ತಮ್ಮ ವಿಭಿನ್ನ ರಚನೆಗಳ ಮೂಲಕ ಮಹಿಳಾ ಕಾವ್ಯದ ಆಳ, ಎತ್ತರಗಳನ್ನು ವಿಸ್ತರಿಸಿದ ಕವಿಗಳಲ್ಲಿ ಚಂದ್ರಿಕಾ ಪ್ರಮುಖರು. ಅವರು ಪ್ರಕಟಿಸಿರುವ ’ಸೂರ್ಯಗಂಧೀ ಧರಣೀ’ಯ ಕವಿತೆಗಳು ತೋರಿಸುವಂತೆ ಅವರು ಮಹತ್ವಾಕಾಂಕ್ಷೆಯ ಕವಿಯತ್ರಿ. ಸ್ತ್ರೀವಿಶಿಷ್ಟ ಅನುಭವನು ಅಭಿವ್ಯಕ್ತಿಸುವುದರಷ್ಟಕ್ಕೆ ಮಾತ್ರ ತೃಪ್ತರಾಗದ ಅವರ ಕಾವ್ಯ ಲೌಕಿಕ-ಅಲೌಕಿಕ, ಸ್ವ-ಪರ, ದೇವ-ಮನುಷ್ಯ ಇಂಥ ದ್ವಂದ್ವಗಳನ್ನು ಮೀರಿದ ‘ಸಂಗಮ ಸಾಮ್ರಾಜ್ಯ’ವನ್ನು ಕಟ್ಟುವ ಹಂಬಲ ಹೊಂದಿದೆ. ಇದೇ ಅವರ ಕಾವ್ಯದ ಅನನ್ಯತೆ.
ಹಿರಿಯ ವಿಮರ್ಶಕ ಜಿ.ಎಸ್. ಆಮೂರ ಅವರು ಚಂದ್ರಿಕಾ ಅವರ ಕವಿತೆಗಳ ಬಗ್ಗೆ ’ಚಂದ್ರಿಕಾ ಮೂಲತಃ ಪ್ರತಿಮಾನಿಷ್ಠ ಕವಿ. ಪ್ರತಿಮೆಯೇ ಅವರ ಕಾವ್ಯದ ಮೂಲದ್ರವ್ಯ ಹಾಗು ಘಟಕ. ಅವರ ಕಾವ್ಯದ ನೆಲೆ ನೈಜತೆಯ ಅನುಭವ. ಹೀಗಾಗಿ ಪ್ರೀತಿಯಂಥ ವೈಯಕ್ತಿಕ ಅನುಭವ, ಆಕಾಂಕ್ಷೆಗಳ ಬಗ್ಗೆ ಬರೆಯುವಾಗಲೂ ಅವರು ಈ ನೆಲೆಯಿಂದಲೇ ಹೊರಡುತ್ತಾರೆ. ಇದು ಅವರು ಮೆಚ್ಚುವ ಕವಿಗಳಾದ ಅಕ್ಕಮಹಾದೇವಿ ಹಾಗು ಬೇಂದ್ರೆಯವರ ಕಾವ್ಯದ ನೆಲೆಯಾದುದರಿಂದ ಅವರ ಕಾವ್ಯಕ್ಕೆ ಪರಂಪರೆಯ ಬೆಂಬಲವೂ ದೊರಕುತ್ತದೆ. ಅವರ ಹೊಸ ಸಂಕಲನ ತಾಮ್ರವರ್ಣದ ತಾಯಿ ನಿಶ್ಚಿತವಾಗಿಯೂ ಅವರು ಆಯ್ದುಕೊಂಡ ಕಠಿಣ ಮಾರ್ಗದಲ್ಲಿ ಸಾಧಿಸಿದ ಮುನ್ನಡೆಯ ಸ್ಪಷ್ಟ ಹೆಜ್ಜೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳೆಕೆರೆಯಲ್ಲಿ ಜನಿಸಿದ ಚಂದ್ರಿಕಾ ಅವರು, ಕುವೆಂಪು ವಿಶ್ವವಿದ್ಯಾಲಯದಲ್ಲಿ ತಮ್ಮ ವ್ಯಾಸಂಗವನ್ನು ನಡೆಸಿದರು. ‘ಕನ್ನಡ ಸಾಹಿತ್ಯ ವಿಮರ್ಶೆಯ ಐತಿಹಾಸಿಕ ಅಧ್ಯಯನ’ ಇವರ ಪಿಎಚ್. ಡಿ ಪ್ರಬಂಧ. ಹಲವಾರು ಕಿರುತೆರೆ ಧಾರಾವಾಹಿಗಳು ಮತ್ತು ಸಿನಿಮಾಗಳಿಗೆ ಕಥಾ ವಿಸ್ತರಣೆ, ಸಂಭಾಷಣೆ, ಕಿರುಚಿತ್ರಗಳ ನಿರ್ದೇಶನ, ನಿರ್ಮಾಣ, ನಿರ್ವಹಣೆ, ರಾಜ್ಯಮಟ್ಟದ ವಿಚಾರ ಸಂಕಿರಣ, ವಿಚಾರಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ, ಕವಿತಾ ವಾಚನ, ಅಭಿನವ ಚಾತುರ್ಮಾಸಿಕ ಪತ್ರಿಕೆಯ ಸಹ ಸಂಪಾದಕಿಯಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯೆಯಾಗಿ ಕೆಲಸ ನಿರ್ವಹಣೆ ಮಾಡಿದ ಅನುಭವ ಲೇಖಕಿಯದು. ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ, ಸೂರ್ಯಗಂಧೀ ...
READ MORE