“ಸೂಜಿಮೊಗದ ಸುಂದರಿ” ಕೃತಿಯು ಚಾಂದಿನಿ ಖಲೀದ್ ಅವರ ಕವನಸಂಕಲನವಾಗಿದೆ. ಹೆಣ್ಣಿನ ಭಾವನಲಹರಿಯನ್ನು ವರ್ಣಿಸಿದ ರೀತಿ ಇಲ್ಲಿ ಬಹಳ ಭಿನ್ನವಾಗಿದೆ. ಓದುವ ಮನಸ್ಸನ್ನು ಸೂಜಿಗಲ್ಲಿನಂತೆ ಸೆಳೆಯುವ ಸರಳವಾದ ಚಿತ್ರಣವಿಲ್ಲಿದೆ. “ಮತ್ತೆ ಮತ್ತೆ ಕತ್ತ್ಹೊರಳಿಸಿ ಬೀರುತಿಹಳು ಹೂನಗೆಯ ಸೂಜಿ ಮೊಗದ ಸುಂದರಿ ಊಟದ ಪಂಕ್ತಿಯ ಕಡೆಯ ಸಾಲಿನಲಿ ಬಹು ಜನರ ಬಹುತೇಕ ಭಾವ-ಸಂಗಮದಲಿ ಸರಳತೆಯ ಸಿರಿಯಿವಳು ಮಾಸಿದ ವಸ್ತ್ರಗಳಲಿ ಅರಲಿದೆ ಇವಳ ಮುಖ-ಕಾಂತಿ ಇಬ್ಬದಿಯ ಮೂಗುತಿ ಬಿಂಬಿಸಿದೆ ಹೊನ್ನಹೊಳಪು ಚೆಂದುಟಿಯಲಿ ಶಶಿಕಾಂತ ಸವಿಗೆನ್ನೆಯ ನವಿರು ತಾಣದಲಿ “ಮತ್ತೆ ಮತ್ತೆ ಕತ್ತು ಹೊರಳಿಸುವ’, ‘ಹೂನಗೆಯ ಬೀರುವ’, ‘ಊಟದ ಪಂಕ್ತಿ’ ಮತ್ತು ‘ಕಡೆಯ ಸಾಲು’ ಈ ನಾಲ್ಕೂ ಸಾಲುಗಳನ್ನು ಬಿಡಿ ಬಿಡಿಯಾಗಿ ನೋಡಿದಾಗ ಇಲ್ಲದ ಧ್ವನಿಯೊಂದು, ಅವೆಲ್ಲವನ್ನು ಒಟ್ಟಿಗೇ ಓದಿದಾಗ ಉಂಟಾಗುತ್ತದೆ. ಇನ್ನು ಈ ಕವಿತೆಗಳ ಮುಖ್ಯ ಧಾಟಿ ಬಿಗುಮಾನವಿಲ್ಲದ ನಿವೇದನೆಯದು. ಅಷ್ಟೇ ಅಲ್ಲದೆ ಕೆಲವು ಕವಿತೆಗಳಲ್ಲಿ ಜೀವನ ಪ್ರೀತಿಯ ವಿಸ್ತರಣೆಯೇ ಆಗಿರುವ ‘ಪ್ರೇಮದ ಸಖ್ಯದ’ ರಮ್ಯ ಪ್ರಲಾಪವೂ ಇದೆ.
ಚಾಂದಿನಿ ಖಲೀದ್ ಅವರು ಮೂಲತಃ ಚಿತ್ರದುರ್ಗದವರು. ಪ್ರೌಢಶಾಲಾ ವಿಭಾಗದ ಹಿಂದಿ ಭಾಷಾ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಣೆ. ‘ಅವನಿ’ ಕಾವ್ಯನಾಮದಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಅವರಿಗೆ, ಕನ್ನಡ ಭಾಷೆ ಹಾಗೂ ಸಾಹಿತ್ಯದ ಕುರಿತು ಒಲವಿದೆ. ಚಿತ್ರದುರ್ಗ ಆಕಾಶವಾಣಿಯಲ್ಲಿ ಹಿಂದಿ ಭಾಷಾ ವಿಷಯ ತಜ್ಞರಾಗಿ ಹಲವಾರು ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿರುತ್ತಾರೆ. ಇವರು ‘ಹಿಂದಿ ಭಕ್ತಿ ಸಾಹಿತ್ಯಕ್ಕೆ ಮುಸಲ್ಮಾನ್ ಕೊಡುಗೆ’ ಎಂಬ ಮಹಾ ಪ್ರಬಂಧವನ್ನು ಮಂಡಿಸಿ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಕೃತಿಗಳು: ಸೂಜಿಮೊಗದ ಸುಂದರಿ ...
READ MORE