‘ಒಲವ ಸಿರಿ ಗರಿಕೆ’ ವಿಜಯಲಕ್ಷ್ಮೀ ನುಗ್ಗೇಹಳ್ಳಿ ಅವರ ಮೊದಲ ಕವನ ಸಂಕಲನ. ಡಾ. ಬಿ.ಎಂ. ಪುಟ್ಟಯ್ಯ ಅವರು ಮುನ್ನುಡಿ ಬರೆದು ‘ ವೃತ್ತಿಯಿಂದ ಕೆ.ಎಂ.ಎಸ್. ಅಧಿಕಾರಿ. ಕವನ ಕಟ್ಟಲು ಭಾವ- ಮನಸು ಹುರಿಗೊಂಡಾಗ ಈಗಾಗಲೇ ಓದಿದ ರೂಪಗಳು ಸಿದ್ಧಗೊಂಡ ದಾರಿಯಂತೆ ತೋರಬಹುದು. ತೋರದಿರಲೂಬಹುದು, ಸಿದ್ಧರೂಪಗಳನ್ನು ಅನುಸರಿಸಿ ಬರೆಯುವುದು ಸುಲಭ ಆದರೆ ಹೊಸರೂಪ ಹುಟ್ಟಿಸುವುದು ಕಷ್ಟ ಹಲವು ಕವನಗಳು ಹೊಸರೂಪ ಕಾಣಲು ಹವಣಿಸಿವೆ, ಆದ್ದರಿಂದ ಇವು ಭರವಸೆಯ ರಚನೆಗಳು. ಅನುಭವಗಳನ್ನು ತನ್ನದು ಮತ್ತು ತನ್ನದಲ್ಲದ್ದು ಎಂದು ವಿಂಗಡಿಸಿ, ಅವನ್ನು ಪರಸ್ಪರ ಮುಖಾಮುಖಿ ಮಾಡುವ, ಒಂದರ ಕಣ್ಣಿನಿಂದ ಮತ್ತೊಂದನ್ನು ನೋಡುವ ವಿನ್ಯಾಸ ಈ ರಚನೆಗಳ ಮುಖ್ಯ ಭಿತ್ತಿಯಾಗಿದೆ. ಹೆಣ್ಣಿನ ಮನಸ್ಸಿನಲ್ಲಿ ಹುಟ್ಟುವ ಭಾವಗಳನ್ನೂ, ಭಾವಗಳು ರೂಪಿಸುವ ಹೆಣ್ಣಿನ ಮನಸ್ಸನ್ನೂ ಇವುಗಳಲ್ಲಿ ಕಾಣಬಹುದು’ ಎಂದು ಪ್ರಶಂಸಿಸಿದ್ದಾರೆ.
ಲೇಖಕಿ ವಿಜಯಲಕ್ಷ್ಮೀ ಅವರು ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ನುಗ್ಗೇಹಳ್ಳಿಯವರು. ಎಂ.ಎ (ಕನ್ನಡ) ಸ್ನಾತಕೋತ್ತರ ಪದವೀಧರರು. ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ 4 ವರ್ಷ ಕಾಲ ಸೇವೆ ಸಲ್ಲಿಸಿ, 2006ರಲ್ಲಿ ಕರ್ನಾಟಕ ನಾಗರಿಕ ಸೇವಾ ಪರೀಕ್ಷೆ ತೇರ್ಗಡೆಯಾಗಿ, ಕರ್ನಾಟಕ ಸರ್ಕಾರದ ಕೃಷಿ ಮಾರಾಟ ಇಲಾಖೆಗೆ ಸೇರ್ಪಡೆಗೊಂಡರು. ಬಾಗಲಕೋಟೆ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಧಾರವಾಡದ ಕೃಷಿ ಮಾರಾಟ ಇಲಾಖೆಯ ಜಿಲ್ಲಾ ಮಾರುಕಟ್ಟೆ ಅಧಿಕಾರಿಯಾಗಿದ್ದರು. ಪ್ರಸ್ತುತ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಉಪನಿರ್ದೇಶಕಿಯಾಗಿದ್ದಾರೆ. ಜೊತೆಗೆ, ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಸಂಶೋಧನಾ ವಿದ್ಯಾರ್ಥಿಯೂ ಹೌದು. ‘ಒಲವ ಸಿರಿ ಗರಿಕೆ’ ಎಂಬುದು ...
READ MORE