ಕವಿ ನಾಗರಾಜ ಹೆಗಡೆ ಅಪಾಲ ಅವರ ’ಸಣ್ಣ ಬೆಂಕಿ’ ಕೃತಿಯು ಕವನಸಂಕಲನವಾಗಿದೆ. 36 ಕವಿತೆಗಳನ್ನು ಈ ಸಂಕಲನ ಒಳಗೊಂಡಿದ್ದು ಇಲ್ಲಿನ ಎಲ್ಲಾ ಕವಿತೆಗಳು ವಿಶಿಷ್ಟ ಎನಿಸುವ ಅನುಭವಗಳನ್ನು ಕಟ್ಟಿಕೊಡುತ್ತದೆ. ‘ಸಣ್ಣ ಬೆಂಕಿ’ ಅನ್ನುವ ವಿಚಾರವೇ ಹೊಸ ತುಡಿತವಾಗಿ ಮೂಡಿದ್ದು, ಸುಖೋಷ್ಟವಾದ, ಬೆಚ್ಚಗಿನ ತಾಯಿಯ ಅಪ್ಪುಗೆ, ಹಸುವಿನ ಕೆಚ್ಚಲಿಂದ ಆಗ ತಾನೆ ಕರೆದ ಹಾಲಿನ ಧಾರೆ, ಮೊಟ್ಟೆಗೆ ಕಾವು ಕೊಡುವ ಹಕ್ಕಿಯ ಮೈಯ್ಯ ಶಾಖ, ತಿಂದಿದನ್ನು ಅರಿವಿಗೆ ಬಾರದಂತೆ ಅರಗಿಸುವ ಜೀರ್ಣಾಗ್ನಿ, ಚಳಿಗಾಲದಲ್ಲಿ ಸಣ್ಣಗೆ ಉರಿವ ಅಗ್ಗಷ್ಠಿಕೆ, ಎಂದೂ ಆರದಂತೆ ಕಾಪಾಡಬೇಕಾದ ದೇವರ ಮನೆಯ ನಂದಾದೀಪ, ಹೊರಗೆ ಕಾಣದೆ ಅಡಗಿ ಥಳಥಳಿಸುವ ಚಿಗುರಿನಲ್ಲಿ ತಾನೇತಾನಾಗಿ ಹೊಳೆಯುವ ಮರದೊಳಗಿನ ಮಂದಾಗ್ನಿ ಹೀಗೆ ಇವೆಲ್ಲವನ್ನೂ ವಿವರಿಸುತ್ತಾ ಪ್ರೀತಿಯ ಆಸಕ್ತಿಯನ್ನುಇಲ್ಲಿಯ ಕವನಗಳು ವಿವರಿಸುತ್ತವೆ.
ಪುಸ್ತಕದ ಅನುಕ್ರಮದಲ್ಲಿ ನೀರು ಸೇದುವುದೆಂದರೆ, ಬಾಳೆಗದ್ದೆಯ ಭಟ್ಟರು, ಸಣ್ಣ ಬೆಂಕಿ, ಪಟಾಕಿ, ಜೀವನದಿ, ಕಾಶ್ಮೀರದ ಕಣಿವೆ, ಹಾವು-ಕೋಲು, ಮದುವೆಗೆ ತಂದ ಗುಲಾಬಿ, ಇಳಿಜಾರು, ಸೆಲ್ಫಿ, ಲೋಕ, ನಮ್ಮೂರು, ಕೆರೆಮನೆಯ ಕೇದಿಗೆಗೆ, ಚಿಟ್ಟಾಣಿ, ದಾರಿ, ಅಪರಂಜಿ, ಸಂತೆ, ಉಂಬುಳ, ಬಿಡುಗಡೆ, ದೇವರೆಂದರೂ, ಅಮ್ಮ, ಮರವೊಂದು ನೆರಳಾಗಲು, ಅಪ್ಪ ಮುಂತಾದ ಶೀರ್ಷಿಕೆಗಳ ಕವನಗಳಿವೆ.
ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಅಪಗರದಲ್ಲಿ 27-05-1971ರಂದು ಜನಿಸಿದ ಇವರು ಹೊನ್ನಾವರ ಹಾಗೂ ಧಾರವಾಡದಲ್ಲಿ ವಿದ್ಯಾಭ್ಯಾಸವನ್ನು ಮಾಡಿದರು. ಹೊನ್ನಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯಕ್ಷಗಾನ, ಕೃಷಿ, ಸಮುದಾಯ ಶಿಕ್ಷಣ, ಪರಿಸರ ಸಂರಕ್ಷಣೆ, ಸಂಗೀತಗಳಲ್ಲಿ ಸಮಾನ ಆಸಕ್ತಿ. ಕಣ್ಣಂಚಿನ ಕಡಲು ಪ್ರಕಟಿತ ಕವನ ಸಂಕಲನ. ಸಹಸ್ರ ಶೀರ್ಷ, ಅಭಿಯಾನ, ರಾಗಾನುರಾಗ, ಗಣನಾಯಕ, ದಾಂಪತ್ಯ ದೀವಿಗೆ, ಸಮಾಜ ಸಂಸ್ಕೃತಿ -ಸಂಪಾದಿತ ಕೃತಿಗಳು. ಹಲವು ಪತ್ರಿಕೆಗಳಲ್ಲಿಇವರ ಕವನ, ಲೇಖನಗಳು ಪ್ರಕಟಗೊಂಡಿವೆ. ...
READ MORE