ಸೂರು ಸೆರೆಹಿಡಿಯದ ಹನಿಗಳು’ ಅಜಿತ ಹೆಗಡೆಯವರ ಕವನ ಸಂಕಲನ ಈ ಸಂಕಲನದಲ್ಲಿ 64 ಕವಿತೆಗಳಿವೆ. ಎಸ್ ಎನ್ ಸೇತುರಾಮ್ ಮುನ್ನುಡಿ, ಮಮತಾ ಅರಸೀಕೆರೆ ಅವರ ಆಶಯ ನುಡಿ, ರೇಣುಕಾ ರಮಾನಂದ ಅವರು ಬೆನ್ನುಡಿ ಬರೆದಿದ್ದಾರೆ.
ಮಮತಾ ಅರಸಿಕೆರೆ ಅವರು ಈ ಸಂಕಲನದ ಕವಿತೆಗಳ ಬಗ್ಗೆ ಹೀಗೆ ಬರೆದಿದ್ದಾರೆ-
ಡಾ. ಅಜಿತರ ಕವನ ಸಂಕಲನದ ಶೀರ್ಷಿಕೆಯೇ ಆಕರ್ಷಕವಾಗಿದೆ. ಸೂರು ಸೆರೆಹಿಡಿಯದ ಹನಿಗಳು ಸಂಕಲನದಲ್ಲಿ ಒಟ್ಟು ಅರವತ್ತನಾಲ್ಕು ಪದ್ಯಗಳಿವೆ. ಇವೆಲ್ಲಾ ಸಂಬಂಧಗಳ ಬಗ್ಗೆ, ವಿಷಾದ, ಎಚ್ಚರಿಕೆ, ತನ್ಮಯತೆ, ಪ್ರೇಮ, ವಿರಹ, ವ್ಯಸನ, ಅಟ್ಟಹಾಸ ಮೊದಲಾದ ವಿವಿಧ ಅಂಶಗಳ ಬಗ್ಗೆ ಮಾತನಾಡುತ್ತವೆ. ಕೆಲವು ಪದ್ಯಗಳು ನಿರ್ಲಿಪ್ತವಾಗಿ ಪರಿಸ್ಥಿತಿಯ ವಾತಾವರಣದಿಂದ ಹೊರನಿಂತು ರಚಿಸಿಕೊಂಡಂತೆ ಬರೆಸಿಕೊಂಡಿವೆ. ಮತ್ತೂ ಕುತೂಹಲವೆಂದರೆ ಕವನ ಸಂಕಲನದ ಶೀರ್ಷಿಕೆಯ ಮಾತು ಹಾಗಿರಲಿ ಕೆಲವು ಪದ್ಯಗಳ ಶೀರ್ಷಿಕೆಗಳಂತೂ ಅಚ್ಚರಿಗೀಡುಮಾಡುತ್ತವೆ. ನ್ಯಾಸಾಂತರ, ಹೇತ್ವಾಭಾಸ, ನಿಲಿಕೆ, ಮರುದ್ರುಮ, ಜಂಝೂನಿಳ ಹೀಗೆ ವಿಶಿಷ್ಟವೆನಿಸುವ ಶೀರ್ಷಿಕೆಗಳನ್ನೂ ಎಚ್ಚರಿಕೆಯಿಂದ ಆಯ್ಕೆ ಮಾಡಿ ಪದ್ಯಕ್ಕೆ ಒಗ್ಗಿಸಿ ಹೆಸರಿಟ್ಟ ಹಾಗಿದೆ. ಮತ್ತೆ ಕೆಲವು ಪದ್ಯಗಳನ್ನು ಶೀರ್ಷಿಕೆಗೆಂದೇ ಜೋಡಿಲಾಗಿದೆ ಎನಿಸುತ್ತದೆ. ಉದಾಹರಣೆಗೆ ಯಾಯತಿಯ ಯೌವನ, ಪಠ್ಯಕ್ರಮದಾಚೆ ಮೊದಲಾದವು' ಎಂದು ವಿವರಿಸಿದ್ದಾರೆ.
ಲೇಖಕ ಡಾ. ಅಜಿತ್ ಹರೀಶಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹರೀಶಿ ಗ್ರಾಮದವರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹುಟ್ಟೂರಿನ ಸರ್ಕಾರಿ ಶಾಲೆಗಳಲ್ಲಿ, ಪದವಿಪೂರ್ವ ಶಿಕ್ಷಣವನ್ನು ಶಿರಸಿಯಲ್ಲಿ ಮುಗಿಸಿರುತ್ತಾರೆ. ಆಯುರ್ವೇದ ಮಹಾವಿದ್ಯಾಲಯ, ಹುಬ್ಬಳ್ಳಿಯಲ್ಲಿ ವೈದ್ಯಕೀಯ ಪದವೀಧರರಾದ ಇವರು, ಆಕ್ಯುಪಂಕ್ಚರ್ ಚಿಕಿತ್ಸೆ , ಹಿಪ್ನೋಥೆರಪಿಯಲ್ಲಿಯೂ ಪರಿಣಿತರು. ಪ್ರಸ್ತುತ ಹರೀಶಿಯಲ್ಲಿ ಖಾಸಗಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಬರವಣಿಗೆಯನ್ನು ತಮ್ಮ ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಬಿಳಿಮಲ್ಲಿಗೆಯ ಬಾವುಟ, ಸೂರು ಸೆರೆಹಿಡಿಯದ ಹನಿಗಳು, ಕನಸಿನ ದನಿ ಪ್ರಕಟಿತ ಕವನ ಸಂಕಲನಗಳು. ಪರಿಧಾವಿ, ಕಾಮೋಲ ಮತ್ತು ಮೂಚಿಮ್ಮ ಪ್ರಕಟಿತ ಕಥಾಸಂಕಲನಗಳು. ಕಥಾಭರಣ ಸಂಪಾದಿತ ಕೃತಿಯಾಗಿದೆ. ಆರೋಗ್ಯದ ಅರಿವು ...
READ MORE