`ಮಾವು- ಬೇವು’ ಕೃತಿಯು ದೊಡ್ಡರಂಗೇಗೌಡ ಅವರ ಭಾವಗೀತೆಗಳ ಸಂಕಲನವಾಗಿದೆ. ಈ ಕೃತಿಯು ಪರಿಸರದ ಕುರಿತ ವಿಚಾರವನ್ನು, ಪ್ರೀತಿಯನ್ನು ತಿಳಿಸುತ್ತದೆ. ಪರಿಸರವು ಮಾನವನಿಗೆ ಹಲವಾರು ವಿಧದಲ್ಲಿ ಒಳಿತನ್ನೇ ಮಾಡುತ್ತಿದೆ ಎನ್ನುವಂತಹ ಆಶಯವನ್ನು ಈ ಸಂಕಲನವು ಒಳಗೊಂಡಿದೆ. ಕೃತಿಯಲ್ಲಿನ ಒಂದು ಕವಿತೆ ಹೀಗಿದೆ; ನಿಮ್ಮ ಸಾಧನೆ ಸಾಗರದಂತೆ ವಿಶಾಲ ನಾನಿಲ್ಲಿ ಬನದ ಹೂವಂತೆ ಒಂದು ದಳ! ಸಂಗೀತ ಸಾಗರ ಆಪೋಶನ ಪಡೆದ ಅಗಸ್ತ್ಯರಂತೆ ಜ್ಞಾನದ ಕಡಲು, ನಾನಿಲ್ಲಿ ಉಪ್ಪುಖಾರದ ಜೀವಿ ಜೀವನ ನೌಕೆಯ ಕೊಳಲು ನಿಮ್ಮಿಂದ ಸ್ವರ ಪ್ರಸಾರ ಅರಿತೆ ನಿಮ್ಮೊಡನೆ ಸತತ ಐದು ದಶಕ ಬೆರೆತೆ; ನಿಮ್ಮ ಗಾನ ಮಾಧುರ್ಯಕೆ ಮುದದಿಂದ ಪದ ಕೂಡಿಸಿದವನು, ಎಲ್ಲಿಯ ನೀವು? ಎಲ್ಲಿಯ ನಾನು! ನಿಮ್ಮ ಒಡನಾಟದಲ್ಲಿ ಸಂಗೀತ ಸಾಹಿತ್ಯ ರಸಧಿಯ ಅಮೃತ ಈಂಟಿದವನು! -ದೊಡ್ಡರಂಗೇಗೌಡ
ಕವಿ, ಸಾಹಿತಿ ಮನುಜ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ದೊಡ್ಡರಂಗೇಗೌಡ ಅವರು, ತುಮಕೂರು ಜಿಲ್ಲೆ ಕುರುಬರಹಳ್ಳಿಯಲ್ಲಿ 1946 ಫೆಬ್ರುವರಿ 7ರಂದು ಜನಿಸಿದರು. ತಂದೆ ರಂಗೇಗೌಡ, ತಾಯಿ ಅಕ್ಕಮ್ಮ. ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಇವರು, ‘ಕನ್ನಡ ನವೋದಯ ಕಾವ್ಯ- ಒಂದು ಪುನರ್‌ಮೌಲ್ಯಮಾಪನ ’ ಎಂಬ ಪ್ರಬಂಧ ಮಂಡಿಸಿ ಪಿಎಚ್‌ಡಿ ಪಡೆದರು. ಬೆಂಗಳೂರಿನ ಎಸ್.ಎಲ್.ಎನ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಾಲೇಜು ದಿನಗಳಲ್ಲೇ ಕವನ, ಕತೆ ರಚನೆಯಲ್ಲಿ ತೊಡಗಿಕೊಂಡಿದ್ದ ಇವರು ಸುಮಾರು 500ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ಬರೆದಿದ್ದಾರೆ. ಕಾವ್ಯ, ವಿಮರ್ಶಾ ಕೃತಿಗಳು, ಭಾವಗೀತೆ ಹಾಗೂ ...
READ MORE