‘ನನ್ನ ಕನಸು’ ಎಂಬುದು ಸಾನಿಯಾ ಜ. ಧನ್ನೂರ ಅವರ ಹನಿಗವನ ಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ನೀ.ಶ್ರೀಶೈಲ ಅವರು, ‘ಸಂಕಲನ ಜೀವನದ ಹತ್ತು ಹಲವು ಮಜಲುಗಳಲ್ಲಿ ಹರಡಿಕೊಂಡಿದೆ. ಮಗು ಮನಸ್ಸಿನಲ್ಲಿ ಮೊದಲು ಅಡಿ ಇಡುವುದೇ ಸೃಷ್ಟಿ. ಆ ಸೊಬಗನ್ನು ಸವಿಯುವ ಆತುರ-ಕಾತರ ಅವೆಳೆದೆಯನ್ನು ಸೆಳೆದಿದೆ. ಸೂರ್ಯೋದಯ, ಚಂದ್ರೋದಯವನ್ನು ಸಮನ್ವಯಿಸಿದ ಅವಳು ಹೇಳುವುದು ಹೀಗೆ; ಬೆಳಿಗ್ಗೆ ಮೂಡುವ ಸೂರ್ಯ ಸಂಜೆಯಲ್ಲಿ ಹೋಗುವನು ನಮ್ಮೊಂದಿಗೆ ನಗು ಸದಾ ಇರಲೆಂದು ಚಂದಿರ ಮತ್ತೆ ಸುಳಿಯುವನು! ಮಾತು, ಬುದ್ಧಿ ದೇವರು ಮನುಜನಿಗಿತ್ತ ವಿಶೇಷ ವರಗಳು. ಎಲ್ಲ ಜೀವಿಗಳನ್ನು ಕಟ್ಟಿ ಹಾಕಿ, ಎಂಥದೇ ಸವಾಲನ್ನು ಮೆಟ್ಟಿ ನಿಲ್ಲಬಲ್ಲ ಸಾಮರ್ಥ್ಯ ಪಡೆದಿರುವ ಅವನ ಮಾತೂ ಕೂಡ ಅಷ್ಟೇ ವಿಸ್ಮಯಕಾರಿ. ಈ ಮಾತಿನ ಕುರಿತಾದ ಸಾನಿಯಾಳ ಹನಿಗವನ ಇಂತಿದೆ. ಹೊಡೆದ ಏಟಿನ ಪೆಟ್ಟು ಮಾಯವಾಗುತ್ತದೆ. ಆದರೆ ಆಡಿದ ಮಾತಿನ ಪೆಟ್ಟು ಎಂದಿಗೂ ಮಾಯವಾಗುವುದಿಲ್ಲ’. ಮನುಜನ ಮಾತಿಗಿಂತ ಕೃತಿ ಮೇಲು. ಹೃದಯವಂತಿಕೆ, ದಯೆ, ಕರುಣೆ, ಅನುಕಂಪವಿಲ್ಲದ ಜೀವಕೆ ಯಾವ ಅರ್ಥವೂ ಇಲ್ಲ. ಎಲ್ಲವೂ ತನಗಾಗಿ ಎಂದು ಬದುಕುವವರಿಗೆ ಸಾನಿಯಾ ಕಿವಿ ಹಿಂಡಿದ ರೀತಿ ಹೀಗಿದೆ : ಒಳ್ಳೆಯ ಕಾರ್ಯ ಮಾಡಿಸುವುದಕ್ಕಿಂತ ಒಳ್ಳೆಯ ಕಾರ್ಯ ಮಾಡುವುದು ಉತ್ತಮ. ಹೋಮ ಮಾಡಿಸುವುದಕ್ಕಿಂತ ದಾನ ಮಾಡುವುದು ಉತ್ತಮ ಸಾನಿಯಾ ಧನ್ನೂರ ಹನಿಗವನ ಕ್ಷೇತ್ರದಲ್ಲಿ ಕಾಲಿಟ್ಟಿದ್ದು, ಅದು ಅಂಬೆಗಾಲಿನ ನಡಿಗೆ ಎನಿಸಿದರೂ, ಅವಳು ಇಡುತ್ತಿರುವುದು ಭರವಸೆಯ ಹೆಜ್ಜೆಯೆಂಬುದು ಖುಷಿಯ ಸಂಗತಿ’ ಎಂದು ಪ್ರಶಂಸಿಸಿದ್ದಾರೆ.
ಲೇಖಕಿ ಸಾನಿಯಾ ಜ. ಧನ್ನೂರ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನವರು. ಓದುವುದು, ಬರೆಯುವುದು ಅವರ ಆಸಕ್ತಿ. ಕೃತಿಗಳು : ನನ್ನ ಕನಸು (ಕವನ ಸಂಕಲನ) ...
READ MORE