ಈತನಕ

Author : ಪ್ರತಿಭಾ ನಂದಕುಮಾರ್

Pages 54

₹ 12.00




Year of Publication: 1988
Published by: ಕನ್ನಡ ಸಂಘ
Address: ಕ್ರೈಸ್ಟ್ ಕಾಲೇಜ್, ಹೊಸೂರು ರಸ್ತೆ, ಬೆಂಗಳೂರು- 560029

Synopsys

‘ಈತನಕ’ ಪ್ರತಿಭಾ ನಂದಕುಮಾರರ ಎರಡನೆಯ ಕವಿತಾ ಸಂಗ್ರಹ. ಅವರ ಮೊದಲನೆಯ ಸಂಕಲನದ ಹೆಸರು 'ನಾವು ಹುಡುಗಿಯರೇ ಹೀಗೆ'. ಈ ಮೊದಲನೆಯ ಸಂಕಲನದಲ್ಲಿ ಸುಸಂಸ್ಕೃತ ಹೆಣ್ಣಿನ ಹೃದಯದ ಆವಿಷ್ಕರಣವೇ ಮುಖ್ಯ ಕಾವ್ಯವಸ್ತುವಾಗಿದೆ. ಇದಲ್ಲದೆ ಉಳಿದ ಲವಲವಿಕೆಗಳೂ ಬಾಳಿನಲ್ಲಿ ಉದ್ಭವವಾಗಿದೆ ಎಂಬುದನ್ನು ಎರಡನೆ ಸಂಕಲನ ಸೂಚಿಸುತ್ತದೆ. ಸಹಜ ಸ್ತ್ರೀತ್ವಕ್ಕೆ ದನಿಕೊಟ್ಟು ಅದನ್ನು ಒಡಮೂಡಿಸುವ ಸಾಹಸದಲ್ಲಿ ಕವಿ ಯಶಸ್ವಿಯಾಗಿದ್ದಾರೆ.

About the Author

ಪ್ರತಿಭಾ ನಂದಕುಮಾರ್
(25 December 1955)

ಲೇಖಕಿ ಪ್ರತಿಭಾ ನಂದಕುಮಾರ್ ಅವರು ಮೂಲತಃ ಬೆಂಗಳೂರಿನವರು. 1955 ಡಿಸೆಂಬರ್ 25ರಂದು ಜನಿಸಿದರು. ತಂದೆ-ವಿ. ಎಸ್. ರಾಮಚಂದ್ರರಾವ್, ತಾಯಿ- ಯಮುನಾಬಾಯಿ. ಬಾಲ್ಯದ ಬಹುದಿನಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಕಳೆದಿರುವ ಪ್ರತಿಭಾ, ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಎಂ.ಫಿಲ್ ಪದವಿ ಪಡೆದಿದ್ದಾರೆ. ಎನ್.ಜಿ.ಎಫ್‌ನಲ್ಲಿ ಭಾಷಾಂತರಕಾರರಾಗಿ ನಂತರ ಇಂಡಿಯನ್ ಎಕ್ಸ್‌ಪ್ರೆಸ್, ಡೆಕ್ಕನ್ ಹೆರಾಲ್ಡ್ ಮತ್ತು ಅಗ್ನಿ ಪತ್ರಿಕೆಗಳಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ಸಿನಿಮಾ ರಂಗದಲ್ಲಿಯೂ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪತಿ ನಂದಕುಮಾರ್ ಹಾಗೂ ಮಕ್ಕಳು ಅಭಿರಾಮ್ ಮತ್ತು ಭಾಮಿನಿ ಜೊತೆ ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಪ್ರತಿಭಾ ನಂದಕುಮಾರ್ ಕಾವ್ಯಧರ್ಮವನ್ನೇ ...

READ MORE

Related Books