ಜೀವನದ ದಿನ ನಿತ್ಯದ ಆಗು ಹೋಗುಗಳ ಅನುಭವಿಸುತ್ತ, ಚಿಕ್ಕ ಪುಟ್ಟ ವಿಷಯಗಳಲ್ಲೂ ಸ್ವಾರಸ್ಯವನ್ನು ಕಾಣುತ್ತ, ತನ್ನನ್ನು ಪ್ರಬುದ್ದತೆಯ ಹಾದಿಗೆ ಕರೆದೊಯ್ದ ಜೀವನ ಪಾಠಗಳು, ಮಕ್ಕಳ ಬಾಲ್ಯದ ತುಂಟಾಟಗಳು, ನಿಸರ್ಗದ ರಮಣೀಯ ದೃಶ್ಯಗಳು, ಜೀವನದ ಹಲವು ಕ್ಷಣಗಳಲ್ಲಿ ಅನುಭವಿಸಿದ ಮಧುರ ಭಾವನೆ, ನೆನಪುಗಳು ಹೀಗೆ ಹಲವು ವಿಭಿನ್ನ ಲೋಕದ ಅನುಭವಗಳನ್ನು ಕವನದ ರೂಪದಲ್ಲಿ ಹಿಡಿದಿಡುವ ಪ್ರಯತ್ನವೇ "ನೆರಳ ಹೆಜ್ಜೆ". ನೆರಳ ಹೆಜ್ಜೆ ಕೃತಿಯು ಲೇಖಕರ ಮೊದಲ ಪುಸ್ತಕ ಹಾಗು ಇದೊಂದು ಕವನ ಸಂಕಲನವಾಗಿದೆ.