‘ಬಿಸಿಲಿನ ಷಡ್ಯಂತ್ರದ ವಿರುದ್ಧ’ ಮರಾಠಿಯ ಖ್ಯಾತ ಚಲನಚಿತ್ರ ನಿರ್ದೇಶಕ ನಾಗರಾಜ ಮಂಜುಳೆ ಅವರ ಕವನ ಸಂಕಲನದ ಕನ್ನಡಾನುವಾದ. ಕನ್ನಡದ ಸಂವೇದನಾಶೀಲ ಅನುವಾದಕ, ಕವಿ ಸಂವರ್ತ ಸಾಹಿಲ್ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಫ್ಯಾಂಡ್ರಿ, ಸೈರಾಟ್, ಝಂಡ್ ಸಿನಿಮಾಗಳ ಮೂಲಕ ಭಾರತಧ್ಯಂತ ಗಮನ ಸೆಳೆದಿರುವ ನಾಗರಾಜ್ ಮಂಜುಳೆ ಸೃಜನಶೀಲ ಬರಹಗಾರ, ಹಾಗೇ ಸೂಕ್ಷ್ಮ ಸಂವೇದನೆಗಳ ಕವಿ ಕೂಡಾ ಹೌದು. ಅವರ ಮರಾಠಿ ಕವನ ಸಂಕಲನವನ್ನು ಸಂವರ್ತ ಸಾಹಿಲ್ ಅಷ್ಟೇ ಸೂಕ್ಷ್ಮವಾಗಿ, ಸರಳವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.
ಕವಿತೆ, ಸಿನೆಮಾ, ಸಾಮಾಜಿಕ ಚಿಂತನೆ-ಹೋರಾಟ ಹೀಗೆ ಹಲವಾರು ರಂಗಗಳಲ್ಲಿ ತೊಡಗಿಕೊಂಡಿರುವ ಸಂವರ್ತ ಸಾಹಿಲ್ ಅವರದ್ದು ಬಹುಮುಖ ಪ್ರತಿಭೆ. ಕನ್ನಡಪ್ರಭದಲ್ಲಿ ಬರೆಯುತ್ತಿದ್ದ ‘ಬಾಳ್ಕಟ್ಟೆ’ ಅಂಕಣ ಬರಹ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತದ ವಿವಿಧ ಭಾಷೆಗಳಲ್ಲಿ ಪ್ರಕಟವಾದ ಕವಿತೆಗಳನ್ನು ‘ರೂಪರೂಪಗಳನು ದಾಟಿ’ ಎಂಬ ಶೀರ್ಷಿಕೆಯಡಿಯಲ್ಲಿ ಅನುವಾದಿಸಿದ್ದಾರೆ. ‘ಓದುವುದೆಂದರೆ ಸ್ಪರ್ಶಿಸಿದಂತೆ’ ಅವರ ಮತ್ತೊಂದು ಅನುವಾದಿತ ಕೃತಿ ಇತ್ತಿಚೆಗೆ ಪ್ರಕಟವಾಗಿದೆ. ...
READ MORE