‘ಜೀವನ ತರಂಗಗಳು’ ಕೃತಿಯು ಜಾನಕಿತನಯಾನಂದ (ಎ.ಟಿ. ಆನಂದ) ಅವರ ಕವನಸಂಕಲನ. ಯಾರೂ ತಿಳಿಯರು ನಿನ್ನ, ಬೆಳಕು ಬಂದಿದೆ ಬಾಗಿಲಿಗೆ, ಅದೆಷ್ಟು ಸಾರಿ ಕ್ಷಮಿಸೆನ್ನ ಜೀವ ಅನ್ನದಾತನೆ ನಿನಗೆ, ಕನ್ನಡ ಕಲಿಯಿರಿ, ಕನ್ನಡ ಕಲಿಸಿರಿ, ಪ್ರೀತಿಗೊಂದು ಹೆಸರು, ಎಚ್ಚರಿಸುತ್ತಿರು ನೀನು, ಬನ್ನಿ ಮೇಘಗಳೇ, ಅಮ್ಮಾ ನಿನ್ನ ಮಾತಿನಲ್ಲಿ. ಅಂಬಿಗನಾಗು ನನಗೆ ಇನ್ನು, ಆರುವ ಮುನ್ನ ಅದೇನಂದ ಚೆಂದವೊ. ಅಮ್ಮ ನಿನ್ನ ಮಡಿಲಲೊಮ್ಮೆ. ಅಲ್ಪ ತೃಪ್ತನಾಗಿರೇ, ನಾನು ಅಂಧಕನಾಗಿ ಅನುಕರುಣೆಯೆಂಬ, ಅರುಣನುದಯನೆ ನಿನ್ನ, ಅಧಿಪತಿಯು ನೀನೆ ಅಂತಿಜನಾಭನೆ ಸೊಸೆಗೆ ಅತ್ತೆಯೆಂದರೆಕೋ ಕಾಣೆ ಉದಯಿಸು ರವಿತೇಜನೆ ನೀನು, ಬಾರೋ ವಸಂತ ಬಾರೊ, ಅಂದುಕೊಳ್ಳುವುದೊಂದು, ಏಕಿಷ್ಟು ದೂರ ಮಾಡಿದೆ ಎನ್ನ, ಅಪರಾಧಿಗಲ್ಲವೇ ಶಿಕ್ಷೆ?, ಇರು ನೀನು ಇಲ್ಲದಿರು ನೀನು, ಬದುಕು ಇದು ಹೀಗೇ ಅತ್ತು ಅತ್ತು ಏಕೆ?, ದೇವರು ವರವನು, ದಯಮಾಡೋ ರಂಗಾ, ಏನೇ ಬಂದರು ನೀದಯೆತೋರು, ಏನೇ ಬಂದರೂ, ಏಕೆ? ಹೆಂಡತಿ ಒಂದೇ ಒಂದು ಬಿಳಿಯ ಎಲ್ಲ ಮರೆತು ಹೋಗಲಿ, ಕನ್ನಡದ ಬಾವುಟ, ಏಕೆ ದೂಷಿಸುವೆ ಎನ್ನ?, ಏನೆಂದು ಬಣ್ಣಿಸಲಿ ನಾನು ಭಕ್ತನು ನಾನೇ? ಏಕೆ ?, ಒಳಮನಸ ಮಾತ. ಈ ದೇಹವು ನಿನ್ನದೇ, ಏಕೆ ಹುಡುಕಲಿ ನಿನ್ನ?, ಏನಪರಾಧ ಮಾಡಿದೆನೆಂದು, ಹೆಂಡತಿಯ ಮಾತ ಕೇಳಿದರೆ, ಎತ್ತ ಹೋದನಮ್ಮ, ಏಕೆ ಸೋತಿತು ಈ ಮನ?, ಎಷ್ಟು ಜನ್ಮದ ಪುಣ್ಯದ ಫಲವೊ, ಗುರಿ ಇರಬೇಕು ಬಾಳಿಗೆ, ಗೆಲುವಾಗಲಿ ನಮ್ಮ, ಹರಿಯ ಭಜಿಸಿದವರಿಗಿಲ್ಲ, ಆ ದೇವರಿತ್ತ ಈ ವರವ, ಇದು ಯಾವ ಜನ್ಮದ ಹೆಣ್ಣಾಗಿ ಜನ್ಮನೀಡಿ, ಹಿಂದೂ ದೇಶ ದೊಡ್ಡದು, ಈ ಕನ್ನಡ ನೆಲದಿ ಜನಿಸಿ ಹೆಣ್ಣಿರದ ಬಾಳು ಬಾಳೇ ಹರಿಯ ನ೦ಬಿದವರಿಗೆ, ಹೇಗೆ ತಾನೇ ಸಹಿಸಲಿ, ಹರಿಯೇ ನೀನು ನಂಬಿದವರ.. ಹದಿನಾರರ, ಗೆಳೆತಿ ನನ್ನ ಪ್ರೀತಿಯ ಹೋಗುವುದಾದರೆ ಹೋಗು, ಮಲಗು ಮುದ್ದಿನ ಕಣ್ಮಣಿ. ದೇವಾ ನಿನ್ನ ನಾಮಾಮೃತವ, ದೇವ ಕರುಣಿಸು, ಯುಗಾದಿ ಬರುತಿದೆ, ಕರುಣೆ ತೋರು ನೀನೆನಗೆ..