ಭಾಗವತ ಭಾವಗೀತ

Author : ಡಾ. ಧರಣೀದೇವಿ ಮಾಲಗತ್ತಿ

Pages 148

₹ 150.00




Year of Publication: 2018
Published by: ಶ್ರೀಮಾತಾ ಪ್ರಕಾಶನ
Address: ಬೆಂಗಳೂರು

Synopsys

‘ಭಾಗವತ ಭಾವಗೀತ’ ಲೇಖಕಿ ಡಾ. ಧರಣೀದೇವಿ ಮಾಲಗತ್ತಿ ಅವರ ಕವನ ಸಂಕಲನ. ಈ ಕೃತಿಗೆ ಎಚ್.ಎಸ್. ವೆಂಕಟೇಶಮೂರ್ತಿ ಅವರ ಮುನ್ನುಡಿ ಬರಹವಿದೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ಡಾ. ಧರಣೀದೇವಿ ಉತ್ಕೃಷ್ಟವಾದ ಕಾವ್ಯ ಶಿಲ್ಪದ ಅನ್ವೇಷಣೆಯಲ್ಲಿ ಇರುವ ಮುಖ್ಯ ಕವಿ. ಅವರ ಯಶಸ್ಸು ಮುಂದೆ ಕನ್ನಡ ಕಾವ್ಯ ಜಗತ್ತಿನ ಯಶಸ್ಸೂ ಆಗಬಲ್ಲುದು ಅಂಥ ಯಶಸ್ಸನ್ನು ಅವರು ಪಡೆಯಲಿ ಎಂದು ಹಾರೈಸಿದ್ದಾರೆ. ಜೊತೆಗೆ ಈ ಕೃತಿಯ ಬೆನ್ನುಡಿಯನ್ನು ಡಾ.ಸಿ.ಎನ್. ರಾಮಚಂದ್ರನ್ ಅವರು ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ಡಾ. ಧರಣೀದೇವಿ ವೃತ್ತಿಯಲ್ಲಿ ಉನ್ನತ ಪೊಲೀಸ್ ಅಧಿಕಾರಿ, ಪ್ರವೃತ್ತಿಯಲ್ಲಿ ಸಾಹಿತಿ, ಆದರೂ ನನ್ನ ಮೊದಲ ಪ್ಯಾಶನ್ ಬರವಣೆಗೆಯೇ ಎಂದು ಮುಕ್ತವಾಗಿ ಹೇಳುವ ಧರಣಿದೇವಿ ಇದುವರೆಗೆ ಕಾವ್ಯ-ವಿಮರ್ಶೆ- ಅನುವಾದ ಇವೆಲ್ಲಾ ಸೇರಿದಂತೆ 17 ಕೃತಿಗಳನ್ನು ರಚಿಸಿದ್ದಾರೆ. ಅವರ ವೃತ್ತಿಗೆ ಅವಶ್ಯಕವಾದ ತಾಳ್ಮೆ, ಕೆಚ್ಚು, ಹಾಗೂ ಪ್ರಯೋಗಶೀಲತೆಗಳೇ ಕೃತಿ 2013 ರಲ್ಲಿ ಹೊರಬಂದ, ಭಾಮಿನಿ ಷಟ್ಪದಿಯಲ್ಲಿ ರಚಿಸಲ್ಪಟ್ಟ ಇಳಾ ಭಾರತಂ, ಹೆಸರು ಭಾರತಂ ಎಂದಿದ್ದರೂ ಅದರಲ್ಲಿ ಪಾಂಡವ - ಕೌರವರ ಕಥೆಯಲ್ಲದೆ, ಚಂದ್ರವಂಶದ ರಾಜರ ಕಾಲದಲ್ಲಿ ಪುರುಷಾಧಿಪತ್ಯದ ಕಾರಣದಿಂದ ನೊಂದ ಬೆಂದ ಸತ್ಯವತಿ, ತಾರೆ, ಇಳೆ, ದೇವಯಾನಿ, ಮಾಧವಿ ಮುಂತಾದ ಸ್ತ್ರೀಯರ ಕಥೆಗಳು ಪ್ರಧಾನವಾಗಿವೆ. ಈಗ ಹೊರಬಂದಿರುವ ಭಾಗವತ ಭಾವಗೀತವೂ ಮತ್ತೊಂದು ಮಹತ್ವಾಕಾಂಕ್ಷೆಯ ಕಾವ್ಯ ಎಂದಿದ್ದಾರೆ.

About the Author

ಡಾ. ಧರಣೀದೇವಿ ಮಾಲಗತ್ತಿ
(12 May 1967)

ಕವಿ, ಮಹಿಳಾಪರ ಸಾಹಿತಿ ಧರಣೀದೇವಿ ಮಾಲಗತ್ತಿ ಅವರು ಪೊಲೀಸ್ ಇಲಾಖೆಯಲ್ಲಿ ವಿವಿಧ ಉದ್ದೆಗಳನ್ನು ನಿರ್ವಹಿಸಿ ಸದ್ಯ ಐ.ಪಿ.ಎಸ್. ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವರಾದ ಧರಣೀದೇವಿಯವರ ತಂದೆ- ಪಿ.ದೂಮಣ್ಣ ರೈ, ತಾಯಿ- ದೇವಕಿ ಡಿ.ರೈ. ಕುಕ್ಕಾಜೆ. ಬಿಬಿಎಂ ಹಾಗೂ ಎಂ.ಕಾಂ. ಕನ್ನಡ ಎಂ.ಎ ಪದವೀಧರೆಯಾಗಿರುವ ಅವರು ನಿರ್ವಹಣಾ ಶಾಸ್ತ್ರದಲ್ಲಿ ಪಿ.ಹೆಚ್.ಡಿಯನ್ನು ಪಡೆದಿದ್ದಾರೆ.  1990ರಿಂದ 1991 ರ ವರೆಗೆ ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗದಲ್ಲಿ ಸಂಶೋಧನಾ ಸಹಾಯಕರಿಯಾಗಿ, 1991 ರಿಂದ 1993 ರ  ವರೆಗೆ ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, 1993ರಿಂದ 94ರ ವರೆಗೆ ...

READ MORE

Related Books