ಡಿ. ಪದ್ಮನಾಭ ಅವರ ಕವನ ಸಂಕಲನ-ಹೂಬನ. ಲಯಬದ್ಧವಾಗಿ ರಾಗ ಸಂಯೋಜನೆಯೊಂದಿಗೆ ಹಾಡಬಲ್ಲ ಕವಿತೆಗಳು ಇಲ್ಲಿವೆ. ಕವಿಗಳಲ್ಲಿರುವ ಕವಿತ್ವವು ’ಹೂಬನ’ದ ಮೂಲಕ ಅನಾವರಣ ಗೊಂಡಿದೆ.
ಈ ಕವನಸಂಕಲನದಲ್ಲಿ ಪ್ರಕೃತಿಚಿತ್ರಣ, ಸಖೀಗೀತ, ನವಿರಾದ ಪ್ರೇಮ ಗಂಡ ಹೆಂಡಿರ ದಾಂಪತ್ಯ ಗೀತ, ಮಕ್ಕಳ ಶಿಶುಗೀತೆಗಳು, ಆಟಪಾಠಗಳು, ನವಗ್ರಹ ಸ್ತೋತ್ರ, ಭಜಗೋವಿಂದಂ ಶ್ಲೋಕಗಳ ಅನುವಾದ, ಸರ್ಜಿಕಲ್ ಸ್ಟ್ರೈಕ್, ಹಬ್ಬಗಳು,ತಾಯ್ನಾಡಿನ ಪ್ರೇಮ ಹೀಗೆ ವಿವಿಧ ವಿಷಯಗಳನ್ನೊಳಗೊಂಡ ಕವನಗಳು ಇಲ್ಲಿವೆ. ಎಲ್ಲ ಗೀತೆಗಳೂ ರಾಗಬದ್ಧವಾಗಿ ತಾಳಬದ್ಧವಾಗಿ ಹಾಡಲು ಯೋಗ್ಯವಾದ ರಚನೆಗಳೆಂದು ಓದಿದವರಿಗೆ ತಿಳಿಯುತ್ತದೆ. ಲಯಬದ್ಧತೆ ಗೇಯತೆಯನ್ನು ಮೆಚ್ಚಿ ಸಂಗೀತನಿರ್ದೇಶಕ ವಿ. ಮನೋಹರ್ ಮುನ್ನುಡಿ ಬರೆದಿದ್ದಾರೆ. ಸ್ನೇಹ ಬುಕ್ ಹೌಸ್ ನ ಶ್ರೀ ಪರಶಿವಪ್ಪ ಮೆಚ್ಚಿ ಬೆನ್ಧುಡಿ ಬರೆದಿದ್ದಾರೆ. ಸಂಗ್ರಹಯೋಗ್ಯವಾದ ಹಾಡಬಹುದಾದ ಕವನಗಳ ಸಂಗ್ರಹ ಈ ಹೂಬನ.
ಕವಿ ಡಿ. ಪದ್ಮನಾಭ ಅವರು ಮೈಸೂರಿನಲ್ಲಿ 1966 ಫೆಬ್ರುವರಿ 06 ರಂದು ಜನಿಸಿದರು. ಅವರ ‘ಹೂಬನ’ ಕವನ ಸಂಕಲನ ಇತ್ತಿಚೆಗೆ ಪ್ರಕಟವಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಹಿಂದಿ ರತ್ನ ಹಾಗೂ ಸಂಸ್ಕೃತ ಸಾಹಿತ್ಯದಲ್ಲಿ ಆಸ್ಥೆ ಉಳ್ಳವರು. ‘ಸಂತೋಷ-ಸಂದೇಶ’, ‘ಭಾವಲಹರಿ’ ಕವನ ಸಂಕಲನಗಳು ಹಾಗೂ ‘ಭಾವಸರಿತೆ’ ಕಥಾಸಂಕಲನ ಪ್ರಕಟವಾಗಿವೆ. ...
READ MORE