ಜಾಡಮಾಲಿ ಇಲ್ಲದ ನಗರ- ಸಿದ್ಧಾರೂಢ ಕಟ್ಟಿಮನಿ ಅವರ ಕವನ ಸಂಕಲನ. ಈ ಸಂಕಲನದಲ್ಲಿ ಸಮಾಜದ ಆಗುಹೋಗುಗಳಿಗೆ ಮಿಡಿವ ಕವಿ ಮನವಿದೆ. ಬಾಹ್ಯ ಶುಚಿಯನ್ನು ಕಾಪಾಡಲು ಜಾಡು ಒಂದೇ ಸಾಲದು, ಜಾಡು ಹಿಡಿದ ಅನೇಕ ಕ್ರಿಯಾಶೀಲ ಕೈಗಳುಬೇಕು ಎಂಬುದು ಕವಿಯ ತುಡಿತ. ನಾವಿರುವ ಸುತ್ತ ಮುತ್ತ ನಿರ್ಮಲವಾಗಿಟ್ಟುಕೊಳ್ಳಬೇಕಾದರೆ ಅಧಿಕಾರ ಅಂತಸ್ತು ಮರೆತು ಕಾರ್ಯಪ್ರವೃತ್ತರಾಗಬೇಕು. ಅಂದಾಗ ಮಾತ್ರ ಮಹಾತ್ಮ ಗಾಂಧೀಜಿಯವರ ಕನಸಿನ ಭಾರತ ನನಸಾಗುವುದು ಎನ್ನುತ್ತಾರೆ ಕವಿ. ಜಾಡಮಾಲಿ ಇಲ್ಲದ ನಗರ ಯೋಧನಿಲ್ಲದ ದೇಶದಂತೆ ಎಂದು ಜಾಡಮಾಲಿಗಳ ಕಾರ್ಯಕ್ಷಮತೆಯ ಬಗ್ಗೆ ತಮ್ಮ ಕವಿತೆಗಳಲ್ಲಿ ಪ್ರಶಂಸಿಸಿದ್ದಾರೆ.
ಸಿದ್ಧಾರೂಢ ಕಟ್ಟಿಮನಿ ಅವರು ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ಜನಿಸಿದರು. ತಂದೆ- ಶ್ರೀ ಗುರುನಾಥ ಸಿ ಕಟ್ಟಿಮನಿ ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ- ಶ್ರೀಮತಿ ಶಕುಂತಲಾ ಗು ಕಟ್ಟಿಮನಿ. ಸಿದ್ಧಾರೂಢ ಕಟ್ಟಿಮನಿ ಅವರು ಇಂಡಿಯಲ್ಲಿ ಪ್ರಾಥಮಿಕ ಶಿಕ್ಷಣ, ಫ್ರೌಢ ಶಿಕ್ಷಣ ಮುಗಿಸಿದರು. ಮ್ಯಾಟ್ರಿಕ್ ನಂತರ ಸಾಹಿತ್ಯ ಕೃಷಿ ಆರಂಭವಾಗಿತು. ಪದವಿ ಪೂರ್ವ ಶಿಕ್ಷಣ(ವಿಜ್ಞಾನ), ಸಿಂದಗಿಯಲ್ಲಿ ಪದವಿ(ವಿಜ್ಞಾನ)ಪೂರ್ಣಗೊಳಿಸಿದರು. ಆನಂತರ ಪ್ರೌಢ ಶಿಕ್ಷಕ ತರಬೇತಿ ಪಡೆದು ಪ್ರೌಢ ಶಿಕ್ಷಕ ಸೇವೆ ಆರಂಭಿಸಿದರು. ಪ್ರಥಮ ದರ್ಜೆ ಸಹಾಯಕರಾಗಿ ಹುದ್ದೆಗೆ ನೇಮಕವಾದರು. ಬಾಗಲಕೋಟೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಬೋಧಕೇತರ ವೃತ್ತಿ ಪ್ರಾರಂಭಿಸಿದರು. ...
READ MORE