‘ಮಣ್ಣೇ ಮೊದಲು’ ಪಾಪುಗುರು ಅವರ ರಚನೆಯ ಕವನ ಸಂಕಲನವಾಗಿದೆ. ಬದುಕು ಬಗಣಿಗೂಟ ನಮಗಾಗಿ ಅದನ್ನು ಕೆತ್ತುವವರಿದ್ದಾರೆ, ಇನ್ನೂ ಕೆಲವರು ಬಡಿಯಲು ಕಾಯುತ್ತಾರೆ ಅದರಲ್ಲೂ ಮುಖ್ಯವಾಗಿ ಈಗಾಗಲೇ ಕೆತ್ತಿಕೊಂಡ ಹಲವರು ರೆಡಿಯಿದ್ದಾರೆ. ಆದರೆ ಬಗಣಿಗೂಟಕ್ಕೂ ಈ ಹಿಂದೆ ಜೀವವಿತ್ತು ನೂರಾರು ಪ್ರಾಣಿಪಕ್ಷಿಗಳಿಗೆ ಆಸರೆಯಾಗಿತ್ತು. ಈಗ ಅದಕ್ಕೆ ಯಾವುದು ನೆನಪಿಲ್ಲ ಮೇಲಿನವರಿಲ್ಲರಿಗೂ ಇದರ ಅರಿವಿದೆ. ಬದುಕು ನಾವಂದುಕೊಂಡತೆ ನಡೆಯುವುದಿಲ್ಲ ಅದು ತಕ್ಕಡಿಯ ಮೇಲಿನ ಕಪ್ಪೆಯಂತೆ ಅದನ್ನು ಅದೆಷ್ಟು ಹಿಡಿದು ನಿಲ್ಲಿಸಲು ಸಾಧ್ಯ. ಈ ವಿಪರ್ಯಾಸದ ನಡುವೆ ನಮ್ಮ ಆತ್ಮೀಯ ಜೀವಗಳು ಆಕಸ್ಮಿಕವಾಗಿ ಮರೆಯಾದರೆ ನಮ್ಮೊಳಗಿನ ನೋವುಗಳು ಮುದ್ದೆಯೊಳಗಿನ ಗಂಟಂತೆ ಗುಪ್ತವಾಗಿ ಕುಳಿತಿರುತ್ತವೆ. ಮುದ್ದೆಯ ರುಚಿಯನ್ನು ಆಸ್ವಾದಿಸುವ ಕೆಲವರಿಗೆ ಮಾತ್ರ ತಿಳಿಯುತ್ತದೆ. ಕೆಲವರು ಅದಾವುದರ ಅರಿವಿಲ್ಲದೆ ನುಂಗಿ ಬಿಡುತ್ತಾರೆ. ಆ ಗಂಟುಗಳು ಉದರದೊಳಗೆ ಒದ್ದಾಡುವ ಪರಿಗೆ ಕವಿತೆ ಎನ್ನಬೇಕೋ..? ತಿಳಿದಿಲ್ಲ ಎನ್ನುತ್ತಾರೆ ಲೇಖಕ ಪಾಪುಗುರು.
ಕಾದಂಬರಿಕಾರ ಎಸ್. ಗುರುಬಸವರಾಜ (ಪಾಪು ಗುರು) ಅವರದ್ದು ಮೂಲತಃ ದಾವಣಗೆರೆ. 1981ರಲ್ಲಿ ಜನಿಸಿದರು. ತಂದೆ - ಎಚ್. ಕೆ. ಶಿವಲಿಂಗಪ್ಪ, ತಾಯಿ - ಬಸಮ್ಮ. ಪಾಪು ಗುರು ಅವರು ವೃತ್ತಿಯಲ್ಲಿ ಮರಗೆಲಸಗಾರ ಹಾಗೂ ಪತ್ರಿಕಾವಿತರಕ. ಪ್ರವೃತ್ತಿಯಲ್ಲಿ ಕವಿ, ಕಾದಂಬರಿಕಾರ. 2018ರಲ್ಲಿ ಪ್ರಕಟವಾದ ಇವರ ಚೊಚ್ಚಲ ಕೃತಿ ‘ಮುಳ್ಳೆಲೆಯ ಮದ್ದು’ ಕವನಸಂಕಲನ ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರ ಇವರ ಪ್ರೋತ್ಸಾಹ ಧನ ಲಭಿಸಿದೆ. ...
READ MORE