ನಾಗರ ನುಂಗಿದ ನವಿಲು

Author : ವೀರಣ್ಣ ಮಡಿವಾಳರ

Pages 120

₹ 150.00




Year of Publication: 2023
Published by: ವಿಭಾ ಪ್ರಕಾಶನ
Address: ಬೆಂಗಳೂರು

Synopsys

"ನಾಗರ ನುಂಗಿದ ನವಿಲು" ಕೃತಿ ವೀರಣ್ಣ ಮಡಿವಾಳ ಅವರ ಕವನಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿ ಕವಯಿತ್ರಿ ರೂಪ ಹಾಸನ ಹೀಗೆ ಹೇಳುತ್ತಾರೆ; ಎಲ್ಲಕ್ಕೂ ಸಾಕ್ಷಿ ಕೇಳುತ್ತದೆ ಜಗತ್ತು, ಅಂತಿಮ ಸತ್ಯ ನನಗೆ ನಿನಗೆ ಗೊತ್ತು ಎಂಬುದು ಅವನು ತನ್ನ ಪ್ರೀತಿಗೆ ಮಾತಿಲ್ಲದೇ ನೀಡ ಬಯಸುವ ಆಶ್ವಾಸನೆ. ಆ ಸತ್ಯವೂ ಪ್ರೀತಿಗೆ ಅರ್ಥವಾಗುವುದಿಲ್ಲವೆಂದಾದರೆ ನಿನ್ನ ತಲುಪದಿರುವ ಈ ಕವಿತೆಗಳಿಗೆ ಬೆಂಕಿ ಹಚ್ಚಿ... ನಡೆದು ಬಿಡಲು ಬಯಸುವವ! ತೊಟ್ಟು ತೊಟ್ಟಿನ ಕಡು ಕಪ್ಪು ವಿಷವನ್ನು ಕುಡಿದು, ಬಣ್ಣ ಬಣ್ಣದ ಗರಿಗಳ ನವಿಲಾಗುವವರೆಗೆ... ಹೀಗೇ ವೀರಣ್ಣನ ಈ ಹೊಸ ಕವನ ಸಂಕಲನ ನಾಗರ ನುಂಗಿದ ನವಿಲು ತುಂಬೆಲ್ಲಾ ಯಾತನೆಯ ನವಿಲು, ಬಣ್ಣಬಣ್ಣದ ಗರಿ ಬಿಚ್ಚಿ ಭಾವೋನ್ಮಾದದಲಿ ಕುಣಿಯುತ್ತದೆ. ಹಾಡುತ್ತದೆ. ಅರಳುತ್ತದೆ... ಅರಿವಿಗೇ ಬರದಂತೆ ಎದೆಗಳಲ್ಲಿ ಅದರ ಘಮಲು ಹರಡುತ್ತಾ ಮುಚ್ಚಿರುವ ಜೀವ ಕಾರುಣ್ಯದ ಕಣ್ಗಳ ತೆರೆಯುತ್ತಾ... ಕಣ್ಣೀರ ನದಿಯಾಗಿ ಹರಿಯುತ್ತದೆ. ಅನಂತ ಬಯಲಿಗೆ ಹಾರುತ್ತದೆ! ಕಾವ್ಯದ ಈ ಶಕ್ತಿಗೆ ಮಾತಿಲ್ಲದೇ ವಿಸ್ಮಿತಳಾಗಿದ್ದೇನೆ ಎನ್ನುತ್ತಾರೆ.

About the Author

ವೀರಣ್ಣ ಮಡಿವಾಳರ
(01 September 1983)

ವೀರಣ್ಣ ಮಡಿವಾಳ ಅವರು ಸೆಪ್ಟೆಂಬರ್ 01, 1983ರಂದು ಜನಿಸಿದರು. ಕಲಿವಾಳ, ಕಲಕೇರಿ, ಸಿರಿಗೆರೆ, ಮುಂಡರಗಿ, ಕೊಪ್ಪಳ ಮತ್ತು ಗುಲ್ಬರ್ಗದಲ್ಲಿ ವಿದ್ಯಾಭ್ಯಾಸ. 2007 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸವಣೂರು ತಾಲ್ಲೂಕಿನ ಮೆಳ್ಳಾಗಟ್ಟಿ ಪ್ಲಾಟ್ ನಲ್ಲಿ ಸೇವೆ ಆರಂಭ. ಸದ್ಯ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗಾವಡ್ಯಾನವಾಡಿಯಲ್ಲಿ ವೃತ್ತಿ. ಗುಲ್ಬರ್ಗಾದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಪ್ರಥಮ ರ್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2010ರಲ್ಲಿ 'ನೆಲದ ಕರುಣೆಯ ದನಿ' ಕವನ ಸಂಕಲನ ಮತ್ತು ಆಡಿಯೋ ಬುಕ್ ಪ್ರಕಟವಾಗಿದೆ. ಚಿತ್ರ ಮತ್ತು ಫೊಟೋಗ್ರಫಿಯಲ್ಲೂ ಕವಿತೆಯನ್ನೇ ಹುಡುಕುತ್ತಿರುವ ವೀರಣ್ಣ 2013 ...

READ MORE

Related Books