‘ಕನ್ನಡ ಕವಿ ಕಾವ್ಯ ಕುಸುಮ-35’ ಸುಂದರ ಪ್ರಕಾಶನದ ‘ಕನ್ನಡ ಕವಿ ಕಾವ್ಯ ಕುಸುಮ’ ಯೋಜನೆಯಲ್ಲಿ ಪ್ರಕಟವಾದ ಕೃತಿ. ಈ ಕೃತಿಯನ್ನು ಹಿರಿಯ ಕವಿ ಬಿ.ಆರ್. ಲಕ್ಷ್ಮಣರಾವ್ ಹಾಗೂ ಪ್ರಕಾಶಕಿ ಇಂದಿರಾ ಸುಂದರ್ ಅವರು ಸಂಪಾದಿಸಿದ್ದಾರೆ. ಇಲ್ಲಿ ರೇಣುಕೆ, ಹೇಗೆ ಹಾಡಲೇ, ಕಾದರು..ಕಾದರು..ನಕ್ಕರು..ಅತ್ತರು, ಈವ್ ಉರಿವ ದಿನ, ಕಹಿ ಯುಗಾದಿ, ಅವಳು ಮತ್ತವಳ ನಡುವೆ, ನಂ ರಾವಣ, ಬತ್ತಲೆ ರಾಜ್ಯ, ಎರಡು ಸೂರುಗಳಡಿ, ಸಾಂಗತ್ಯ ಗೀತ, ಬಿಸಿಲ ಹೂವಿನ ಭ್ರಮರಿ, ಭೂಖ, ಇಳೆಯ ಹಾಡು, ಧರೇಶ್ವರಿ ವಚನಗಳು, ಅದೇ ಹಳೆ ಮುದುಕಿ, ಅವಳು, ಮೂವತ್ತಾರು ವರ್ಷ ಋತು ಹಾಗೂ ಸಖಿಗೆ ಎಂಬ ಕವಿತೆಗಳು ಸಂಕಲನಗೊಂಡಿವೆ.
ಕವಿ, ಕತೆಗಾರ, ವಿಮರ್ಶಕ ಹಾಗೂ ಚಲನಚಿತ್ರಕಾರ ಬಿ.ಆರ್. ಲಕ್ಷ್ಮಣರಾವ್ ಅವರು 1946 ಸೆಪ್ಟೆಂಬರ್ 9ರಂದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಗಟ್ಟ ತಾಲ್ಲೂಕಿನ ಚೀಮಂಗಲದಲ್ಲಿ ಜನಿಸಿದರು. ತಂದೆ ರಾಜಾರಾವ್. ತಾಯಿ ವೆಂಕಟಲಕ್ಷ್ಮಮ್ಮ. ಚಿಂತಾಮಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಚಿಂತಾಮಣಿಯ ಪ್ರೌಢಶಾಲೆ ಉಪಾಧ್ಯಾಯರಾಗಿ ವೃತ್ತಿ ಆರಂಭಿಸಿದ ಇವರು ವಿನಾಯಕ ಟುಟೋರಿಯಲ್ಸ್‌ನ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಸಂಪೂರ್ಣವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಲಿಲ್ಲಿ ಪುಟ್ಟಿಯ ಹಂಬಲ, ಶಾಂಗ್ರಿ-ಲಾ, ಅಪರಾಧಂಗಳ ಮನ್ನಿಸೊ, ಗೋಪಿ ಮತ್ತು ...
READ MORE