ಕಾವ್ಯಕಟ್ಟುವ ವಿನ್ಯಾಸದ ಬಗ್ಗೆ ತಾಕಲಾಟಕ್ಕೆ ಸಿಗದೆ, ಒಂದೇ ಓಟದಲ್ಲಿ ಒಂದು ಕವಿತೆ ಪೂರ್ಣಗೊಳ್ಳುವ ಶೈಲಿ ಇಲ್ಲಿನ ವಿಶೇಷ. ಹರಿಪ್ರಿಯ ಕುವೆಂಪು ಅವರ ಪ್ರಭಾವಕ್ಕೆ ಒಳಗಾದವರು ಹಾಗಾಗಿ ಇಲ್ಲಿನ ಕವನಗಳಲ್ಲಿಯೂ ವೈಚಾರಿಕ ಪ್ರಜ್ಞೆಯ ಕಡೆಗೆ, ಸಮಾಜದಲ್ಲಿರುವ ಅಸಮಾನತೆಗಳನ್ನು ಪ್ರತಿಭಟಿಸುವ ಕವನಗಳೇ ಹೆಚ್ಚು. ಈ ಕೃತಿಯಲ್ಲಿ 68 ಅಧ್ಯಾಯಗಳಿದ್ದು ಹೃದಯ ಸ್ಪಂದನ, ಹೊಂದದ ಕವಚಕುಂಡಲ, ಬಂಡೆಯ ಮೇಲಿನ ಚಿಗುರು, ಉಭಯ ಪಕ್ಷ, ಮನಮನೆ ತೇಜೋಮಯ, ಮೂಲಜರಿಗೆ, ದ, ವಸ್ತು ವಿಶೇಷ, ಬಾಬಾಸಾಹೇಬರ ನಿತ್ಯ ಸತ್ಯ, ಜೀವ ಜಲರಾಶಿ, ವೇಷ ಭೂಷಣ, ಮಣ್ಣುಪಾಲು, ಅರಾಜಕತ್ವದ ಕಾಲ, ಹೆಲ್ತ್ ಚೆಕಪ್, ಗಂಡು ಹೆಣ್ಣು, ಸ್ತ್ರೀ ಪುರುಷ ವಾಗ್ವಾದ, ಅಫ್ರಾಯ್ಡ್ ಸಿದ್ಧಾಂತ, ದ್ರಾವಿಡ ಜೀವನ, ಅರಾಷ್ಟ್ರಗೀತೆ, 5,000 ವರುಷಗಳ ಸೇಡು, ಹೊಲಸು ಪಾರಾಯಣ, ಕುಲ ಕುಲವೆಂದು, ವಿಲಾಸವಿಲ್ಲ-ವಿಳಾಸ, ಸರಳಾದೇವಿ ಮಹಾತ್ಮ, ಅಜ್ಜ ಗಾಂಧೀ ಚಿತ್ರ, ಸಂಸ ಕಾಫ್ಕ ಖಾನಾವಳಿ, ವಿಜ್ಞಾನಕ್ಕೂ ಅಜ್ಞಾನ, ಪ್ರಜಾ-ಪ್ರಭುತ್ವದ ಭಾರತದ-ರತ್ನ, ಉಡುಪಿಗೆ ಬೇರೆ ಅಳತೆಯ, ಆತ್ಮಗಳ ಕಥೆ, ನಿಂತ ರಕ್ತ ಕ್ರಾಂತಿ, ಕನ್ನಡದಾರುತಿ ಬೆಳಗಲಿ, ಅಗ್ರರ ಸಮಾನತೆ, ವಟುವಟಪಟುವರ್ಗಗಳ, ಸಂವೇದನಾ ಶೀಲ ಕರೆ, ಉಪ ರಾಷ್ಟ್ರಕವಿ ವಾರಧಿ, ಪಾತಾಳದ ಹಾವೊ, ಜೀವ ಜಲಾಕ್ಷರ, ಅಜ್ಞಾನನಗರ ಬಡಾವಣೆ, ಬಡಾವಣೆಯ ಆದರ್ಶವಾದಿಗಳು, ತೃತೀಯ ಜಗತ್ತು, ಮಕ ತಿಕವೇನು, ಕ್ರೀಡಾವನ, ಮುಖವಾಡ, ಜಗಳ-ಬಂಧಿ, ಅದಲು