ಡಾ. ಕೆ. ಗಿರಿಮಲ್ಲ ಅವರ ಕವನ ಸಂಕಲನ-ಕಾವ್ಯ ಚಿಲುಮೆ. ಒಟ್ಟು 101 ಕವನಗಳಿವೆ. ಈ ಕವನಗಳನ್ನು ಅವುಗಳ ಕಾವ್ಯಾಂಶ-ಸ್ವಭಾವಗಳ ಹಿನ್ನೆಲೆಯಲ್ಲಿ ಕವಿಯು ಒಲವ ಚಿಲುಮೆ, ಭಾವ ಚಿಲುಮೆ ಹಾಗೂ ಚಿಂತನ ಚಿಲುಮೆ ಎಂಬ ಮೂರು ವಿಭಾಗಗಳಲ್ಲಿ ವಿಂಗಡಿಸಿದ್ದಾರೆ. ಪ್ರೀತಿ-ಪ್ರೇಮ, ವಾತ್ಸಲ್ಯ ಕರುಣೆಯಂತಹ ಭಾವಗಳು ಒಮ್ಮೆ ಉಕ್ಕಿದರೆ ಆ ಭಾವಕ್ಕೆ ಸಿಕ್ಕ ಸ್ಪಂದನೆಗಳಿಂದ ಪ್ರತಿಕ್ರಿಯೆಗೊಂಡು ಮನದಲ್ಲಿ ಮೂಡುವ ಪ್ರಶ್ನೆ -ಉತ್ತರ ಅನಿಸಿಕೆ ಮುಂತಾದವುಗಳು ಚಿಂತನೆಯಂತೆ ಒಡಮೂಡುತ್ತವೆ. ಹೀಗೆ ಭಾವಕಡಲಲ್ಲಿ ಅಲೆಅಲೆಯಾಗಿ ತೇಲಿ ಬಂದ ಆಲೋಚನೆಗಳ ಬಂಧನವೇ ಇಲ್ಲಿಯ ಕವನಗಳ ಒಡಲಾಳವಾಗಿದೆ ಎಂದು ಕವಿ ಕೆ. ಗಿರಿಮಲ್ಲ ಅವರು ಹೇಳಿದ್ದಾರೆ.
ಕೃತಿಗೆ ಮುನ್ನುಡಿ ಬರೆದ ಡಾ. ಸ್ವಾಮಿರಾವ್ ಕುಲಕರ್ಣಿ ಅವರು ‘ಇಲ್ಲಿಯ ಕವನಗಳಲ್ಲಿ ನಾದ, ಲಯ, ಪ್ರಾಸ, ಧ್ವನಿಯ ಮುಖಾಂತರ ಕನ್ನಡದ ನವೋದಯ ಪರಂಪರೆಯನ್ನು ನೆನಪಿಸುತ್ತವೆ. ಸಂಗೀತಗಾರರ ಇನಿದನಿಯಲ್ಲಿ ಇಲ್ಲಿಯ ಕವನಗಳು ಭಾವಗೀತೆಯಾಗಬಲ್ಲವು. ಜನಪದ ಧಾಟಿಯ ಬಳಕೆಯು ಕವನಗಳ ಅಂದ-ಚೆಂದ ಹೆಚ್ಚಿಸಿದೆ. ಇಲ್ಲಿ ಶಿಸುಪ್ರಾಸವಿದೆ. ಶಿಷ್ಟ ಸಾಹಿತ್ಯವಿದೆ. ಜಾನಪದ ಧ್ವನಿ ಇದೆ. ಮನಸ್ಸಿನ ಭಾವನೆಗಳು ಕವನಗಳ ಸ್ವರೂಪದಲ್ಲಿ ಸಾಹಿತ್ಯ ಚಿಲುಮೆಯಾಗಿ ಚಿಮ್ಮಿವೆ. ಎಲ್ಲ ವಯೋಮಾನದವರಿಗೂ ಇಲ್ಲಿಯ ಕವನಗಳು ಸ್ಪಂದಿಸುವಂತಿವೆ’ ಎಂದು ಪ್ರಶಂಸಿಸಿದ್ದಾರೆ.
ಸಾಹಿತಿ ಡಾ. ಮ.ಗು. ಬಿರಾದಾರ ಅವರು ಕೃತಿಗೆ ಬೆನ್ನುಡಿ ಬರೆದು ‘ವ್ಯಕ್ತಿ-ಪ್ರವೃತ್ತಿಯ ಸಂಘರ್ಷದಿಂದಾಗಿ ಕಾವ್ಯ ಚಿಲುಮೆ ಚಿಮ್ಮಲೆತ್ನಿಸಿದೆ. ಅವರ ವೈಚಾರಿಕ ಕಿಡಿಗಳೇ ಇಲ್ಲಿಯ ಕವಿತೆಗಳು. ಇಲ್ಲಯ ಕವಿತೆಗಳು ಪ್ರಕೃತಿಗಿಂತ ಮಾನವ್ಯ ಪ್ರಾಧಾನ್ಯತೆ ಪಡೆದಿವೆ ಎಂದು ಶ್ಳಾಘಿಸಿದ್ದಾರೆ.
ಡಾ. ಕೆ. ಗಿರಿಮಲ್ಲ ಅವರು ವೃತ್ತಿಯಿಂದ ಉಪನ್ಯಾಸಕರು. ಕಲಬುರಗಿಯಲ್ಲಿ ವಾಸವಿದ್ದಾರೆ. ಕೃತಿಗಳು: ಕಾವ್ಯಚಿಲುಮೆ (ಕವನಗಳ ಸಂಕಲನ) ...
READ MORE