ಕಮಲನಾಭ ವಿಠಲ ಅಂಕಿತ ನಾಮವುಳ್ಳ ರಚನೆ ಮಹಾರಾಷ್ಟ್ರದಲ್ಲಿ ನೆಲೆಸಿದ ಕನ್ನಡ ವಿಠಲನಿಗೆ ಸಂಬಂಧಿಸಿದ ಬಹಳ ಅಪೂರ್ವವಾದ ೫೮ ರಚನೆಗಳನ್ನು ಇಲ್ಲಿ ಕಲೆಹಾಕಲಾಗಿದ್ದು ಕನ್ನಡದ ಕವಿಗಳು ಪಾಂಡುರಂಗನ ವಿಠಲನನ್ನುಪರಿಕಲ್ಪಿಸಿದ ಬಗೆಗಳು ಇಲ್ಲಿ ವಿವರಿಸಲಾಗಿದೆ.ಮಹಾರಾಷ್ಟ್ರದಲ್ಲಿರುವ ಕನ್ನಡ ವಿಠಲನ ಅನನ್ಯತೆಯನ್ನು ಕನ್ನಡದಲ್ಲಿ ಕಂಡುಕೊಳ್ಳುವ ಒಂದು ಮುಖ್ಯವಾದ ಪ್ರಯತ್ನವು ಇಲ್ಲಿದೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ: ವಿಜಯವಿಠಲ, ಭೂಪತಿವಿಠಲ, ಜಗನ್ನಾಥ ವಿಠಲ ಅಂಕಿತ ನಾಮವುಳ್ಳ ರಚನೆ , ಗುರುಗೋವಿಂದ ವಿಠಲ, ಗೋಪಾಲ ವಿಠಲ, ಗೋಪಾಲಕೃಷ್ಣವಿಠಲ, ಪುರಂದರ ವಿಠಲ ಅಂಕಿತ ನಾಮವುಳ್ಳ ರಚನೆ , ಶ್ರೀಶಕೇಶವ, ಭೀಮೇಶಕೃಷ್ಣ, ಶ್ರೀಪತಿ ವಿಠಲ, ಶ್ರೀಪ್ರಾಣೇಶ ವಿಠಲ ಅಂಕಿತ ನಾಮವುಳ್ಳ ರಚನೆ ,ಪ್ರಸನ್ನ ಶ್ರೀನಿವಾಸ ಮುಂತಾದವು.
ಎ.ವಿ. ನಾವಡ ಅವರು 1946 ಏಪ್ರಿಲ್ 28ರಲ್ಲಿ ಮಂಗಳೂರು ಸಮೀಪದ ಕೋಟೆಕಾರು ಎಂಬಲ್ಲಿ ಜನಿಸಿದರು. ತಂದೆ ಕವಿ ಅಮ್ಮೆಂಬಳ ಶಂಕರನಾರಾಯಣ ನಾವಡ, ತಾಯಿ ಪಾರ್ವತಿ. ಮಂಗಳೂರಿನ ಸಂತ ಎಲೋಷಿಯಸ್ ಕಾಲೇಜಿನಲ್ಲಿ ಪದವಿಯನ್ನೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಪದವಿಯನ್ನೂ ಪಡೆದರು. ಕುಂದಾಪುರದ ಭಂಡಾರ್‌ಕರ್ಸ್ ಕಾಲೇಜಿನಲ್ಲಿ 1970ರಿಂದ-94ರವರೆಗೆ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ 24 ವರ್ಷ ಸೇವೆ ಸಲ್ಲಿಸಿದರು. 1994ರಿಂದ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ, ಪುರಂದರದಾಸ ಅಧ್ಯಯನ ಪೀಠದ ಅಧ್ಯಕ್ಷರಾಗಿ, ಉಡುಪಿಯ ಎಂ.ಜಿ.ಎಂ. ಕಾಲೇಜಿನ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದಲ್ಲಿ ಸಂಶೋಧಕರಾಗಿ, ಉಡುಪಿಯ ಗೋವಿಂದಪೈ ಸಂಶೋಧನ ಕೇಂದ್ರದ ...
READ MORE