ಬದಲು, ಬದುಕಿಗೆ ಕಡಿವಾಣ, 448-354-506, ನಂಮನೆ ಸುಂಮನೆ, ಸ್ತ್ರೀ ಸ್ವರೂಪ, ಕುರುಡು ಕಾನೂನು, ಅಕ್ಷರ ಜೀವ, ಬಡಿದಾಳಮ್ಮನ ಕಾಲ, ಚತುರ್-ಮುಖ, ವೃದ್ಧನಾರೀ ಪತಿವ್ರತೆ, ಪಂಚ-ಕನ್ಯಾ ಸ್ಮರೇನ್ನಿತ್ಯಂ, ಬಳಸಿಯೂ ಬ್ರಹ್ಮ-ಚಾರಿಣಿ, ಪ್ರದರ್ಶನ ಪತಿವ್ರತೆ, ಸಕಲ ಕಲಾ ವಲ್ಲಭ, ಜೆನ್ ಗುರುವಿನ ಸತ್ಯ-ಕಾಮ, ನಿಜ ಹೇಳೇ ಋತುಮತಿ, ಕರಿಗುಮ್ಮಯ್ಯನ ಅಫಿಡವೆಟ್ಟು, ತನು ಕನ್ನಡ ಮನ ಕನ್ನಡ ನುಡಿ ಕನ್ನಡವು, ಆಘಾತ, ಆತಂಕ, ದಿಗ್ಧಮೆಗಳ 'ಕಸವರ'-ಡಾ|| ಬೈರಮಂಗಲ ರಾಮೇಗೌಡ, ಶಾಂತಸಾಗರದ ಸುನಾಮಿ- ಜರಗನಹಳ್ಳಿ ಶಿವಶಂಕರ, ಭರತವಾಕ್ಯ - ಹರಿಹರಪ್ರಿಯ ಇವೆಲ್ಲಾವುಗಳನ್ನು ಒಳಗೊಂಡಿದೆ.
ಆಂಧ್ರಮೂಲದ ಸಾತವಲ್ಲಿ ವೇಂಕಟವಿಶ್ವನಾಥಭಟ್ಟ ಅವರು ಹರಿಹರಪ್ರಿಯ ಎಂದೇ ಪರಿಚಿತರು. ಮೈಸೂರಿನಲ್ಲಿ ಜನಿಸಿದ (ಜ. 1952) ಅವರು ಬೆಳೆದದ್ದು ಮಂಡ್ಯದಲ್ಲಿ. ಪ್ರೌಢಶಾಲೆಯವರೆಗೆ ಓದಿ ನಂತರ ’ಕನ್ನಡ ಜಾಣ’ದಲ್ಲಿ ಉನ್ನತಮಟ್ಟದ ಯಶಸ್ಸು ಸಾಧಿಸಿದ ಅವರು ರಾಷ್ಟ್ರಕವಿ ಕುವೆಂಪು ಅವರನ್ನು ಕನ್ನಡದ ಗುರು ಎಂದು ಕೊಂಡ ಹಾಗೆ ತೆಲುಗಿನ ಮಹಾಕವಿ ಶ್ರೀಶ್ರೀ ಅವರು ಹೋರಾಟಕ್ಕೆ ಗುರು. ಕಾವ್ಯ, ಕಾದಂಬರಿ, ಕತೆ, ನಾಟಕ, ವಿಚಾರ ವಿಮರ್ಶೆ, ಸಂಶೋಧನೆ, ವ್ಯಕ್ತಿಚಿತ್ರ, ತೌಲನಿಕ ಅಧ್ಯಯನ, ಗ್ರಂಥಸಂಪಾದನೆ, ಅಂಕಣ ಬರಹ ಮುಂತಾದ ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ನಾನ್ ಅಕಾಡೆಮಿಕ್ ಚಳವಳಿಗಾರ, ಸಾಂಸ್ಕೃತಿಕ ರಾಯಭಾರಿ ಎಂದು ಹೆಸರು. ...
READ MORE