ದುವಾಕ್ಕೆ ಎರಡೂ ಕೈ ಎತ್ತಿ
ಬೇಡುವಾಗ
ಒಳಗೇ ಕಣ್ಣೀರಾಗುತ್ತೇನೆ.
ಇವರಿಗೆ ಗೊತ್ತು...!
ಕ್ಷಮಿಸ ಬೇಡ... ಶಿಕ್ಚಿಸು
ತಾಯಿ-ನಾಡು-ನುಡಿ-ಅನ್ನ
ವಿಷ ಮಾಡೋ
ಮನಸ್ಸುಗಳ ಬರ್ಬಾದ್ ಮಾಡು!
ಹೀಗೆ ಮಾನವೀಯ ಅಂಶಗಳನ್ನು ಹೊತ್ತ ಕವಿತೆಗಳನ್ನು ಕೊಟ್ಟವರು
ಸಂತೆಬೆನ್ನೂರು ಫೈಜ್ನಟ್ರಾಜ್. ಅವರ ಲೇಖನಿ ಸದಾ ಸಮಾಜಮುಖಿಯಾಗಿಯೇ ಇರುತ್ತದೆ. ಬುದ್ಧನಾಗ ಹೊರಟು ತಮ್ಮ ಎರಡನೇ ಕವನ ಸಂಕಲನ.
ಗೆಳೆಯ ನಟರಾಜ್ ಅವರ ಅಕಾಲಿಕ ಮರಣ ಸೈಯದ್ ಫೈಜುಲ್ಲಾ ಅವರಿಗೆ ಅರಗಿಸಿಕೊಳ್ಳಲಾಗಲೇ ಇಲ್ಲ. ಮಿತ್ರ ತನ್ನೊಂದಿಗೆ ಸದಾ ಇರಬೇಕೆಂಬ ಹಂಬಲ. ಪರಿಣಾಮ ತನ್ನ ಹೆಸರಿಗೆ ಗೆಳೆಯನ ಹೆಸರನ್ನು ಸೇರಿಸಿಕೊಂಡರು. ಸಂತೆಬೆನ್ನೂರು ಫೈಜ್ನಟ್ರಾಜ್ ಎಂದು ಬದಲಾದರು. ಬಹುಶಃ ನಾಡಿನ ಪತ್ರಿಕೆಗಳನ್ನು ನಿಯತಕಾಲಿಕಗಳನ್ನು ನಿರಂತರ ಓದುವವರಿಗೆ ಫೈಜ್ನಟ್ರಾಜ್ ಹೆಸರು ಚಿರಪರಿಚಿತ. ಅವರ ಹೆಸರು ನಾಡಿನ ಯಾವುದಾದರೂ ಪತ್ರಿಕೆಯಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಹಾಗೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಲೇ ಇರುವ ನಿರಂತರತೆ ಯನ್ನು ಅವರು ಕಾಯ್ದುಕೊಂಡಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿಯ ಸಂತೆಬೆನ್ನೂರು ಗ್ರಾಮದಲ್ಲಿ ಜನನ. ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕರು. ’ಎದೆಯೊಳಗಣ ತಲ್ಲಣ’, ...
READ MORE