‘ಶೂನ್ಯಯಾನ-ಮನ ಕಾನನ ಗಾಯನ’ ಮಲ್ಲಪ್ಪ. ಮೀಸಿಯವರ ಕೃತಿಯಾಗಿದೆ. ಈ ಕೃತಿಗೆ ಡಾ. ಎಂ.ಸಿ. ವಾಲಿ ಅವರ ಮುನ್ನುಡಿ ಬರಹವಿದೆ. ಕೃತಿ ಮತ್ತು ಕೃತಿಕಾರರ ಬಗ್ಗೆ ಬರೆದಿರುವ ಎಂ.ಸಿ. ವಾಲಿ ಅವರು 'ತಾಯಿ ಕನ್ನಡ ಕಸ್ತೂರಿಯ ಬಯಕೆಯ ಬೀಜ ಮೊಳೆತು ಮೆಲ್ಲಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಅರಳಿದ ಕೂಸು ಈ ಮುತ್ತು. ಕೊರತೆಗಳ ನಡುವೆಯೇ ಮೊರೆತಗಳು ಕರಗಿ, ಬಡತನ, ಹಸಿವೂ ಕೂಡ ಪ್ರೋತ್ಸಾಹ ಕೊಟ್ಟವು ಬರವಣಿಗೆಗೆ ಮತ್ತು ಒಳ್ಳೆಯ ಬದುಕಿಗೆ ಮಾವನ ಆಶ್ರಯದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಮಲ್ಲು, ಮುಂದೆ ಅಮೃತೇಶ್ವರ ವಿದ್ಯಾಲಯವೆಂಬ ಚಿಪ್ಪಿನಲ್ಲಿ ಮುತ್ತಾದವ ನಮ್ಮ ಕವಿ. ಗಟ್ಟಿಗಿತ್ತಿಯ ಗರ್ಭಸುತ ಮಲ್ಲಪ್ಪ, ಬಡತನವೆಂಬ ಮಹಾ- ವಿದ್ಯಾಲಯದ ವಿದ್ಯಾರ್ಥಿ ನಾನು ಎಂದು ಹೇಳುವ ಪರಿ ಅನನ್ಯ. ಕಾರಣವಿಲ್ಲದೆ ಏನು ನಡೆಯದು ಆದರೆ ಕಾಲನ ಲೀಲೆ ಬಲ್ಲವರಾರು... ಬದುಕಿದ್ದೀಯಾ ಎನ್ನುವುದು ಮುಖ್ಯವಲ್ಲ ಹೇಗೆ ಬದುಕನ್ನು ಆನಂದಿಸಿರುವೆ ಅನ್ನೋ ಸತ್ಯ ತಿಳಿಯಬೇಕೆನ್ನುತ್ತಾನೆ. ‘ಅಮ್ಮ ಎನ್ನಲೇ ತಂಗಿ ನಾನೊಮ್ಮೆ ನಿನ್ನ' ಎಂಬ ಕವಿತೆ ಕಣ್ಣೀರು ತರಿಸುತ್ತದೆ. ಕನಸ ಬಂಡಿ ಏರಿದ ಕವಿ ಅನೇಕ ಏರಳಿತಗಳನ್ನು ಬದುಕಿನಲ್ಲಿ ಕಾಣುತ್ತಾನೆ. ಶಿವಮೊಗ್ಗ, ಮೈಸೂರು ಚೆಲುವು ಕವಿಯಲ್ಲಿ ಒಲವು ಮೂಡಿಸಿದೆ. ಚಿನ್ನಾರಿ ಕಾವ್ಯನಾಮದಿಂದ ಪ್ರಸಿದ್ಧಿ ಪಡೆದ ಯುವಕವಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕುಂದಗೋಳದ ಅಟಲ್ ವೇದಿಕೆಯಿಂದ ಅತ್ಯುತ್ತಮ ಯುವಕವಿ ಪ್ರಶಸ್ತಿ ಪಡೆದಾಗ ನಾನೂ ಆ ವೇದಿಕೆಯಲ್ಲಿದ್ದು ಕವಿಯ ಕವಿತೆ- ವಾಚನ- ವಿವರಣೆ ಆಲಿಸಿ ಶಹಭಾಶ್ ಗಿರಿ ಕೊಟ್ಟಿದ್ದೆನು. ಭರವಸೆಯ ಕವಿಯಾದ ಮುತ್ತು, ಇನ್ನೂ ಹಲವು ಕೃತಿಗಳನ್ನು ರಚಿಸಲೆಂದು ಹಾರೈಸಿದ್ದಾರೆ.
ಚಿನ್ನಾರಿ ಕಾವ್ಯನಾಮದಿಂದ ಕನ್ನಡ ಸಾಹಿತ್ಯಲೋಕದಲ್ಲಿ ಗುರುತಿಸಿಕೊಂಡಿರುವ ಮಲ್ಲಪ್ಪ ಮೀಸಿಯವರ ಮೂಲತಃ ಧಾರವಾಡ ಜಿಲ್ಲೆಯ ಅಣ್ಣಿಗೇರಿಯವರು. ತಾಯಿ- ಕಸ್ತೂರಿ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಾವನ ಆಶ್ರಯದಲ್ಲಿ, ಪ್ರೌಢ ಶಿಕ್ಷಣವನ್ನು ಹುಟ್ಟೂರಿನ ಅಮೃತೇಶ್ವರ ವಿದ್ಯಾಸಂಸ್ಥೆಯಲ್ಲಿ, ಕಾಲೇಜು ಶಿಕ್ಷಣವನ್ನು ಗದಗ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಾಲೇಜು, ಹಾಗೂ ಪದವಿ ಶಿಕ್ಷಣ (B.Sc)- ರಾಜ್ಯದ ಹೆಮ್ಮೆಯ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯ ಧಾರವಾಡದಲ್ಲಿ ನಂತರ ಸ್ನಾತಕೋತ್ತರ ಪದವಿ (M.Sc) - ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರಿನಲ್ಲಿ ಪೂರೈಸಿದರು. ಅಟಲ್ ಸಾಹಿತ್ಯ ವೇದಿಕೆಯಿಂದ ಅತ್ಯುತ್ತಮ ಯುವಕವಿ ಪ್ರಶಸ್ತಿ, 'ಬುಕ್ ಬ್ರಹ್ಮ' ಅವರ ವತಿಯಿಂದ ...
READ MORE