ಬಾಲ್ಯದ ಮುಗ್ಧತೆಯೊಂದಿಗೆ ಸಮಾಜದ ಅಂಧಕಾರವನ್ನು ನೋಡಲು ಯತ್ನಿಸುತ್ತವೆ ಬೀರು ದೇವರಮನಿ ಅವರ ಕವಿತೆಗಳು. ಇದು ಅವರ ಮೊದಲ ಸಂಕಲನ. ಯೌವನದ ಬಿಸುಪು ಮೈವೆತ್ತಂತೆಯೂ ಇರುವ ಇಲ್ಲಿನ ಕವಿತೆಗಳು ಕಾವ್ಯಲೋಕಕ್ಕೆ ಭರವಸೆಯ ಕವಿಯೊಬ್ಬ ಪ್ರವೇಶಿಸಿದ್ದಾನೆ ಎಂಬುದನ್ನು ಸಾರುತ್ತಿವೆ.
ಖಾಸಗಿ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೀರು ದೇವರಮನಿ ಅವರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬುದ್ದಿನ್ನಿ ಗ್ರಾಮದವರು. ಸದ್ಯ ಬೆಂಗಳೂರು ನಿವಾಸಿ ಆಗಿರುವ ಬೀರು ಅವರಿಗೆ ಓದುವುದು ಮತ್ತು ಕವಿತೆ ಬರೆಯುವುದು ಇವರ ಹವ್ಯಾಸ. ಬೆಳಕಿನ ಒಂಟಿ ನಡಿಗೆ ಅವರ ಮೊದಲ ಕವನ ಸಂಕಲನ. ಈ ಸಂಕಲನದ ಹಸ್ತಪ್ರತಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಣೆಗಾಗಿ ಧನಸಹಾಯ ಮಾಡಿದೆ. ...
READ MORE