‘ಚಿತ್ರ ಚಿಗುರುವ ಹೊತ್ತು’ ಚಾಂದ್ ಪಾಷ ಎನ್.ಎಸ್ ಅವರ ಕವನ ಸಂಕಲನ. ಸಂಗಾತ ಪ್ರಕಾಶನದಿಂದ ಚಿ.ಶ್ರೀನಿವಾಸರಾಜು ಕಾವ್ಯ ಪುರಸ್ಕಾರ ಪಡೆದು ಪ್ರಕಟವಾಗುತ್ತಿರುವ ಈ ಸಂಕಲನಕ್ಕೆ ಹಿರಿಯ ಸಾಹಿತಿ, ಚಿಂತಕ ನಟರಾಜ್ ಹುಳಿಯಾರ್ ಅವರು ಬೆನ್ನುಡಿ ಬರೆದಿದ್ದಾರೆ. ‘ಅವರ ವ್ಯಗ್ರ ಕಾವ್ಯ ಎಲ್ಲ ಧರ್ಮಗಳ ಕತ್ತಲನ್ನೂ ಸೀಳಲೆತ್ನಿಸುತ್ತಾ, ಸುತ್ತಣ ಕಾಯಿಲೆಗಳಿಗೆ ಉತ್ತರಕ್ಕಾಗಿ ತಡಕಾಡುತಿತ್ತು: ಭಾವಗೀತೆ, ಗದ್ಯಸ್ಫೋಟಗಳ ನಡುವೆ ಹೊಯ್ದಾಡುತ್ತಿತ್ತು, ಚಾಂದ್ ಪ್ರತಿಮೆಗಳಲ್ಲಿ ಚಂದ್ರ ಸೂರ್ಯರೂ ದಫನ್ ಆಗುವುದನ್ನು. ಸತ್ತ ಎದೆಯ ಮೇಲೆ ಕವಿತೆಯ ತುಕಡ ಅಡ್ಡಾಡುವುದನ್ನು, ಹಲಾಲ್ ಆಗದ ಪ್ರೇಮವನ್ನು ಕತ್ತರಿಸಿ ಎಸೆದ ಮಾಂಸದಂಗಡಿಗಳನ್ನು ಎಲ್ಲಾ ಕಾಲದ ಸೀತಾದಹನವನ್ನು ಕಂಡವರಿಗೆ ಗಂಭೀರ ಕವಿದನಿಯೊಂದು ಸ್ಪಷ್ಟವಾಗಿ ಕೇಳಿಸತೊಡಗುತ್ತದೆ’ ಎನ್ನುತ್ತಾರೆ ನಟರಾಜ್ ಹುಳಿಯಾರ್.
ಚಾಂದ್ ಪಾಷ ಎನ್.ಎಸ್. (ಕವಿಚಂದ್ರ) ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಂದೇವಾಲ ಗ್ರಾಮದಲ್ಲಿ ಮೇ ತಿಂಗಳ 1994ರಲ್ಲಿ ಜನಿಸಿದರು. ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. 'ಒದ್ದೆಗಣ್ಣಿನ ದೀಪ' ಕವನ ಸಂಕಲನ 2023ರಲ್ಲಿ ಪ್ರಕಟವಾಗಿದೆ. 'ಧೂಳಿಡಿದ ನಕ್ಷತ್ರ' (ನಾಟಕ) 'ಚಿತ್ರ ಚಿಗುರುವ ಹೊತ್ತು' (ಕವನ ಸಂಕಲನ) 2020ರಲ್ಲಿ ಪ್ರಕಟವಾಗಿದೆ. ಇಟಲಿಯ ಪಿಯಾಸೆಂಜಾದಲ್ಲಿರುವ "ಪಿಕ್ಕೋಲೊ ಮ್ಯೂಸಿಯೊ ಡೆಲ್ಲಾ ಪೊಸಿಯ" ದಲ್ಲಿ ಕವಿತೆಯೊಂದು ಪ್ರದರ್ಶನವಾಗಿದೆ. ಶ್ರೀಲಂಕಾದಲ್ಲಿ ನಡೆದ ತೀರ್ಥ ಫರ್ಫಾಮೆನ್ಸ್ ಫ್ಲಾಟ್ ಫಾಮ್ 2019, ಬೆಂಗಳೂರು ಲಿಟರೇಚರ್ ಫೆಸ್ಟಿವಲ್ 2017, ಲಾಂಗ್ವೇಜ್ ಫೆಸ್ಟಿವಲ್, SIWE ಪೊಯೆಟ್ರಿ ...
READ MORE