ಜೀವ ಸೆಲೆ (ಹೈಕುಗಳ ಸಂಕಲನ)-ಡಾ. ಎಂ.ಜಿ. ದೇಶಪಾಂಡೆ ಅವರ ಕೃತಿ. ಪಾಶ್ಚಾತ್ಯ ಸಾಹಿತ್ಯ ಪ್ರಕಾರವಾದ ಹೈಕುಗಳು ಸಹ ಕನ್ನಡ ಸಾಹಿತ್ಯ ಪ್ರಕಾರದಲ್ಲಿ ಇತ್ತೀಚೆಗೆ ವಿಶಿಷ್ಠ ಸ್ಥಾನ ಪಡೆಯುತ್ತಿವೆ. ಅತ್ಯಂತ ಕಡಿಮೆ ಪದಗಳಲ್ಲಿ ಹಿರಿದಾದ ಅರ್ಥವನ್ನು ತುಂಬಿ ದ್ವಿಪದಿ ಇಲ್ಲವೇ ತ್ರಿಪದಿ ಇಂತಹ ಯಾವ ಬಂಧವೂ ಇಲ್ಲದ ಹೈಕುಗಳು ಓದುಗರನ್ನು ತಮ್ಮ ಚುರುಕುತನದ ಗುಣ ಸ್ವಭಾವದೊಂದಿಗೆ ಸೆಳೆಯುತ್ತವೆ.
ಹೈಕುಗಳು ಪ್ರೀತಿ, ಪ್ರೇಮ, ನಿಸರ್ಗ, ಬದುಕಿನ ಏರಿಳಿತಗಳ ಗಳ ಸತ್ಯದರ್ಶನ ಮಾಡಿಸುತ್ತವೆ. ಸಮಯದ ಅಭಾವ ದಲ್ಲಿಯೂ ಓದಿ ಬಿಡಬೇಕಾದ ಈ ಹೈಕುಗಳು ನಮ್ಮ ಬಾಳಿನ ಹೆಜ್ಜೆಗಳ ಪಳೆಯುಳಿಕೆಗಳಂತೆ ತೋರುತ್ತವೆ . ಬೇಸತ್ತ ಜೀವನದಲ್ಲಿ ಒಂದಿಷ್ಟು ನೆಮ್ಮದಿಯನ್ನು ಪಡೆಯಲು ಈ ಹೈಕುಗಳು ಸಹಕಾರಿಯಾಗುತ್ತವೆ. ಪ್ರಪಂಚದ ಸಾರ್ಥಕ್ಯ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತವೆ.ನೀರು ,ಬೆಂಕಿ, ಮಳೆ, ಗಿಡ, ಮರ, ಸೂರ್ಯ,ಚಂದ್ರ ,ಮನಸ್ಸು ,ಬದುಕುಗಳನ್ನೆಲ್ಲ ಸುತ್ತುವರಿದು ಹಾಲಿನಿಂದ ತುಪ್ಪಕ್ಕೆ ವರ್ಗಾಯಿಸುವಂತೆ ವಿಸ್ತಾರ ಸಾಹಿತ್ಯದಿಂದ ಹನಿ ಹೈಕುಗಳು ಇವುಗಳಾಗಿವೆ. ಓದುಗರಿಗೆ ಗೆಳೆಯನಂತೆ ಈ ಹೈಕುಗಳು ವರ್ತಿಸುತ್ತವೆ . ಎಂದು ಲೇಖಕರು ಅಭಿಪ್ರಾಯಪಡುತ್ತಾರೆ.
ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು. ಇವರ ಕಾವ್ಯನಾಮ ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ. ಕೊರೊನಾ ವೈರಸ್ ಪರಿಣಾಮ ಲಾಕ್ ...
READ MORE