ಕಲ್ಲು ಮಂಟಪ

Author : ಸುಬ್ರಾಯ ಚೊಕ್ಕಾಡಿ

₹ 100.00




Published by: ರೂಪ ಪ್ರಕಾಶನ
Address: ನಂ.2407, 2407/ಕೆ-1, 1ನೇ ಕ್ರಾಸ್, ಹೊಸಬಂಡಿಕೇರಿ ಕೆ.ಆರ್.ಮೊಹಲ್ಲಾ, ಮೈಸೂರು -570004
Phone: 9342274331

Synopsys

‘ ಕಲ್ಲುಮಂಟಪ’ ಕೃತಿಯು ಸುಬ್ರಾಯ ಚೊಕ್ಕಾಡಿ ಅವರ ಕವನಸಂಕಲನವಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಜೋಗಿ ಅವರು, ಮಹಾನಗರದ ಸಲ್ಲಾಪ ಮತ್ತು ಸಂಕಟಗಳಿಂದ ಅಂತಃಕರಣ ಪೂರ್ವಕ ದೂರ ಉಳಿದ ಶ್ರೀ ಸುಬ್ರಾಯ ಚೊಕ್ಕಾಡಿ ತಮ್ಮ ಎಂಬತ್ತರ ಹುಮ್ಮಸ್ಸಿನಲ್ಲಿ ಬರೆದ ಎಂಬತ್ತು ಕವನಗಳು ಈ ಸಂಕಲನಲ್ಲಿವೆ. ಕಳೆದ ಕಾಲದ ಪದಗಳು, ಕಳೆದು ಹೋದ ಕಾಲದ ಭಾಷೆಗೆ ಸೇರಿವಂಥವು. ಬರುವ ವರ್ಷದ ಮಾತು ಮತ್ತೊಂದು ದನಿಗಾಗಿ ಕಾಯುತ್ತಿದೆ ಎಂಬ ಭರವಸೆಯಲ್ಲಿ ಬರೆಯುವ ಚೊಕ್ಕಾಡಿ ಅವರ ಹೊಸ ಪದ್ಯಗಳಲ್ಲಿ ತಾರುಣ್ಯದ ಬಿಸುಪು ಮತ್ತು ಅನುಭವದ ಪಾಕ ಹದವಾಗಿ ಬೆರೆತಿರುವುದನ್ನು ಕಾಣಬಹುದು. ಬೆರಗು, ಬೇಗುದಿ ಮತ್ತು ಫಲಿಸಿದ ಧ್ಯಾನದ ತ್ರಿಭಂಗಿ ಸ್ಥಿತಿಯಲ್ಲಿ ಪ್ರತಿಫಲಿತಗೊಂಡ ಕವಿತೆಗಳು ಇಲ್ಲಿವೆ. ಕಲ್ಲುಮಂಟಪ ಕವಿತೆಯಲ್ಲಿ ಬರುವ ತಾನೇನು ‘ಧ್ಯಾನಿಸುತ್ತಿದೆಯೋ ಅದೇ ತಾನಾಗುವ ಹಾದಿ’ ಸಾಲು ಚೊಕ್ಕಾಡಿಯವರ ಕಾವ್ಯಮಂಟಪಕ್ಕೂ ಅನ್ವಯಿಸುವಂತಿದೆ. ಕವಿ ತಾನೇನು ಭಾವಿಸುತ್ತಾನೋ ಅದೇ ಆಗುವುದು ಕೂಡ ವಿವಶತೆ ಎಂದು ಸಾಬೀತು ಮಾಡುವ ಅನೇಕ ಪದ್ಯಗಳನ್ನು ಚೊಕ್ಕಾಡಿ ಈ ಸಂಕಲನದಲ್ಲಿ ಕೊಟ್ಟಿದ್ದಾರೆ.

About the Author

ಸುಬ್ರಾಯ ಚೊಕ್ಕಾಡಿ
(29 June 1940)

ಕವಿ, ವಿಮರ್ಶಕ, ನಾಟಕಕಾರರಾದ ಸುಬ್ರಾಯ ಚೊಕ್ಕಾಡಿಯವರು  ಹುಟ್ಟಿದ್ದು 29-06-1940 ರಂದು ಸುಳ್ಯ ತಾಲ್ಲೂಕಿನ ಚೊಕ್ಕಾಡಿಯಲ್ಲಿ. ತಂದೆ ಯಕ್ಷಗಾನ ಭಾಗವತರಾದ ಗಣಪಯ್ಯ, ತಾಯಿ ಸುಬ್ಬಮ್ಮ. ಪ್ರಾಥಮಿಕ ಶಿಕ್ಷಣ ಚೊಕ್ಕಾಡಿ. ಹೈಸ್ಕೂಲು ಓದಿದ್ದು ಪಂಜದಲ್ಲಿ  ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಎಂ.ಎ. (ಕನ್ನಡ) ಪದವಿ. ತಂದೆ ಯಕ್ಷಗಾನ ಕವಿ, ಭಾಗವತರಾದುದರಿಂದ ಕಿವಿಗೆ ಬೀಳುತ್ತಿದ್ದ ಲಯಬದ್ಧ ಹಾಡುಗಳು, ಹೈಸ್ಕೂಲಿಗೆ ನಡೆದು ಹೋಗುವಾಗ ಕಾಡಿನ ಮಧ್ಯೆ ಕೇಳುತ್ತಿದ್ದ ನೀರಿನ ಝುಳು ಝುಳು ನಾದ, ಹಕ್ಕಿಗಳ ಕೂಗು, ಮರಗಳ ಮರ್ಮರತೆಯಿಂದ ಪ್ರಭಾವಿತರಾಗಿ ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಕವನ ಕಟ್ಟುವ ಕಾಯಕ ಪ್ರಾರಂಭ. ಉದ್ಯೋಗಕ್ಕಾಗಿ ...

READ MORE

Related Books