದಲಬಾಗಿ, ಕೆರೂರ (ಬದಾಮಿ), ಇಳಕಲ್ಲ ಹಾಗೂ ಧಾರವಾಡಗಳಲ್ಲಿ. ಕನ್ನಡದಲ್ಲಿ ಎಂ.ಎ.ಪ್ರಥಮ ದರ್ಜೆಯಲ್ಲಿ ಪಾಸಾದ ಅವರು 2005ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ "ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ" ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದರು. ಬೈಲಹೊಂಗಲ,ಚಂದರಗಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ,ಬಾಗಲಕೋಟ ಸಕ್ರಿ ಪತ್ರಿಕೋದ್ಯಮ ವಿಭಾಗ ಮತ್ತು ಇಳಕಲ್ಲ ವಿಜಯ ಚಿತ್ರಕಲಾ ಸ್ನಾತಕೋತ್ತರ ಕಾಲೇಜು ...
READ MORE