ಏಕೆ?, ಕಣ್ಣಂಚಲಿ ಕನ್ನಡ ಕಲಿಸೋಣ, ಕ್ಷಮಿಸು ನೀನು ಕಟ್ಟುವೆವು ನಾವು, ಕಾಲವೇ ಎಲ್ಲಾ, ಕಾಲ ಚಕ್ರದಲಿ, ನೀನು ಯಾರು?, ಕನ್ನಡವಾಗಲಿ ನಿತ್ಯ, ಕೋಳಿ ಕೂಗಿದರೇನೇ, ಯಾವ ಹಾಡ ಹಾಡಲಿ ನಿನಗೆ, ಮಾತಲಿ ಮಮತೆ ತುಂಬಿರಬೇಕು, ಮಗುವೇ ನಿನ್ನದೊಂದು, ಮೌನವಾಗಿಯೇ ಏಕೆ?, ಇಳಿದು ಬಾ ಮಳೆರಾಯ, ಯಾರು ಓದುವರು ನನ್ನ ಕವಿತೆ?, ಮನುಜ ಮಾನವ ಜನ್ಮ ದುರ್ಲಭ, ನಾನು ಬಡವನಾದರೇನು, ಕಟುಕರಾಗದಿರಿ ನೀವು, ಕಟ್ಟುವೆವು ನಾವು, ಕೂಲಿಕೆಲಸ ನಮ್ಮದು, ಲಕ್ಷ್ಮಿಯೇ ನೀನೊಲಿದರೇನೇ ಓ ಪಿತೃದೇವರುಗಳೇ, ನಿದ್ದೆ ಒಂದು ಪುಟ್ಟಸಾವು.. ನಡೆಯು ಕನ್ನಡ, ದೀನ ನಾನೆಂದೆನ್ನ, ನಕ್ಕು ಬಿಡು ಒಮ್ಮೆ, ಯಾರು ಏನೆಂದರೇನು, ಮರೆಯ ಬೇಡ ಮನುಜ ನೀನು, ವಧು ಪರೀಕ್ಷೆ ನಡೆದಿದೆ, ನಿನ್ನ ದಯೆಯಿಂದಲೇ. ಮನುಜನಿಗಿಂತ ಮೃಗ, ನೀ ಮನಸು ಮಾಡಿದರೆ ಹೀಗೆ ಹಲವಾರು ಕವಿತೆಗಳನ್ನು ಒಳಗೊಂಡಿದೆ.
ದಾವಣಗೆರೆ ತಾಲ್ಲೂಕು ಹೆಬ್ಬಾಳು ಗ್ರಾಮದ ಜಾನಕಮ್ಮ ಮತ್ತು ಎ.ತುಳುಜಾಚಾರ್ ಮಗನಾಗಿ ಜನಿಸಿದ ಆನಂದ ಹೆಬ್ಬಾಳು (ಜಾನಕಿತನಯಾನಂದ), ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು ವೃತ್ತಿಯಲ್ಲಿ ತಂತ್ರಾಂಶ ವಿಭಾಗದ ಸೀನಿಯರ್ ಮ್ಯಾನೇಜರ್ ಆಗಿ ಪ್ರಸ್ತುತ ಸ್ನೈಡರ್ ಇಲೆಕ್ಟಿಕ್ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು,ಮೂವತ್ತು ವರ್ಷದ ಅನುಭವ ಹೊಂದಿದ್ದಾರೆ..ಜ್ಞಾನಾರ್ಜನೆಗೆ ಉನ್ನತ ವ್ಯಾಸಂಗ ಮುಂದುವರೆಸುವ ಸ್ವಇಚ್ಛೆಯಿಂದ ಈಗ ನ್ಯಾಷನಲ್ ವೇದಿಕ್ ಸೈನ್ಸ್‌ನಲ್ಲಿ ದಾಸಸಾಹಿತ್ಯದ ಒಂದು ವಿಷಯದಲ್ಲಿ ಸಂಶೋಧಕರಾಗಿ (ಪಿ.ಎಚ್.ಡಿ ಸ್ಕಾಲರ್), ಡಾ.ಎನ್.ಕೆ. ರಾಮಶೇಷನ್ ಮಾರ್ಗದರ್ಶನದಲ್ಲಿ ಕೆಲಸ ಆರಂಭಿಸಿದ್ದಾರೆ. ದಾಸಶ್ರೇಷ್ಠರ ದಾಸಸಾಹಿತ್ಯ, ವಚನಕಾರರ ವಚನಸಾಹಿತ್ಯ, ಜಾನಪದ ಸಾಹಿತ್ಯವನ್ನು ತತ್ವಪದಗಳನ್ನು ಹಾಗೂ ನವೋದಯ ಸಾಹಿತ್ಯ ಅಭ್ಯಾಸ ಮಾಡುತ್ತಾ ಸಾಹಿತ್ಯಾಸಕ್ತಿ ಮೊಳೆತು ಮೂರುದಶಕಗಳಿಂದಲೂ ...
READ MORE