ನನ್ನ ಪ್ರೀತಿಯ ಕವಿತೆ ಬೆರೆಸಿ ಆತ್ಮೀಯತೆ ಹೇಳಿದಳು ಒಂದು ಮುಂಜಾನೆ ಸಪ್ತಸಾಗರದಾಚೆ ಇದೆ ನನ್ನ ವೀಣೆ ಹೋಗಿ ತರಲೇನು ಹೊತ್ತು ಮೇನೆ? ವಸಂತಕುಮಾರ ಪೆರ್ಲರ `ರಂಗಸ್ಥಳ‘ ಕವನ ಸಂಕಲನದ `ನನ್ನ ಪ್ರೀತಿಯ ಕವಿತೆ‘ಯ ಸಾಲುಗಳಿವು. ಇಲ್ಲಿರುವ ಮುಂಜಾನೆ, ಮೇನೆ, ವೀಣೆಗಳೆಲ್ಲ ಕವಿತೆಯನ್ನು ಸಿಂಗರಿಸಿವೆ. ಭಾವಗೀತೆ, ಗಂಭೀರ ಕವಿತೆ, ಪುರಾಣದ ರೂಪಕ – ಇವೆಲ್ಲ ಈ ಕವಿತೆಗಳಲ್ಲಿವೆ. ಒಂದಷ್ಟು ಹನಿಗವಿತೆಗಳು ಕೊನೆಗಿವೆ. ವೇಣುನಾದದಿ ತೇಲಿಸು, ಸೊದೆಯನೀಂಟಲು ತೋಯಿಸು ಮುಂತಾದ ಅಪರೂಪದ ಸಾಲುಗಳಿವೆ. ಗೋವಿಂದ ಪೈ ಸೈನ್ಯವಿರದ ಗಡಿ ರಾಜ್ಯಗಳ ಗೆದ್ದ ಸೇನಾನಿಯಾಗಿ, ರಥಬೀದಿಯುದ್ದ ತೇರೆಳೆದ ದಳವಾಯಿಯಾಗಿ ಕವಿತೆಯೊಂದರಲ್ಲಿ ಮೆರೆಯುತ್ತಾರೆ.
ಯಕ್ಷಗಾನ, ಸಾಹಿತ್ಯ, ಶಿಕ್ಷಣ, ಧಾರ್ಮಿಕ, ವೈದಿಕ ಹೀಗೆ ಹಲವು ಕ್ಷೇತ್ರಗಳಲ್ಲಿ ಹೆಸರುಗಳಿಸಿರುವ ಲೇಖಕ ವಸಂತಕುಮಾರ ಪೆರ್ಲ. ಅವರು ಕಾಸರಗೋಡಿನ ಪುಟ್ಟ ಊರಾದ ಪೆರ್ಲದಲ್ಲಿ 1958ರ ಜುಲೈ 2ರಂದು ಜನಿಸಿದರು. ಈ ಪೆರ್ಲ ಭರಿನ ಹೆಸರಿಗೆ ಕೀರ್ತಿ ತಂದವರಲ್ಲಿ ವಸಂತಕುಮಾರ್ ಒಬ್ಬರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಳತ್ಕ್ತಡ್ಕ ಶಾಲೆಯಲ್ಲಿ ಮತ್ತು ಪ್ರೌಢಶಿಕ್ಷಣವನ್ನು ಪೆರ್ಲ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಪೂರೈಸಿದರು. ಪದವಿ, ಉನ್ನತ ಪದವಿಯನ್ನು ಮತ್ತು ರಂಗಭೂಮಿ ವಿಷಯದಲ್ಲಿ ಡಾಕ್ಟರೇಟ್. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆೆ. ಹೈಸ್ಕೂಲ್ ವಿದ್ಯಾಭ್ಯಾಸದ ಕಾಲದಲ್ಲೇ ಕಥೆಗಳನ್ನು ಬರೆಯ ತೊಡಗಿದ ಅವರು ಬೆಂಗಳೂರಿನ ಪ್ರಜಾಪ್ರಭುತ್ವ ವಾರಪತ್ರಿಕೆಯಲ್ಲಿ ಉಪಸಂಪಾದಕ-ವರದಿಗಾರರಾಗಿ ಔದ್ಯೋಗಿಕ ...
READ MORE