‘ಪುಟಾಣಿ ಕೆಂಪು ಶೂ’ ಲೇಖಕಿ ಛಾಯಾ ಭಗವತಿ ಅವರ ಕವನ ಸಂಕಲನ. ಈ ಕೃತಿಗೆ ಜಿ.ಪಿ. ಬಸವರಾಜು ಅವರ ಬೆನ್ನುಡಿಯ ಬರಹವಿದೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ‘ಛಾಯಾ ಭಗವತಿ ಅವರ 19 ಕವನಗಳು ಹತ್ತೊಂಬತ್ತರ ಕವಿತೆಗಳೂ ಹೌದು. ಕಣ್ತುಂಬ ಕನಸುಗಳು, ಮೃದುಮಧುರ ಮಾತುಗಳು, ಬೆಣ್ಣೆಯಂತೆ ಕರಗಿ ಹೋಗುವ ಭಾವಗಳು, ಬಾಯಾರಿದ ಭೂಮಿಗೆ ಹನಿದು ಬರುವ ಮಳೆ ಅವನೂರಿನ ಕೆರೆ ಏರಿಯ ಮೇಲೆ ಅವಳು ನೆಟ್ಟುಬಂದ ಸವಿಗನಸಿನ ಗಿಡ, ಇವಳು ತೊಟ್ಟ ದಾವಣಿಯ ಕುಸುರಿಯೂ ಉಸುರುವುದು ಎಲ್ಲೆ ಹುಡುಗಿ ನಿನ್ನ ಚೆಲುವ…ಬದುಕಿನ ಈ ರಮ್ಯ ಭಾವಗಳನ್ನು ಮೊಗೆಮೊಗೆದು ಕೊಡುವಂತೆ ಮೈದುಂಬಿ ಬರೆಯುವ ಛಾಯಾ ಅವರ ಕವಿತೆಗಳು ಅರಳಿರುವುದೇ ಒಲವಿನಲ್ಲಿ. ನೇರವಾಗಿ ಹೃದಯಕ್ಕೆ ತಾಕುವಂತೆ ಭಾವಗಳನ್ನು ಉಕ್ಕಿಸಿ ಬರೆಯುವ ಕವಿತೆಗಳ ಚೆಲುವು ಇರುವುದೇ ಅವುಗಳ ಸರಳತೆಯಲ್ಲಿ, ಪ್ರಾಮಾಣಿಕತೆಯಲ್ಲಿ ಇಲ್ಲಿನ ಕೆಲವು ಕವಿತೆಗಳಲ್ಲಿ ಈ ಪ್ರಾಮಾಣಿಕತೆ, ಪಾರದರ್ಶಕತೆ ಒಡೆಗು ಕಾಣಿಸುತ್ತದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿರುವ ಛಾಯಾ ಭಗವತಿ ಹವ್ಯಾಸಿ ಬರಹಗಾರ್ತಿ. ಬೆಂಗಳೂರು ಆಕಾಶವಾಣಿಯ ಎಫ್ಎಂ ರೈನ್ ಬೋ ವಾಹಿನಿಯಲ್ಲಿ ಆರ್ ಜೆ (ರೇಡಿಯೊ ಜಾಕಿ) ಆಗಿ ಕೆಲಸ ಮಾಡಿರುವ ಛಾಯಾ ಅವರು ಕೆಲಕಾಲ ಪ್ರಿಸಂ ಬುಕ್ಸ್ ಪ್ರೈ ಲಿ. ನಲ್ಲಿ ಸಂಪಾದಕಿ, ಅನುವಾದಕಿ ಹಾಗೂ ಲೇಖಕಿಯಾಗಿ ಕಾರ್ಯ ನಿರ್ವಹಿಸಿದ್ದರು. ವಿಜಯನಗರ ಬಿಂಬ ರಂಗಶಿಕ್ಷಣ ಕೇಂದ್ರದಲ್ಲಿ ರಂಗಭೂಮಿ ಡಿಪ್ಲೊಮಾ ಮಾಡಿರುವ ಅವರಿಗೆ ನಟನೆ, ಫೋಟೋಗ್ರಫಿ, ಪ್ರವಾಸ, ಸಂಗೀತ, ಅನುವಾದ ಆಸಕ್ತಿಯ ಕ್ಷೇತ್ರಗಳು. ವೈಕಂ, ರಸ್ಕಿನ್ ಬಾಂಡ್ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿರುವ ಛಾಯಾ ಸ್ವಂತ ಕತೆ-ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ’ಪುಟಾಣಿ ...
READ MORE