ಮಂಜಿನೊಳಗಿನ ಕೆಂಡ ಅರಿವಿನ, ಹೊಸ ಚೈತನ್ಯದ ಅನ್ವೇಷಣೆಯ ಹಾಯ್ಕಗಳಾಗಿವೆ. ಪ್ರಕೃತಿ ಮತ್ತು ಜೀವದ ಹಸಿವನ್ನು ಸಮೀಕರಿಸುವ ಕವಿತೆಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. ಒಬ್ಬ ಚಂದಿರನನ್ನು ಇಡೀ ಲೋಕವೆ ಹಂಚಿಕೊಂಡಿದೆ ಒಂದು ರೊಟ್ಟಿ ಹಂಚಿಕೊಳ್ಳಲಾಗುವುದಿಲ್ಲವೆ? ಹೀಗೆ ಬೇಸರ, ತವಕ, ಸಂಕಟ, ನಿರ್ಲಿಪ್ತ ಭಾವದ ದಟ್ಟ ಪ್ರಕೃತಿ ಚಿತ್ರಣಗಳನ್ನು ಕಾಣಬಹುದಾಗಿದೆ. ಮತ್ತೊಂದು ಕವಿತೆಯ ಸಾಲು ಹೀಗಿದೆ. ‘ರಂಟೆ ಸಾಲುಗಳ ಹಿಂದೆ ಅಪ್ಪನ ಹೆಜ್ಜೆ ಮತ್ತೂ ಅವ್ವನ ನೆರಳು’
ಕವಿ ಹೆಬಸೂರ ರಂಜಾನ್ ಅವರು (ಜನನ: 1981 ಜುಲೈ 22) ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರಿನವರು. ಹುಟ್ಟೂರಿನಲ್ಲಿ ಪ್ರಾಥಮಿಕ ದಿಂದ ಪ.ಪೂ. ಶಿಕ್ಷಣ ನಂತರ ಹುಬ್ಬಳ್ಳಿಯ ಶ್ರೀ ಕಾಡಸಿದ್ಧೇಶ್ವರ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪದವಿ, ಕ.ವಿ.ವಿ.ದಿಂದ ಬಾಹ್ಯ ವಿದ್ಯಾರ್ಥಿಯಾಗಿ ಸ್ನಾತಕೋತ್ತರ ಪದವಿ ಪಡೆದರು. ಪ್ರಸ್ತುತ ಶಿಗ್ಗಾಂವ್ ಪ.ಪೂ.ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾರೆ. ‘ನೆನಪು ತಂತಿ ಮೀಟುತ್ತಿತ್ತು’ ಅವರ ಮೊದಲ (2006) ಕವನ ಸಂಕಲನ. ‘ಅಂತರಂಗದ ಮೃದಂಗ’ ಅವರ ಎರಡನೇ ಕವನ ಸಂಕಲನ. ಹಾವೇರಿ ಜಿಲ್ಲೆಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ‘ಮಂಜಿನೊಳಗಣ ಕೆಂಡ’ ಅವರ ಇತ್ತಿಚಿನ ಕೃತಿ. ...
READ MORE