ಒದ್ದೆ ಕಣ್ಣಿನ ಬಾಗಿನ

Author : ಬಾನು ಮುಷ್ತಾಕ್

Pages 80

₹ 75.00




Year of Publication: 2015
Published by: ಹಾಡ್ಲಹಳ್ಳಿ ಪಬ್ಲಿಕೇಷನ್
Address: ಸಿಎಸ್.ಐ ಹಾಸ್ಪಿಟಲ್, ಆರ್.ಸಿ. ರಸ್ತೆ, ಹಾಸನ ಜಿಲ್ಲೆ
Phone: 8747043485

Synopsys

‘ಒದ್ದೆ ಕಣ್ಣಿನ ಬಾಗಿನ’ ಬಾನು ಮುಷ್ತಾಕ್ ಅವರ ಕವನ ಸಂಕಲನ. ಈ ಸಂಕಲನದಲ್ಲಿ ಕಿನ್ನರಿ, ಅಮ್ಮನ ಸೀರೆ, ಬಳಿ ಇಲ್ಲದವ, ಕೋರ್ಟಿನಲಿ ಗಾಂಧಿ, ಭೂಮಿ, ಅನುಸಂಧಾನ, ಬಿಸಿಲು ಕೋಲು, ಆಕೆ ಅತ್ತದ್ದು, ಅಕ್ಷರ ಸಖಿ, ಅಮೆರಿಕ, ಒದ್ದೆ ಕಣ್ಣಿನ ಬಾಗಿನ, ಕಿಟಕಿ, ಮಾತಿಗೆ ಮಾತೆಂದು, ನಿಮ್ಮಷ್ಟು ಎತ್ತರ, ಕನ್ನಡಿ, ನಿರಪೇಕ್ಷೆ, ಉರಿವ ನಕ್ಷತ್ರಗಳು, ವಸುಂಧರೆ, ಉಗುರುಗಳು, ಅಪರಿಚಿತ ಆಕಾಶ, ಅವರು, ಚಿತ್ತಾರದ ಕೌದಿ, ಅಡವಿಟ್ಟು ಲೇಖನಿ, ಗೂಡಿನ ಜೋಗುಳ, ಹಿಮದ ಹೂವುಗಳು, ಕಾಡು ಕುದುರೆಯನೇರಿ, ಕಳಶ ಹೊತ್ತ ಹುಡುಗಿ, ಕಣ್ಣ ಕೊನೆಯ ಕಿರುಹನಿ, ಕುಶಲವೇ, ನಾನಿಲ್ಲ, ನೀಲಿ ಕಂದೀಲು, ಪ್ರೀತಿಯೊಂದಿದ್ದರೆ, ಸಪ್ತ ವರ್ಣಗಳು, ಸ್ಪರ್ಶ, ಸ್ವರ್ಗದಂಚಿನ ನರಕ, ಅಂಗೈ ಮರೆಯ ದೀಪ, ನನ್ನ ಎದೆಯ ಚಂದಿರ, ಜೀವ ವಾಹಿನಿ, ಮಣ್ಣಿನ ಹಣತೆ, ಮೆಲು ಹೆಜ್ಜೆಯ ಮಾರುತವೇ, ಮೇಣದ ಬತ್ತಿಯ ಬೆಳಕು, ನದಿಯಾದಳು, ರಕ್ತದೋಕುಳಿಯ ಪಾಲುದಾರರು ಎಂಬ 78 ಕವಿತೆಗಳು ಸಂಕಲನಗೊಂಡಿವೆ.

About the Author

ಬಾನು ಮುಷ್ತಾಕ್
(03 April 1954)

ಹಾಸನದಲ್ಲಿ ನೆಲೆಸಿರುವ ಬಾನು ಮುಷ್ತಾಕ್ ಅವರು ಲೇಖಕಿಯಾಗಿ, ಪತ್ರಕರ್ತೆಯಾಗಿ, ನ್ಯಾಯವಾದಿಯಾಗಿ ಕ್ರಿಯಾಶೀಲರಾಗಿದ್ದಾರೆ. ಐದು ಕಥಾ ಸಂಕಲನ ಮತ್ತು ಒಂದು ಪ್ರಬಂಧ ಸಂಕಲನ ಪ್ರಕಟಿಸಿರುವ ಅವರು ಕೌಟುಂಬಿಕ ತಡೆ ಕಾಯ್ದೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಫಾರಸಿ ಕೃತಿ ತಾರೀಖ್ -ಎ-ಫೆರಿಸ್ತಾವನ್ನು ಉರ್ದುವಿನಿಂದ ಕನ್ನಡೀಕರಿಸಿದ್ದಾರೆ. ಕರಿನಾಗರಗಳು’ ಕತೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿ ಅವರು  ’ಹಸೀನಾ’ ಚಿತ್ರ ನಿರ್ದೇಶಿಸಿದ್ದರು. ಬಾನು ಅವರ ಅನೇಕ ಕತೆಗಳು ಹಿಂದಿ, ಇಂಗ್ಲಿಷ್, ಉರ್ದು, ಮಲಯಾಳಂ, ತಮಿಳು ಭಾಷೆಗಳಿಗೆ ಅನುವಾದಗೊಂಡಿವೆ. 1954 ಏಪ್ರಿಲ್ 03 ರಂದು ಹಾಸನ ಜಿಲ್ಲೆಯ ವಲಭಬಾಯಿಯಲ್ಲಿ ಜನಿಸಿದರು. ಅವರು ಬರೆದ 'ಬೆಂಕಿಮಳೆ' ಕತೆ ಹಸೀನ ...

READ MORE

Related Books