ಬಿದಿರ ಬಿನ್ನಹ

Author : ಭಾಗ್ಯಜ್ಯೋತಿ ಹಿರೇಮಠ

Pages 78

₹ 90.00




Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ, ವ್ಹಯಾ ಎಮ್ಮಿಗನೂರು, ಬಳ್ಳಾರಿ - 583113
Phone: 9480353507

Synopsys

`ಬಿದಿರ ಬಿನ್ನಹ’ ಭಾಗ್ಯಜ್ಯೋತಿ ಹಿರೇಮಠ ಅವರ ಕವನ ಸಂಕಲನವಾಗಿದೆ. 2022ನೇ ಸಾಲಿನ ವಿಭಾ ಸಾಹಿತ್ಯ ಪಡೆದ ಕೃತಿಯಿದು. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; 'ಬಿದಿರ ಬಿನ್ನಹ' ಕವನ ಸಂಕಲನ ಹೊಸ ನುಡಿಗಟ್ಟು, ಅನುಭವವನ್ನು ತೆರೆದಿಡುವಾಗ ತೋರುವ ನವೀನತೆಗಳಿಂದ ಓದುಗರನ್ನು ಆವರಿಸುವ ಗುಣವನ್ನು ಹೊಂದಿದೆ. ಇಲ್ಲಿನ ಕವಿತೆಗಳು ಬದುಕು ನೀಡಿದ ಸರಳ ಅನುಭವಗಳನ್ನು ಸಹಜವಾಗಿ ಸ್ವೀಕರಿಸುವಲ್ಲಿ ತೋರುವ ನಿರುಮ್ಮಳತೆ ಹಾಗೂ ಮುಕ್ತತೆಯಿಂದಾಗಿ ಮನಸ್ಸನ್ನು ಆದ್ರ್ರಗೊಳಿಸಬಲ್ಲುವು. ಕವಿತೆಗಳಲ್ಲಿ ಮಡುಗಟ್ಟಿದ ನವಿರುತನ, ಮೃದುತ್ವ, ಅಸಹನೀಯ ನೋವು, ಅಂತಃಕರಣಗಳು ತಮ್ಮ ಅಭಿವ್ಯಕ್ತಿಯ ವಿಧಾನದಿಂದಾಗಿಯೇ ಚೆಲುವಾಗಿಯೂ, ಚಿಂತನಪರವಾಗಿಯೂ ಕಾಣುತ್ತವೆ. ಕವಿಯು ಹಾದು ಬಂದ ಅತಿ ಸರಳ, ಸಾಧಾರಣ ಸಂಗತಿ, ಸಂಕೀರ್ಣ ಅನುಭವಗಳು ಕೃತಕತೆಯ ಲೇಪನವಿಲ್ಲದೆ ಸಹಜವಾಗಿ ಕಾವ್ಯದ ಹೊರಗಿನ ದೈಹಿಕ ಚೆಲುವನ್ನು ಸೃಷ್ಟಿಸುತ್ತಿದ್ದರೆ, ಕವಿಯ ಸಹಜ ಭಾಷಾ ಅಭಿವ್ಯಕ್ತಿ, ತಾಜಾ ನುಡಿಗಟ್ಟುಗಳು ಅಂಗರಂಗದ ಸಾಮರ್ಥ್ಯವನ್ನು ತೋರಿಸುವಂತಿವೆ. ಕವಿತೆಯ ವಾಚ್ಯಗುಣದಾಚೆಗೆ ಇರಬಹುದಾದ ಭಾವುಕತೆ ಮತ್ತು ನಮ್ಯತೆಗಳ ಕಡೆಗೆ ಕಟ್ಟೋಣದ ಗಮನವಿರುವುದರಿಂದ ಓದುಗ ಹೊಸ ಅನುಭವವೊಂದಕ್ಕೆ ಒಳಗಾಗುತ್ತಾನೆ. ವಸ್ತು-ವೈವಿಧ್ಯತೆ, ಕಾವ್ಯದ ಹರಹು ವಿಶಾಲವಾಗಿ ಇರುವಂತೆಯೂ, ಅಂತರಂಗ-ಬಹಿರಂಗಗಳನ್ನು ವ್ಯಾಪಿಸುವಂತೆಯೂ ಕವಿತೆಗಳ ವಿನ್ಯಾಸವಿರುವುದರಿಂದ ಸಂಗ್ರಹ ಏಕತಾನತೆಯಿಂದ ತಪ್ಪಿಸಿಕೊಂಡಿದೆ. ಅಷ್ಟೇ ಅಲ್ಲ, ಅಂತರಂಗದ ಆತಿಂದಿಯ ಎನ್ನಬಹುದಾದ ಅನುಭವವನ್ನು ಬಿಚ್ಚಿಡುವಾಗ ಕವಿತೆಗಳು ತೋರುವ ಅಮೂರ್ತತೆ ಹಾಗೂ ನುಡಿಗಟ್ಟು ಸೋಪಜ್ಞತೆಯನ್ನು ಮೆರೆದಿವೆ.

About the Author

ಭಾಗ್ಯಜ್ಯೋತಿ ಹಿರೇಮಠ

ಭಾಗ್ಯಜ್ಯೋತಿ ಹಿರೇಮಠ ಅವರು ಧಾರವಾಡದ ಗುಡಗೇರಿಯಲ್ಲಿ 1984 ರಲ್ಲಿ ಜನಿಸಿದರು. ಹುಬ್ಬಳ್ಳಿಯ ಕೆ.ಎಲ್.ಇ ಸಂಸ್ಥೆಯ ಪಿ.ಸಿ.ಜಾಬಿನ್‌ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕಿಯಾಗಿದ್ದಾರೆ. ‘ಕನ್ನಡ ಚಲನಚಿತ್ರರಂಗಕ್ಕೆ ನರಸಿಂಹರಾಜು ಅವರ ಕೊಡುಗೆ' ವಿಷಯದ ಮೇಲೆ ನಡೆಸಿದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಹುಬ್ಬಳ್ಳಿಯ ಕೆ.ಎಲ್.ಇ 'ಧ್ವನಿ' ಎಫ್.ಎಂ ಕೇಂದ್ರದಲ್ಲಿ ಸುಮಾರು ನಾಲ್ಕು ವರ್ಷಗಳಿಂದ ನಿರಂತರವಾಗಿ ಅನೇಕ ಕಾರ್ಯಕ್ರಮಗಳಿಗೆ ಧ್ವನಿಯಾಗಿದ್ದಾರೆ. ಕವಿತೆ ಮತ್ತು ಬದುಕನ್ನು ಅಭೇದವಾಗಿ ಕಾಣುವ ಭಾಗ್ಯಜ್ಯೋತಿ, ಎರಡರಲ್ಲೂ ಉತ್ತಟತೆಯನ್ನೇ ಪ್ರಕಟಪಡಿಸುತ್ತಿದ್ದು,  2018 ರ ‘ಸಂಕ್ರಮಣ ಕಾವ್ಯ ಪ್ರಶಸ್ತಿ’ ಸಂದಿದ್ದು ’ಪಾದಗಂಧ’ ಇವರ ಮೊದಲ ಕವನ ಸಂಕಲನ. ...

READ MORE

Related Books