‘ಚಿತ್ತಾರ’ ಸಬಿಹಾ ಭೂಮಿಗೌಡ ಅವರ ಕವನ ಸಂಕಲನವಾಗಿದೆ. ಪುರುಷ ಸಮಾಜದಿಂದ ಸ್ತ್ರೀಯರಿಗೆ ಆದ ಅನ್ಯಾಯಗಳನ್ನು ಕೆಲವು ಕೃತಿಗಳು ದಾಖಲಿಸಿದರೆ ಮತ್ತೆ ಕೆಲವು ಕೃತಿಗಳು ಜನಪ್ರಿಯವಾದ ಸ್ತ್ರೀಪರ ನಂಬಿಕೆಗಳನ್ನು ಪ್ರಕಟಿಸುತ್ತವೆ. ಈ ಎರಡೂ ಅತಿಗಳಲ್ಲದೆ ಸಬಿಹಾ ಅವರ ಕವನಗಳು ಹೆಣ್ಣಿನ ಅಂತರಂಗವನ್ನು ಸಮರ್ಥವಾಗಿ ತಿಳಿಸುತ್ತವೆ. 'ಹೆಣ್ಣುತನ'ದ ವಿಶಿಷ್ಟತೆಯನ್ನು ಬೆರಗಿನಿಂದ 'ಅಡುಗೆ', 'ಲಕ್ಷಣರೇಖೆಗಳು' ಅಂತಹ ಕವನಗಳು ಸಮರ್ಥವಾಗಿ ತಿಳಿಸುತ್ತವೆ.
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾಗಿರುವ ಸಬಿಹಾ ಭೂಮಿಗೌಡ ಮೂಲತಃ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗಜೇಂದ್ರಗಡದವರು. ತಂದೆ ಎಂ.ಆರ್. ಗಜೇಂದ್ರಗಡ, ತಾಯಿ ಸಾಹಿರಾ. ಎಂ.ಎ., ಪಿಎಚ್.ಡಿ. ಪಡೆದು ಪ್ರಾಧ್ಯಾಪಕಿಯಾಗಿ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು, ಕರಾವಳಿ ಲೇಖಕಿಯರು ಮತ್ತು ವಾಚಕಿಯರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಗೆ (ವಿಮರ್ಶೆ) 2001, ಚಿತ್ತಾರ (ಕಾವ್ಯ) 2004, ಕನ್ನಡ ಭಾಷಾ ಪ್ರವೇಶ (ಸಹಲೇಖಕರೊಂದಿಗೆ) 2005, ನಿಲುಮೆ (ವಿಮರ್ಶೆ) 2005, ನುಡಿಗವಳ ...
READ MOREಹೊಸತು- ಜುಲೈ-2005
ಮಹಿಳೆಯರು ರಚಿಸುತ್ತಿರುವ ಸಾಹಿತ್ಯದಲ್ಲಿ ಇಂದು ಕಾವ್ಯಕ್ಕೆ ಸಾಕಷ್ಟು ಪ್ರಾಮುಖ್ಯತೆ ಕಂಡುಬಂದಿದೆ. ಸ್ತ್ರೀವಾದಿ ಚಿಂತನೆಗಳ ಅಬ್ಬರದ ಸಾಹಿತ್ಯದ ಸೃಷ್ಟಿ ಒಂದು ಕಡೆ ಕಂಡುಬಂದರೆ ಮತ್ತೆ ಕೆಲವು ಲೇಖಕಿಯರು ತಮ್ಮದೇ ಆದ ವಿಶಿಷ್ಟ ಅನುಭವಗಳನ್ನು ಸೂಕ್ಷ್ಮವಾಗಿ ಚಿತ್ರಿಸಿರುವುದನ್ನು ಕಾಣಬಹುದು. ಈ ಸಾಲಿನಲ್ಲಿ ಸಬಿಹಾ ಭೂಮಿಗೌಡ ಸೇರುತ್ತಾರೆ. ಈ ಕೃತಿಗೆ ವೈದೇಹಿಯವರ ಪತ್ರರೂಪದ ಮುನ್ನುಡಿ ಇದೆ.
ಪುರುಷ ಸಮಾಜದಿಂದ ಸ್ತ್ರೀಯರಿಗೆ ಆದ ಅನ್ಯಾಯಗಳನ್ನು ಕೆಲವು ಕೃತಿಗಳು ದಾಖಲಿಸಿದರೆ ಮತ್ತೆ ಕೆಲವು ಕೃತಿಗಳು ಜನಪ್ರಿಯವಾದ ಸ್ತ್ರೀಪರ ನಂಬಿಕೆಗಳನ್ನು ಪ್ರಕಟಿಸುತ್ತವೆ. ಈ ಎರಡೂ ಅತಿಗಳಲ್ಲದೆ ಸಬಿಹಾ ಅವರ ಕವನಗಳು ಹೆಣ್ಣಿನ ಅಂತರಂಗವನ್ನು ಸಮರ್ಥವಾಗಿ ತಿಳಿಸುತ್ತವೆ. 'ಹೆಣ್ಣುತನ'ದ ವಿಶಿಷ್ಟತೆಯನ್ನು ಬೆರಗಿನಿಂದ 'ಅಡುಗೆ', 'ಲಕ್ಷಣರೇಖೆಗಳು' ಅಂತಹ ಕವನಗಳು ಸಮರ್ಥವಾಗಿ ತಿಳಿಸುತ್ತವೆ. ಕಾವ್ಯದ ಶಿಲ್ಪದ ದೃಷ್ಟಿಯಿಂದ, ರೂಪಕದ ಅಭಾವದಿಂದ ಕೆಲವು ಕವನಗಳು ಗದ್ಯದ ಮಟ್ಟದಲ್ಲಿಯೇ ನಿಲ್ಲುತ್ತವೆ. ಹಲವು ಉತ್ತಮ ಕವನಗಳಿವೆ.