ಬೆಳಗು ಭಾಗ್ಯವಂತ- ತಿರುಪತಿ ನಾಯಕ್ ಅವರ ಚೌಪದಿಗಳ ಬೃಹತ್ ಸಂಕಲನ. ಅನೇಕ ಸಾಹಿತ್ಯಕ ಕೃತಿಗಳನ್ನು ಹೊರತಂದಿರುವ ತಿರುಪತಿ ನಾಯಕ್ ಅವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದಾರೆ. ಬರವಣಿಗೆಯ ಹವ್ಯಾಸ ಹೊಂದಿರುವ ಇವರು ಕಥೆ, ಕವನ, ಪ್ರಬಂಧ, ನಾಟಕ, ಕಾದಂಬರಿ ಹಾಗೂ ಸಾತ್ವಿಕ ವಚನಗಳ ಮಾದರಿಯಲ್ಲಿ ಚೌಪದಿಗಳನ್ನು ರಚಿಸಿರುತ್ತಾರೆ ಈಗಾಗಲೇ ಸನ್ಮತಿಯೆಂಬ ಚೌಪದಿ ಗ್ರಂಥ ಬಿಡುಗಡೆ ಮಾಡಿರುವ ನಾಯಕ್ ಅವರು, ಈಗ ಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ' ಭಾಗ್ಯವಂತ' ಕಾವ್ಯನಾಮದ ಚೌಪದಿಗಳನ್ನು ಬರೆದು 'ಬೆಳಗು ಭಾಗ್ಯವಂತ' ವೆಂಬ ಕೃತಿಯ ಮೂಲಕ ವಿಶಿಷ್ಟ ಪುಸ್ತಕ ಹೊರತಂದಿದ್ದಾರೆ. ಹತ್ತಾ ರು ಸಾಲುಗಳಲ್ಲಿ ಹೇಳುವದನ್ನು ನಾಲ್ಕೇ ಸಾಲುಗಳಲ್ಲಿ ಹೇಳಿ ಸಾತ್ವಿಕ ಚಿಂತನೆಗೆ ಹಚ್ಚುವ ಕವಿ ತಿರುಪತಿ ನಾಯಕ್ ಪ್ರಯತ್ನ ಮೆಚ್ಚುವಂತಹದ್ದು.
ತಿರುಪತಿ ನಾಯಕ್- 1968ರಲ್ಲಿ ರಾಯಚೂರು ಜಿಲ್ಲೆ ಲಿಂಗಸಗೂರು ತಾಲ್ಲೂಕು, ಆಶಿಹಾಳ ತಾಂಡದಲ್ಲಿ ಜನಿಸಿದರು. ಆಶಿಹಾಳ್, ಮುದಗಲ್, ಮುದ್ದೇಬಿಹಾಳ್, ಧಾರವಾಡ, ಚಿದಂಬರಂ ಊರುಗಳಲ್ಲಿ ವ್ಯಾಸಂಗ, ಕನ್ನಡ, ಅರ್ಥಶಾಸ್ತ್ರಗಳಲ್ಲಿ ಸ್ನಾತಕೋತ್ತರ ಪದವಿ. ಮಲೆನಾಡಿನ ವಿವಿಧ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕ ವೃತ್ತಿ. ಕನ್ನಡ ಸಾಹಿತ್ಯ ಪರಿಷತ್ತು, ಭಾರತೀಯ ರೆಡ್‌ಕ್ರಾಸ್‌ನಲ್ಲಿ ಸಕ್ರಿಯ ಸೇವೆ. ಕನ್ನಡದ ಪ್ರಸಿದ್ದ ಪತ್ರಿಕೆಗಳಲ್ಲಿ ಬರೆದ ಅನುಭವ. ಆಕಾಶವಾಣಿಗಳಲ್ಲಿ ಹಲವಾರು ಚಿಂತನಗಳು, 'ಹಳ್ಳಿಗಳು ಸಾಯುತ್ತಿವೆ' ಪ್ರಬಂಧ ಸಂಕಲನಕ್ಕೆ ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, 'ಗಂಧ ಕುಸುಮ', 'ಭಾವ ಬಯಲು', 'ದೀಪವಿಲ್ಲದ ದಾರಿ', 'ದಮನಿತೆ' ಕವನ ಸಂಕಲನಗಳು. 'ಮುಳುಗಿದವರು', 'ನದಿ ...
READ MORE