ಇಲ್ಲಿನ ಕಾವ್ಯದ ಮೂಲಕ ತಮ್ಮ ಮನೋಭಾವವನ್ನು ತೆರೆದಿಡುತ್ತಾರೆ ಕವಿ ಮಹೇಶ್ ಎಂ ಕಾಳಿ. ಹುಟ್ಟಿದಾಗ ನಾನೊಂದು ಮುದ್ದೆ ಮಣ್ಣು ನನ್ನವ್ವ ಮಾಡಿದಳು ನನ್ನನೊಂದು ಹೊನ್ನು ಜಗದ ದೃಷ್ಟಿಯಲ್ಲಿ ಕೇವಲ ಅವಳೊಂದು ಹೆಣ್ಣು, ನನ್ನ ಬಾಳಿಗೆ ಅವಳೇ ಕಾಂತಿಯ ಕಣ್ಣು(ಸ್ಫೂರ್ತಿ ಧಾತೆ)
ಹೆಣ್ಣು ಸೃಷ್ಟಿಯೊಂದಿಗೆ ಪೋಷಣೆಯಲ್ಲಿ ಬದುಕನ್ನು ಕಟ್ಟಿಕೊಡುವುದನ್ನು ಕಾಣುತ್ತಾರೆ. ದೇವರ ಹಣದ ಜಾತ್ರೆ, ಬಡವನ ಹಸಿವಿನ ಪಾತ್ರೆ, ಬರಗಾಲವಿದ್ದರೂ ದೇವರಿಗೆ ಬಂಗಾರದ ಕಿರೀಟ, ಬಾಗಿಲಿಗೆ ಬಂಗಾರದ ಗಿಲೀಟು (ಹಸಿವಿನ ಪಾತ್ರೆ) ಹೀಗೆ ಬಡವನ ಹಸಿವೆಯ ಪಾತ್ರೆಯ ಕುರಿತಾಗಿ ಬೆಳಕು ಚೆಲ್ಲುತ್ತಾರೆ. ಕಲ್ಲು ದೇವರಿಗೆ ಬಂಗಾರದ ಕಿರೀಟ ತೊಡಿಸಲು ಮುಂದಾಗುವ ಜನ ಬಡ ಜನರ ಹಸಿವೆಯನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಎಂಬ ಸಿಟ್ಟು ಮಹೇಶ ಅವರ ಕವಿತೆಯಲ್ಲಿ ಕಾಣಬಹುದು. ಜಾತಿ ವ್ಯವಸ್ಥೆ, ಕ್ರಾಂತಿಯ ಕಿಚ್ಚು, ಶೋಷಣೆಯಲ್ಲಿಯ ಬವಣೆಗಳನ್ನು ಇಲ್ತೆಲಿಯ ಕವಿತೆಗಳು ತೆರೆದಿಡುತ್ತವೆ.
ಮಹೇಶ್ ಎಂ. ಕಾಳಿ ಅವರು ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ನೆಲಗುಡ್ಡ (ತರ್ಲಘಟ್ಟ) ಗ್ರಾಮದಲ್ಲಿ 1985 ಜೂನ್ 11 ರಲ್ಲಿ ಜನಿಸಿದರು. ತಂದೆ ಮಾದೇವಪ್ಪ, ತಾಯಿ ಶಾಂತವ್ವ..ಪ್ರಸ್ತುತ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ (ಪಿ.ಡಿ.ಓ) ಕಾರ್ಯನಿರ್ವಹಿಸುತ್ತಿದ್ದಾರೆ. 'ಉಸಿರು ನಿಲ್ಲುವ ಮುನ್ನ' ಅವರ ಮೊದಲ ಕವನ ಸಂಕಲನ ಕನ್ನಡ ಪುಸ್ತಕ ಪ್ರಾಧಿಕಾರ ಧನ ಸಹಾಯಕ್ಕೆ ಆಯ್ಕೆಯಾಗಿದೆ. ...
READ MORE