ಲೇಖಕಿ ಎಚ್ ಎಸ್ ಮುಕ್ತಾಯಕ್ಕ ಅವರ ಕವನ ಸಂಕಲನ ‘ಕಭೀ ಕಭೀ’. ಕೃತಿಗೆ ಬೆನ್ನುಡಿ ಬರೆದ ನಾಗಭೂಷಣಸ್ವಾಮಿ, ‘ ಇಲ್ಲಿನ ಕವಿತೆಗಳಲ್ಲಿ ಭಾವವೇ ಮುಖ್ಯ. ಈ ಭಾವಗಳಾದರೋ ನೆನಪಿನಲ್ಲಿ ಬೇರುಬಿಟ್ಟಿರುವ ಭಾವಗಳು. ಆ ನೆನಪುಗಳಾದರೋ ನೋವಿನ ನೆನಪುಗಳು. ನೋವಿನ ನೆನಪು ಮೂಡಿಸಿದ ಭಾವಕ್ಕೆ ಮಾತಿನ ರೂಪುಕೊಟ್ಟು ಬಿಡುಗಡೆ ಪಡೆಯುವ ಆಸೆ ಈ ಕವಿತೆಗಳಿಗೆ ಮೂಲಕಾರಣವಾಗಿದೆ ...... ಜಗತ್ತಿನ ಎಲ್ಲ ಮನುಷ್ಯರಲ್ಲೂ ಇರುವ ಒಂಟಿತನದ ದುಗಡವನ್ನು ಕವಿ ತನ್ನೊಬ್ಬನದೇ ವಿಶಿಷ್ಟವಾದ ಒಂಟಿತನವನ್ನಾಗಿ ಕಲ್ಪಿಸಿಕೊಂಡು ಅದನ್ನು ಮೀರುವ ದಾರಿ ಕಂಡು ಕೊಂಡಾಗ ಪ್ರವಾದಿ, ಸಂತ, ಪೂರ್ಣಜ್ಞ ಆಗಿಬಿಡುತ್ತಾನೆ. ಮುಕ್ತಾಯಕ್ಕನವರ ಕವಿತೆಗಳು ನಮ್ಮ ನಿಮ್ಮಂಥ ಸಾಮಾನ್ಯರಲ್ಲಿರುವ ಒಂಟಿತನದ, ಯಾರೂ ನಮ್ಮನ್ನು ಅರಿಯಲಾರರೆಂಬ ನೋವಿನ ಭಾವಗಳಿಗೆ ದನಿಕೊಡುತ್ತವೆ. ಆದ್ದರಿಂದಲೇ ಖ್ಯಾಲ್ ಗಳಾಗಿ, ಕೊಂಚ ಹೊತ್ತಾದರೂ ನಮ್ಮ ಮನಸ್ಸಿಗೆ ತಟ್ಟುತ್ತವೆ.’ ಎಂದು ಪ್ರಶಂಸಿದ್ದಾರೆ.
ಎಚ್.ಎಸ್. ಮುಕ್ತಾಯಕ್ಕ ಅವರು 1954 ಜನವರಿ 28ರಂದು ಜನಿಸಿದರು. ಇವರು ಬರೆದ ಪ್ರಮುಖ ಕೃತಿಗಳೆಂದರೆ ನಾನು ಮತ್ತು ಅವನು, ನೀವು ಕಾಣಿರೇ ನೀವು ಕಾಣಿರೇ, ಡಕ್ಕೆಯ ಬೊಮ್ಮಣ್ಣ, ಶಿವಶರಣೆ ಮುಕ್ತಾಯಕ್ಕ, ಕಭೀ ಕಭೀ ಮುಂತಾದವು. ಇವ ನೀವು ಕಾಣಿರೇ ನೀವು ಕಾಣಿರೇ ಕವನ ಸಂಕಲನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ಮಮ್ಮ ಹೆಗ್ಗಡೆ ದತ್ತಿ ನಿಧಿ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ. ...
READ MORE