`ಕಲ್ಲೊಳಗೆ ಕತೆ ಹುಟ್ಟಿ' ಕೃತಿಯು ಇಂದಿರಾ ಜಾನಕಿ ಎಸ್. ಶರ್ಮ ಅವರ ಕವನ ಸಂಕಲನವಾಗಿದೆ. ಛಂದೋಬದ್ಧವಾಗಿ ರಚಿಸಿದ 55 ಕವನಗಳ ಗುಚ್ಛವೇ ಈ ಕವನ ಸಂಕಲನ. ರಾಮನ ತ್ರೇತಾಯುಗದಿಂದ ಕೃಷ್ಣನ ದ್ವಾಪರದವರೆಗೆ, ಹಸುಗೂಸಿನಿಂದ ಶ್ರದ್ಧಾಂಜಲಿಯವರೆಗೆ, ಆರದ್ರೆಯಿಂದ ವರ್ಷಾಧಾರೆಯವರೆಗೆ, ಹೋಳಿಯಿಂದ ಹಬ್ಬದಡುಗೆಯ ತನಕ, ಕಪ್ಪು ಕಾಗೆಯ ಮಾತಿನಿಂದ ಮಂಥರೆಯ ಗೊಣಗಾಟದಲ್ಲಿಗೆ, ಸ್ವಚ್ಛ ಭಾರತದಿಂದ ಗುರುಪೂರ್ಣಿಮೆಯ ವರೆಗಿನ ವಿಶಾಲ ವಿಚಾರಗಳನ್ನೆಲ್ಲಾ ಈ ಕವನದ ಹಂದರದಲ್ಲಿ ರತ್ನಗಳಂತೆ ಪೋಣಿಸಿರುವುದು ಚಿತ್ತಾಕರ್ಷವಾಗಿದ್ದು, ಮನಸ್ಸಿಗೆ ತಂಪನ್ನೆರೆಯುತ್ತದೆ.
ಇಂದಿರಾಜಾನಕಿ ಎಸ್ ಶರ್ಮ ಅವರು ಲೇಖಕಿ, ತಾಳಮದ್ದಳೆ ಅರ್ಥಧಾರಿ, ದೇರಾಜೆ ಸೀತಾರಾಮಯ್ಯನವರ ಪುತ್ರಿ. ಸಂಸ್ಕೃತ ಹಾಗೂ ಪ್ರಾಕೃತಗಳ ಪ್ರಾಥಮಿಕ ಶಿಕ್ಷಣವನ್ನು ಪಡೆದಿರುವ ಅವರು ಕನ್ನಡ ಎಂ.ಎ ಪದವೀಧರರು. ಕೃತಿಗಳು: ರಾಮ ಸಾಂಗತ್ಯ, ಕಲ್ಲೊಳಗೆ ಕತೆ ಹುಟ್ಟಿ ...
READ MORE