ಕವಿ ಶ್ರೀ ವೈ.ಬಿ.ಕಾಂತರಾಜ್‌ರವರು “ಸಿರಿ ಸಮೃದ್ಧಿ” ಕೃತಿಯಿಂದ ಕನ್ನಡ ಸಾರಸ್ವತ ಲೋಕಕ್ಕೆ ಪರಿಚಿತರಾಗಿದ್ದಾರೆ. ಅವರ ದ್ವಿತೀಯ ಕವನ ಸಂಕಲನ ಇದು. ಈ ಕವನಗಳಲ್ಲಿ ಬದುಕಿನ ಕಷ್ಟ, ನಷ್ಟ, ಆಸೆ, ನಿರಾಸೆಗಳ ಚಿತ್ರಣವಿದೆ. ಪ್ರಕೃತಿಯ ಕಾಳಜಿಯಿದೆ, ದೈವ ಭಕ್ತಿಯಿದೆ. ಸ್ವಾಭಾವೋಕ್ತಿ, ವಕ್ರೋಕ್ತಿ, ಉಪಮೆ, ರೂಪಕಗಳಿಂದ ಓದುಗರನ್ನು ಅನೇಕ ಕವನಗಳು ಕಾಡುತ್ತವೆ. ಎಂದು ಚಂದ್ರಕಾಂತ ಪಡೆಸೂರ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
ವೈ.ಬಿ.ಕಾಂತರಾಜುರವರು 1971 ಏಪ್ರಿಲ್ 2ರಂದು ಹಾಸನ ತಾಲ್ಲೂಕಿನ ಯಲಗುಂದ ಗ್ರಾಮದಲ್ಲಿ ಜನಿಸಿದರು. ತಂದೆ ವೈ.ಜೆ.ಬಸವರಾಜು, ತಾಯಿ ಶ್ರೀಮತಿ ಪುಟ್ಟವೀರಮ್ಮ, ಅರಸೀಕೆರೆ ತಾಲ್ಲೂಕಿನ ಬಿಡಾದರಹಳ್ಳಿಯ ಶ್ರೀ ಭೂದೇಶ್ವರ ಸ್ವಾಮಿ ಮಠದಲ್ಲಿ ಮೆಟ್ರಿಕ್ ವರೆಗೆ ಶಿಕ್ಷಣ ಪಡೆದ ಇವರು ಪೋಲಿಸ್ ಕಾನ್ಸಟೇಬಲ್ ಆಗಿ ಆಯ್ಕೆಗೊಂಡು ಪ್ರಸ್ತುತ ಹಾಸನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿ ಆರಕ್ಷಕ ಇಲಾಖೆಯಲ್ಲಾದರೂ ಪ್ರವೃತ್ತಿಯಲ್ಲಿ ಸಾಹಿತ್ಯ ಹಾಗೂ ಪರಿಸರ ಜಾಗೃತಿಯಲ್ಲಿ ನಿರತರಾಗಿದ್ದಾರೆ. ಕಾವ್ಯ, ಕಥೆ, ವಚನಗಳನ್ನು ಬರೆಯುತ್ತಿರುವ ಇವರು ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಈಗಾಗಲೇ “ಸಿರಿ ಸಮೃದ್ಧಿ” ಕವನ ಸಂಕಲನವನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಸದ್ಯ “ಪ್ರಕೃತಿ ...
READ MORE