‘ಹಕ್ಕಿಗೊಂದಿಷ್ಟುಜಾಗ ಬಿಡು’ ಮೀನಾ ಸದಾಶಿವ ಅವರ ಕವನಸಂಕಲನವಾಗಿದೆ. ಇಂದು ಇದ್ದು ನಾಳೆ ಇಲ್ಲವಾಗುವ ಕ್ಷಣಿಕ ಆನಂದವನ್ನು ಕವಿಯು ಈ ಸಂಕಲನದಲ್ಲಿ ತಿಳಿಸಿದ್ದಾರೆ.
ಹೊಸತು-2002-ಮಾರ್ಚ್
ನಿಸರ್ಗದ ಎಲ್ಲ ಸುಂದರ ವಸ್ತುಗಳನ್ನು ಪ್ರೀತಿಸುವ ಕವಿಯ ಮನಸ್ಸು ಸರಳವಾಗಿ ನೇರ ಅಭಿವ್ಯಕ್ತಿಯ ಮೂಲಕ ತನ್ನ ಭಾವನೆಗಳನ್ನು ಸುರಿಸುತ್ತದೆ. ಇಂದು ಇದ್ದು ನಾಳೆ ಇಲ್ಲವಾಗುವ ಕ್ಷಣಿಕ ಆನಂದವನ್ನು ಕೊಡುವ ವಸ್ತು-ಚೈತನ್ಯದೊಂದಿಗೆ ಹುಲು ಮಾನವನ ಮನಸ್ಸನ್ನು ತುಲನೆ ಮಾಡುವ ಪ್ರಯತ್ನ, ಸಹಬಾಳ್ವೆಯ ಮಹತ್ವವನ್ನು ಕಲಿಸಲು ಮಾತಿಗೂ ಮೀರಿದ ಒಂದು ವ್ಯವಸ್ಥೆ ನಮಗೆ ಬೋಧಿಸುತ್ತಲೇ ಇರುವುದನ್ನು ನಮ್ಮ ಗಮನಕ್ಕೆ ಕವಿತೆಗಳ ಮೂಲಕ ತರಲಾಗಿದೆ. 93 ಕವಿತೆಗಳ ಸಂಕಲನ.