ಪೋಸ್ಟ್ ಬಾಕ್ಸ್‌ನ ಕವಿ - ಚೇತನ ಗವಿಗೌಡರ ಕವಿತೆಗಳು ಕೇವಲ ಕವಿತೆಗಳೆನಿಸದೆ ಒಂದು ಹಿತವಾದ ಮೈ ಮರೆವಿನಲ್ಲಿ ತನ್ನ ಪ್ರಿಯತಮೆಯೊಂದಿಗೆ ಮಾತನಾಡುವ ಪಿಸು ಮಾತಿನಂತೆ, ಒಮ್ಮೊಮ್ಮೆ ವ್ಯವಸ್ಥೆಯ ವಿರುದ್ಧ ಗುಡುಗುವ ಕ್ರಾಂತಿಕಾರಿಯಂತೆ ಮಾತನಾಡಿಕೊಳ್ಳುವಂತೆ ಸ್ವಗತದಲ್ಲಿರುವ ಅಗಣಿತ ಚಹರೆಗಳ ಚಿತ್ರ ಬರೆದು ಯಾರಿಗೋ ಪೋಸ್ಟ್ ಬಾಕ್ಸಿನೊಳಗೆ ಹಾಕಿ ನಿರಮ್ಮಳವಾದವರ ಹಾಗಿವೆ. ಈ ಪೋಸ್ಟುಗಳು ತಲುಪುವವರಿಗೆ ತಲುಪೇ ತೀರುತ್ತವೆ ಎಂಬ ಖಾತ್ರಿ ಅವರಿಗೂ ಇಲ್ಲ. ಹೀಗಾಗಿ ಬರೆದ ಸಾಲುಗಳನ್ನು ಕುಂತಿ ತನ್ನ ಮಗ ಕರ್ಣನನ್ನು ನಿರ್ಮಮವಾಗಿ ಗಂಗೆಯಲಿ ತೇಲಿಬಿಟ್ಟಂತೆ ಎಲ್ಲೋ ಯಾರಿಗೋ ಒಂದು ಕಡೆ ತಲುಪಿಯೇ ತಲುಪಬಹುದು, ಅಥವಾ ತಲುಪಲಿಕ್ಕಿಲೂ ಇಲ್ಲ ಎಂಬ ತಳಮಳದಲ್ಲೇ ಬರೆದಿದ್ದಾರೆ.
ಚೇತನ್ ಗವಿಗೌಡ ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಾಳಿಂಗನ ಹಳ್ಳಿ ಗ್ರಾಮದವರು. ತಾಯಿ ರತ್ನ ಮತ್ತು ತಂದೆ ಗವಿಗೌಡ. ಬೆಂಗಳೂರಿನ ಕೆಂಗೇರಿಯ ಸರ್ಕಾರಿ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದರು. ಈಗ ಮೈಸೂರಿನ KSOU ನಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ ಡಿಪ್ಲೊಮಾ ತರಬೇತಿ ಪಡೆಯುತಿದ್ದಾರೆ. ಪ್ರಸ್ತುತ ಕೋರಲ್ ಆಂಟಿಪೋಲ್ಯೂಷನ್ ಸಿಸ್ಟಮ್ ಎಂಬ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕೃತಿ : ಪೋಸ್ಟ್ ಬಾಕ್ಸ್ (ಕವನಸಂಕಲನ). ...
READ MORE