ಈ ಕಾವ್ಯ ಸಂಕಲನದಲ್ಲಿ ಸಮಕಾಲೀನ ಕವಿತೆಗಳ ಜತೆಗೆ ಹಳೆಗನ್ನಡ, ನಡುಗನ್ನಡ, ಜಾನಪದ ಹಾಗು ಯಕ್ಷಗಾನ ಕಾವ್ಯ ಪ್ರಕಾರಗಳೂ ಸೇರಿಕೊಂಡಿದ್ದು, ಪಂಪನ ವಿಕ್ರಮಾರ್ಜುನ ವಿಜಯ, ಪಾರ್ತಿಸುಬ್ಬನ ಪೂತನಾಮೋಕ್ಷದಿಂದ ಹಿಡಿದು ಶ್ರೀಕೃಷ್ಣ ಆಲನಹಳ್ಳಿಯ ಕವನದವರೆಗಿನ ವಿಸ್ತಾರವಾದ ಕಾಲವ್ಯಾಪ್ತಿಯ ಕಾವ್ಯ ಸಂಗ್ರಹ ಇದರಲ್ಲಿದೆ. ಇಲ್ಲಿ ಒಟ್ಟು ೯೫ ಕವಿತೆಗಳಿದ್ದು ಆಯಾ ಕವಿತೆ ಕಾವ್ಯಗಳನ್ನು ಸಂಗ್ರಹಿಸಿದವರು ಆ ಕವಿತೆಗಳನ್ನು ಗ್ರಹಿಸಿದ ರೀತಿಯಲ್ಲಿ ಕವಿತೆಯ ಜತೆ ಟಿಪ್ಪಣಿಗಳನ್ನು ನೀಡಲಾಗಿದೆ.
ಓ ಎಲ್ ನಾಗಭೂಷಣ ಸ್ವಾಮಿ- ಹುಟ್ಟಿದ್ದು22 ಸೆಪ್ಟೆಂಬರ್ 1953, ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಇಂಗ್ಲಿಷ್ (1873) , ಎಂ.ಎ. ಕನ್ನಡ(1975)ಪದವಿ, ಎಂಡಿಟಿಡಿಬಿ ಕಾಲೇಜು ಮೈಸೂರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಶಿಕಾರಿಪುರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆನೇಕಲ್. ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿ ಸೇವೆ (1992-1998). ಜನವರಿ2005 ರಲ್ಲಿ ಉದ್ಯೋಗದಿಂದ ಸ್ವಯಂ ನಿವೃತ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕನ್ನಡ ವಿಶ್ವವಿದ್ಯಾನಿಲಯ ಕೆ. ಕೆ. ಬಿರ್ಲಾ ಫೌಂಡೇಷನ್, ಜೆ. ಕೃಷ್ಣಮೂರ್ತಿ ಪೌಂಡೇಷನ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹಲವು ಮಹತ್ವದ ...
READ MORE