‘ಶರದದ ಮುಗಿಲು’ ಸಿ.ಪಿ.ಕೆ ಅವರ ಮುಕ್ತಕಗಳ ಸಂಕಲನವಾಗಿದೆ. ಕವನ-ವಚನ-ಮುಕ್ತಕಗಳಲ್ಲಿ ಸಮರ್ಥವಾಗಿ ಬದುಕನು ವಿಶ್ಲೇಷಿಸುತ್ತ ನಡೆದು ಸೈ ಎನ್ನಿಸಿಕೊಂಡ ಸಿ.ಪಿ.ಕೆ. ಅವರ ಇತ್ತೀಚಿನ ಕೊಡುಗೆ ಈ ಎಪ್ಪತ್ತೊಂಬತ್ತು ಮುಕ್ತಕಗಳ ಸಂಕಲನ.
ಲೇಖಕರು, ಸಂಶೋಧಕರು ಆದ ಸಿ.ಪಿ.ಕೃಷ್ಣಕುಮಾರ್ ಅವರು 08-04-1939ರಂದು ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲೂಕಿನ ಚಿಕ್ಕನಾಯಕನ ಹಳ್ಳಿಯಲ್ಲಿ ಜನಿಸಿದರು. ತಂದೆ ಪುಟ್ಟೇಗೌಡರು ಮೋಜಿಣಿದಾರರಾಗಿ ಸರಕಾರಿ ಕೆಲಸದಲ್ಲಿದ್ದರು. ಕೃಷ್ಣಕುಮಾರ್ ಅವರು 9 ತಿಂಗಳ ಮಗುವಾಗಿದ್ದಾಗಲೇ ತಾಯಿ ತೀರಿಕೊಂಡರು. ಸಿಪಿಕೆ ಎಂದೇ ಪ್ರಸಿದ್ಧರಾದ ಅವರು ಜೆ.ಎಸ್.ಎಸ್. ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ್) ಪದವಿಯನ್ನು ಪಡೆದರು. 1961 ರಲ್ಲಿ ಮಾನಸಗಂಗೋತ್ರಿಯಲ್ಲಿ ಎಂ.ಎ. ಪದವಿ ಪಡೆದರು. 1962ರಲ್ಲಿ ಸಿ.ಪಿ.ಕೆ. ಅವರ ಮದುವೆ ಶಾರದಾ ಅವರ ಜೊತೆಗೆ ಜರುಗಿತು. 1964ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾದರು.1967ರಲ್ಲಿ ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾದರು. 1969ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ...
READ MOREಹೊಸತು- ಮೇ -2003
ಕೆಲವೇ ಸಾಲುಗಳಲ್ಲಿ ಮುಕ್ತಾಯಗೊಳ್ಳುವ ಮುಕ್ತಕವು ಬಹಳಷ್ಟು ಅರ್ಥವನ್ನು ಮೈದುಂಬಿಗೊಂಡ ಖನಿಯಂತೆ. ಕವನ-ವಚನ-ಮುಕ್ತಕಗಳಲ್ಲಿ ಸಮರ್ಥವಾಗಿ ಬದುಕನು ವಿಶ್ಲೇಷಿಸುತ್ತ ನಡೆದು ಸೈ ಎನ್ನಿಸಿಕೊಂಡ ಸಿ.ಪಿ.ಕೆ. ಅವರ ಇತ್ತೀಚಿನ ಕೊಡುಗೆ ಈ ಎಪ್ಪತ್ತೊಂಬತ್ತು ಮುಕ್ತಕಗಳ ಸಂಕಲನ. ಹೇಳಬೇಕಾದ್ದನ್ನು ಚಿಕ್ಕ-ಚೊಕ್ಕ ಹನಿಗವನಗಳ ಮೂಲಕ ಹೇಳುತ್ತ ನಮಗೊಂದು ಅದ್ಭುತ ಲೋಕವನ್ನು ಪರಿಚಯಿಸಿದ್ದಾರೆ. ಅ೦ಗೈಯಲ್ಲಿ ಅರಮನೆ ತೋರಿಸುವ ಕೈಚಳಕ.