`ಪುಟಕ್ಕಂಟಿದ ಪತಂಗ’ ವೀರೇಶ .ಬ.ಕುರಿ ಸೋಂಪೂರ ಅವರ ತನಗ ಕವನ ಸಂಕಲನವಾಗಿದೆ. ಇಡೀ ಲೋಕದ ಜ್ಞಾನ ಸಮಾಜದಲ್ಲಿ ಪ್ರಸ್ತುತ ಸಾಹಿತ್ಯಲೋಕದಲ್ಲಿ ನಡೆಯುತ್ತಿರುವ ಹಾಗುಹೋಗುಗಳನ್ನು ಎಳು ಪದಗಳ ನಾಲ್ಕು ಸಾಲುಗಳ ತನಗಗಳಲ್ಲಿ ಬಹಳಷ್ಟು ಸೊಗಸಾಗಿ ಬರೆದಿದ್ದಾರೆ. ಕನ್ನಡ ಸಾಹಿತ್ಯಲೋಕದಲ್ಲಿಯೇ ಎರಡನೇ ತನಗ ಕವಿತೆಗಳ ಸಂಕಲನ ಈ ಕೃತಿಯಾದ ಪುಟಕ್ಕಂಟಿದ ಪತಂಗ ಪುಸ್ತಕ ಇತಿಹಾಸದ ಪುಟಗಳಲ್ಲಿ ಸೇರಿಕೊಳ್ಳುವ ಕೃತಿಯಾಗಿದೆ.
ಕೊಪ್ಪಳದ ಕುಕನೂರು ತಾಲ್ಲೂಕಿನ ಸೋಂಪೂರದವರಾದ ಲೇಖಕ ವೀರೇಶ ಕುರಿ ಅವರು ಬಸಪ್ಪ ಕುರಿ- ಪಾರವ್ವ ಕುರಿ ಪುತ್ರನಾಗಿ 30-06-1987 ರಂದು ಜನಿಸಿದರು. ಸ.ಹಿ.ಪ್ರಾ.ಶಾಲೆ ಸೋಂಪೂರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು, ಸೋಂಪೂರದ ಶ್ರೀ ಶರಣಬಸವೇಶ್ವರ ಹೈಸ್ಕೂಲ್ ದಲ್ಲಿ ಪ್ರೌಢ ಶಿಕ್ಷಣವನ್ನು ಪೂರ್ತಿಗೊಳಿಸಿದರು. ಪಿ.ಯು.ಸಿಯನ್ನು ಶ್ರೀ ಜಗದ್ಗುರು ಅನ್ನದಾನೀಶ್ವರ ಪದವಿಪೂರ್ವ ಮಹಾ ವಿದ್ಯಾಲಯ, ಮುಂಡರಗಿ( ಶ್ರೀ ಮಠದ ವಸತಿ ನಿಲಯದಲ್ಲಿ ಊಟ ಮತ್ತು ವಾಸ್ತವ್ಯದೊಂದಿಗೆ) ಹಾಗೂ ಡಿ.ಇಡಿ: ಕೊಪ್ಪಳದ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆ( ಶ್ರೀ ಗವಿಸಿದ್ದೇಶ್ವರ ಮಠದ ಉಚಿತ ಪ್ರಸಾದ ಮತ್ತು ವಸತಿ ನಿಲಯದ ಆಶ್ರಯದೊಂದಿಗೆ) ಯಲ್ಲಿ ...
READ MORE